'ನಾಗರಹಾವು' ಸಿನಿಮಾ ನೋಡಿ ಪುಟ್ಟಣ್ಣ ಬಳಿ ಶಿವಣ್ಣ ಹೇಳಿದ್ದೇನು.?

By Bharath Kumar

Recommended Video

Nagarahaavu 2018 : ನಾಗರಹಾವು ಸಿನಿಮಾ ನೋಡಿ ಶಿವಣ್ಣ ಹೇಳಿದ್ದ ಮಾತು ನಿಜ ಆಗಿತ್ತು...!!! | Oneindia Kannada

ಡಾ ವಿಷ್ಣುವರ್ಧನ್ ನಾಯಕನಾಗಿ ಅಭಿನಯಿಸಿದ್ದ 'ನಾಗರಹಾವು' ಸಿನಿಮಾ ಸಿನಿಮಾಸ್ಕೋಪ್ ನಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ. ಹೊಸ ರೂಪದ ದೃಶ್ಯ ಮತ್ತು ಆಡಿಯೋ ಬಳಸಿ ರಿಲೀಸ್ ಮಾಡಲಾಗುತ್ತಿದೆ.

ಪುಟ್ಟಣ್ಣ ಕಣಗಲ್ ನಿರ್ದೇಶನ ಮಾಡಿ, ವಿಷ್ಣು, ಅಂಬರೀಶ್, ಆರತಿ, ಆಶ್ವತ್ಥ್, ಲೀಲಾವತಿ, ಅಭಿನಯಿಸಿದ್ದ ಎವರ್ ಗ್ರೀನ್ ಸಿನಿಮಾವನ್ನ ಕೇವಲ ಅಭಿಮಾನಿಗಳು ಮಾತ್ರವಲ್ಲ, ಸ್ಯಾಂಡಲ್ ವುಡ್ ಸಿನಿತಾರೆಯರು ಕೂಡ ಕಾಯುತ್ತಿದ್ದಾರೆ.

ವಿಷ್ಣುವರ್ಧನ್ ಜೊತೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಕೂಡ ಇದೇ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಇಂತಹ ಅಂಬಿ ಈಗ 'ಟಿಕೆಟ್ ತಗೊಂಡು ಈ ಸಿನಿಮಾ ನೋಡ್ತೀನಿ' ಎಂದಿದ್ದಾರೆ. ಇಂತಹ ಚಿತ್ರದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮಾತನಾಡಿದ್ದು, ನಾಗರಹಾವು ಯಾಕೆ ಅಷ್ಟೊಂದು ಇಷ್ಟ ಎಂದು ಹೇಳಿಕೊಂಡಿದ್ದಾರೆ. ಮುಂದೆ ಓದಿ.....

ಆಗ ನನಗೆ ಹನ್ನೊಂದು ವರ್ಷ ಆಗಿತ್ತು

ಆಗ ನನಗೆ ಹನ್ನೊಂದು ವರ್ಷ ಆಗಿತ್ತು

''ನಾಗರಹಾವು ಸಿನಿಮಾ ನೋಡಿದಾಗ ಬಹುಶಃ ನನಗೆ ಹನ್ನೊಂದು ವರ್ಷ ಇರಬಹುದು. ಪುಟ್ಟಣ್ಣ, ವೀರಾಸ್ವಾಮಿ, ಎಲ್ಲರೂ ಇದ್ದಾರೆ. ನಾನು ಆಗ ಸಿನಿಮಾ ನೋಡಿದ್ದೆ. ಅಲ್ಲಿವರೆಗೂ ಅಪ್ಪಾಜಿ ಸಿನಿಮಾಗಳು ಮಾತ್ರ ನೋಡ್ತಿದ್ವಿ. ಬಟ್, ಈ ಸಿನಿಮಾ ನೋಡಿದಾಗ, ಅಬ್ಬಾ ಯಾರೂ ಈ ಆಕ್ಟರ್, ಇಷ್ಟೊಂದು ಹ್ಯಾಂಡ್ ಸಮ್, ಇಷ್ಟೊಂದು ಎನರ್ಜಿ, ಲವಲವಿಕೆ, ಬಾಡಿ ಲಾಂಗ್ವೇಜ್ ಎಂದು ಆಶ್ಚರ್ಯದಿಂದ ನೋಡಿದ್ದೆ'' - ಶಿವರಾಜ್ ಕುಮಾರ್, ನಟ

