ಶಿವಣ್ಣ ಹುಟ್ಟುಹಬ್ಬಕ್ಕೆ ಸೆಲೆಬ್ರಿಟಿಗಳ ಶುಭಾಶಯ: ಯಾರ್ಯಾರು ಹೇಗೆ ವಿಶ್ ಮಾಡಿದ್ದಾರೆ?

ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ 58 ನೇ ಹುಟ್ಟುಹಬ್ಬ ಇಂದು. ಕೊರೊನಾ ಕಾರಣಕ್ಕೆ ಶಿವಣ್ಣ ಅವರು ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ.

Recommended Video

ನಿಮ್ಮ ಜೊತೆ ಮತ್ತಷ್ಟು ಸಿನಿಮಾ ಮಾಡಬೇಕು ಅಂತ ಪ್ರಾರ್ಥಿಸುತ್ತೇನೆ | Shiva Rajkumar | Vasishta N. Simha

ಸಿನಿಪ್ರೇಮಿಗಳು ಮಾತ್ರದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿರುವ ಎಷ್ಟೋ ಮಂದಿ ಶಿವರಾಜ್ ಕುಮಾರ್ ಅಭಿಮಾನಿಗಳೇ ಆಗಿದ್ದಾರೆ. ಅವರೂ ಸಹ ಶಿವಣ್ಣ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಅಜಾತ ಶತ್ರು ಶಿವರಾಜ್ ಕುಮಾರ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಸಹ ಗೆಳೆಯರಿದ್ದಾರೆ. ಬೇರೆ ರಾಜ್ಯದ ಸಿನಿಮಾ ಪ್ರಮುಖರು ಸಹ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಯಾರ್ಯಾರು ಹೇಗೆ ವಿಶ್ ಮಾಡಿದ್ದಾರೆ ಎಂದು ನೋಡುವ ಬನ್ನಿ.

ಪುನೀತ್ ರಾಜ್‌ಕುಮಾರ್ ಶುಭಾಶಯ ಇದು

ಪುನೀತ್ ರಾಜ್‌ಕುಮಾರ್ ಶುಭಾಶಯ ಇದು

ಶಿವರಾಜ್ ಕುಮಾರ್ ಕಿರಿಯ ಸಹೋದರ ಪುನೀತ್ ರಾಜ್‌ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ಶೀವರಾಜ್‌ ಕುಮಾರ್ ಅವರು ಸಿನಿಮಾ ರಂಗದಲ್ಲಿ ಬೆಳೆದು ಬಂದ ಚಿತ್ರಗಳನ್ನು ಹಂಚಿಕೊಂಡು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ 'ಹ್ಯಾಪಿ ಬರ್ಥ್‌ಡೇ ನಮ್ಮ ಶಿವಣ್ಣ' ಎಂದು ಬರೆದುಕೊಂಡಿದ್ದಾರೆ.

ಸೂರ್ಯಾ ವಿಶ್ ಮಾಡಿದ್ದು ಹೀಗೆ

ಸೂರ್ಯಾ ವಿಶ್ ಮಾಡಿದ್ದು ಹೀಗೆ

ತಮಿಳಿನ ಖ್ಯಾತ ನಟ ಸೂರ್ಯಾ ಸಹ ಶಿವಣ್ಣ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಜೊತೆಗೆ ಧನಂಜಯ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ಹೊಸ ಚಿತ್ರದ ಘೋಷಣೆ ಸಹ ಅವರು ಮಾಡಿದ್ದಾರೆ. ಈ ಚಿತ್ರವನ್ನು ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶಿಸಲಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್ ಶುಭಾಶಯ

ರಾಘವೇಂದ್ರ ರಾಜ್‌ಕುಮಾರ್ ಶುಭಾಶಯ

ನಟ, ಶಿವರಾಜ್ ಕುಮಾರ್ ಸಹೋದರ ರಾಘವೇಂದ್ರ ರಾಜ್‌ಕುಮಾರ್ ಅವರೂ ಸಹ ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಟ್ವಿಟ್ಟರ್‌ನಲ್ಲಿ ಶುಭ ಕೋರಿದ್ದಾರೆ. 'ಹ್ಯಾಪಿ ಬರ್ಥ್‌ಡೇ ಶಿವು' ಎಂದಿರುವ ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್‌ ಕುಮಾರ್ ಅವರ ಕೆಲವು ಅಪರೂಪದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಶಿವಣ್ಣ ನನಗೆ ಅಣ್ಣನಾಗಲಿ: ಜಗ್ಗೇಶ್

ಶಿವಣ್ಣ ನನಗೆ ಅಣ್ಣನಾಗಲಿ: ಜಗ್ಗೇಶ್

ರಾಜ್‌ಕುಮಾರ್ ಕುಟುಂಬಕ್ಕೆ ಬಹು ಆಪ್ತವಾಗಿರುವ ನಟ ಜಗ್ಗೇಶ್ ಸಹ ಶಿವಣ್ಣಗೆ ಶುಭಾಶಯ ಹೇಳಿದ್ದು, ಅವರೊಂದಿಗಿನ ಆಪ್ತ ಕ್ಷಣದ ಚಿತ್ರ ಹಂಚಿಕೊಂಡು ಕನ್ನಡಿಗರ ರಂಜಿಸುತ್ತಾ ನೂರ್ಕಾಲ ಬಾಳಿ ಎಂದಿದ್ದಾರೆ. ಅಲ್ಲದೆ ಮುಂದಿನ ಜನ್ಮದಲ್ಲಿ ಶಿವಣ್ಣ ನನಗೆ ಅಣ್ಣನಾಗಲಿ ಎಂದಿದ್ದಾರೆ ಜಗ್ಗೇಶ್.

More from Filmibeat

English summary
Shiva Rajkumar celebrating 58th birthday. Many celebrities wished him on social media today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X