'ಈಸೂರು ದಂಗೆ'ಗಾಗಿ ಒಂದಾದ ದೊಡ್ಮನೆ ಹುಡುಗರು

By Suneetha

ಗಾಂಧಿನಗರದ ಮಂದಿಯ ಬಹುದಿನಗಳ ನಂತರದ ಕನಸು ಈಡೇರುತ್ತಿದೆ, ಅದೇನಪ್ಪಾ ಅಂದ್ರೆ ದೊಡ್ಮನೆ ಹುಡುಗರು ರಿಯಲ್ ಆಗಿ ಮಾತ್ರವಲ್ಲದೆ ರೀಲ್ ನಲ್ಲೂ ಒಂದಾಗಲಿದ್ದಾರೆ, ಅಲ್ಲಿಗೆ ಅಭಿಮಾನಿಗಳ ಬಹುದೊಡ್ಡ ಕನಸು ಈಡೇರಿದಂತಾಗುತ್ತದೆ.

ಅಂದಹಾಗೆ ಖ್ಯಾತ ಫೈಟ್ ಮಾಸ್ಟರ್ ರವಿ ವರ್ಮಾ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರವೊಂದರಲ್ಲಿ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಈ ಮೊದಲೇ ಸುದ್ದಿಯಾಗಿತ್ತು, ಮಾತ್ರವಲ್ಲದೇ ರವಿವರ್ಮಾ ಅವರು ಸ್ಕ್ರಿಪ್ಟ್ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

Shiva, Raghavendra And Puneeth Rajkumar To Share Onscreen Space In 'Esooru Dange'

ಇದೀಗ ಗಾಂಧಿನಗರದ ಲೇಟೆಸ್ಟ್ ಮಾಹಿತಿ ಪ್ರಕಾರ ರವಿವರ್ಮಾ ಅವರ ನಿರ್ದೇಶನದ 'ಈಸೂರು ದಂಗೆ' ಚಿತ್ರದಲ್ಲಿ ದೊಡ್ಮನೆ ಹುಡುಗರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

1942 ರಲ್ಲಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನಿಯರ ಕಥೆಯನ್ನಾಧರಿಸಿದ 'ಈಸೂರು ದಂಗೆ' ಕನ್ನಡಗರಿಗೆ ಇಷ್ಟವಾಗಬಹುದು ಎಂಬುದು ನಿರ್ದೇಶಕರ ಅಂಬೋಣ.

ಈಗಾಗಲೇ 'ಈಸೂರು ದಂಗೆ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಶಿವಣ್ಣ ಹುಟ್ಟುಹಬ್ಬ(ಜುಲೈ 12) ದಂದು ಬಿಡುಗಡೆ ಮಾಡಿದ್ದು, ಅಂತೂ ಇಂತೂ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 3-4 ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೂ ಡಾ.ರಾಜ್ ಕುಡಿಗಳು ಹೇಳುವ ಪ್ರಕಾರ ಚಿತ್ರದಲ್ಲಿ ಮೂವರು ಸಹೋದರರಿಗೂ ಸಮಾನವಾದ ಪಾತ್ರವಿದೆಯಂತೆ.

ಒಟ್ನಲ್ಲಿ ಅಭಿಮಾನಿಗಳ ಹಾಗೂ ಪ್ರೇಕ್ಷಕ ವರ್ಗದವರ ಬಹುದಿನಗಳ ಕನಸು ಈಡೇರುತ್ತಿದೆ ಅಂತಾಯ್ತು. ಇನ್ನೂ ಚಿತ್ರದ ಹೆಚ್ಚಿನ ಅಪ್ಡೇಟ್ಸ್ ಗಾಗಿ ಫಿಲ್ಮಿಬೀಟ್ ಕನ್ನಡ ನೋಡುತ್ತಿರಿ.

More from Filmibeat

English summary
Its a dream come true for Kannada audiences to see Rajkumar brothers acting together on big screens. Now, the lastest reports says that, excluding Ravi Verma's directorial debut, Rajkumar brothers; Shiva, Raghavendra, and Puneeth will be sharing onscreen space in the upcoming movie Esooru Dange.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X