ವಿಷ್ಣು ಸರ್ ಗೆ ನಾನು ಫ್ಯಾನ್ ಆಗೋದೆ

ವಿಷ್ಣು ಸರ್ ಗೆ ನಾನು ಫ್ಯಾನ್ ಆಗೋದೆ

''ಸಿನಿಮಾ ನೋಡಿ ಹೊರಗೆ ಬಂದಮೇಲೆ ಅಪ್ಪಣ್ಣ ಅವರ ಬಳಿ ಕೇಳಿದೆ ಯಾರು ಈ ಸಿನಿಮಾಗೆ ಡೈರೆಕ್ಟರ್ ಅಂತ. ಆಗ ಅವರ ಪುಟ್ಟಣ್ಣ ಅಂದ್ರು. ಪುಟ್ಟಣ್ಣ ಬಳಿ ಹೋಗಿ 'ಸರ್ ಈ ಸಿನಿಮಾ ಸೂಪರ್ ಹಿಟ್, ಸಿಲ್ವರ್ ಜೂಬ್ಲಿ. ಆ ಹೀರೋ ತುಂಬಾ ಚೆನ್ನಾಗಿ ಮಾಡಿದ್ದಾರೆ, ನನಗೆ ಸಿಕ್ಕಾಪಟ್ಟೆ ಇಷ್ಟವಾದ್ರು, ಐ ಲವ್ ಹಿಮ್ ಸರ್' ಅಂತ ಹೇಳಿದ್ದೆ'' - ಶಿವಣ್ಣ

ವಿಷ್ಣುವರ್ಧನ್ ಅತ್ಯದ್ಭುತ ನಟ

ವಿಷ್ಣುವರ್ಧನ್ ಅತ್ಯದ್ಭುತ ನಟ

''ವಿಷ್ಣು ಸರ್ ಅವರನ್ನ ಹಲವು ಅವತಾರಗಳಲ್ಲಿ ನೋಡಿದ್ದೀನಿ. ಅವರೊಬ್ಬ ಅದ್ಭುತ ನಟ. ಅದರಲ್ಲೂ ಮೊದಲ ಸಿನಿಮಾ ಅಂತೂ ಅತ್ಯದ್ಭುತ. ಆಗಲೇ ರಿವೇಂಜ್ ಕಥೆ ಹೊಂದಿತ್ತು. ಹಾವಿನ ದ್ವೇಷ ಹನ್ನೆರಡು ವರುಷ, ನನ್ನ ರೋಷ ನೂರು ವರುಷ. ಭಾವನೆ ಇತ್ತು. ಆಗಿನ ಸಮಯಕ್ಕೆ ಇದು ಒಂದೊಳ್ಳೆ ದೃಶ್ಯದ ಉಡುಗೊರೆಯಾಗಿತ್ತು''

ಪಾತ್ರಗಳು ಮರೆಯಲಾಗುವುದಿಲ್ಲ

ಪಾತ್ರಗಳು ಮರೆಯಲಾಗುವುದಿಲ್ಲ

''ಚಿತ್ರದಲ್ಲಿದ್ದ ಎರಡು ಲವ್ ಸ್ಟೋರಿ ತುಂಬಾ ಚೆನ್ನಾಗಿತ್ತು. ಆ ಕಡೆ ಅಲಮೇಲು, ಈ ಕಡೆ ಕ್ರಿಶ್ವಿಯನ್ ಹುಡುಗಿ ಜೊತೆ ಮತ್ತೊಂದು ಲವ್. ಚಾಮಯ್ಯ ಮೇಷ್ಟ್ರು, ಶಿವರಾಂ ಅವರು ಅಲಮೇಲು ಅಣ್ಣನ ಪಾತ್ರ, ಲೀಲಾವತಿ ಅವರ ಅಭಿನಯ, ಅಂಬರೀಶ್ ಅವರ ಜಲೀಲಾ ಪಾತ್ರ ಎಲ್ಲವೂ ಅಮೋಘ. ಅದಕ್ಕೆ ಇದನ್ನ ಕಲ್ಟ್ ಸಿನಿಮಾ ಎನ್ನೋದು''

ಒಂದಕ್ಕಿಂತ ಒಂದು ವಿಶೇಷ

ಒಂದಕ್ಕಿಂತ ಒಂದು ವಿಶೇಷ

''ಎಲ್ಲ ಹಾಡುಗಳು ಸೂಪರ್ ಆಗಿದೆ. ಹಾವಿನ ದ್ವೇಷ, ಬಾರೇ ಬಾರೇ, ಕಥೆ ಹೇಳುವೆ ನನ್ನ ಕಥೆ ಹೇಳುವೆ...ಎಲ್ಲಾ ಚೆನ್ನಾಗಿದೆ. ಇನ್ನು ಸೀನ್ ಅಂದ್ರೆ ಕ್ಲೈಮ್ಯಾಕ್ಸ. ನಾನು ಸಿನಿಮಾ ನೋಡಿ ಬಹುತೇಕ 30 ವರ್ಷ ಆಯಿತು. ಈಗಲೂ ಆ ಸಿನಿಮಾದ ದೃಶ್ಯಗಳು ಕಣ್ಮುಂದೆ ಬರುತ್ತೆ. ಚಿತ್ರದುರ್ಗದ ಇತಿಹಾಸ ಹೇಳುವ ಒಬ್ಬವ್ವನ ಹಾಡು ತುಂಬಾ ಅಟ್ರಾಕ್ಟ್ ಆಗಿದೆ.''

ಅಪ್ಪಾಜಿ ಕೂಡ ಇಷ್ಟಪಟ್ಟಿದ್ರು

ಅಪ್ಪಾಜಿ ಕೂಡ ಇಷ್ಟಪಟ್ಟಿದ್ರು

''ನಾಗರಹಾವು ಬಗ್ಗೆ ಅಪ್ಪಾಜಿ ಅವರು ತುಂಬಾ ಮಾತಾಡಿದ್ದಾರೆ. ಇಂಡಸ್ಟ್ರಿಗೆ ಯಾರೇ ಬಂದ್ರು ತುಂಬಾ ಖುಷಿ ಪಡ್ತಿದ್ರು. ಅವರಿಬ್ಬರ ಬಾಂಧವ್ಯ ಚೆನ್ನಾಗಿತ್ತು. ಅದಕ್ಕೆ ಅವರಿಬ್ಬರು ಗಂಧದಗುಡಿ ಸಿನಿಮಾ ಮಾಡಿದ್ದು. ಆಗಿನ ಕಲಾವಿದರ ಮಧ್ಯೆ ಇದ್ದ ಸಂಬಂಧ ಸೂಪರ್ ಬಿಡಿ. ಪ್ರತಿಯೊಬ್ಬರು ಇನ್ನೊಬ್ಬರ ಸಿನಿಮಾ ನೋಡಿ ಮೆಚ್ಚಿಕೊಳ್ತಿದ್ರು. ಎಲ್ಲರೂ ಫ್ಯಾಮಿಲಿ ರೀತಿ ಇರ್ತಿದ್ರು''.

ಅದಕ್ಕಿಂತ ಹೆಚ್ಚು ಕಿಕ್ ಈಗಿದೆ

ಅದಕ್ಕಿಂತ ಹೆಚ್ಚು ಕಿಕ್ ಈಗಿದೆ

''ಮೊದಲನೇ ಸಿನಿಮಾನೇ ಕಲ್ಟ್ ಸಿನಿಮಾ. ಎಲ್ಲರಿಗೂ ಸಿಗಲ್ಲ ಈ ಅದೃಷ್ಟ. ವಿಷ್ಣು ಸರ್ ಗೆ ಸಿಕ್ಕಿದೆ. ಆಗಿನ ಕಾಲದಲ್ಲೇ ಈ ಸಿನಿಮಾ ಎಷ್ಟು ಫಾರ್ವಡ್ ಆಗಿ ಮಾಡಿದ್ರು. ಈವಾಗ ಬರ್ತಿದೆ ಅಂದ್ರೆ ಈಗಿನವರು ಅಷ್ಟೇ ಕಿಕ್ ಕೊಡುತ್ತೆ. ನಾನು ಕಾಯ್ತಿದ್ದೀನಿ ಬಿಗ್ ಸ್ಕ್ರೀನ್ ನಲ್ಲಿ ನೋಡೋದಕ್ಕೆ. ನಾಗರಹಾವು ಈಗಲೂ ಅಷ್ಟೇ ಕ್ರೇಜ್ ಹುಟ್ಟುಹಾಕುತ್ತೆ.''

More from Filmibeat

English summary
Kannada actor shiva rajkumar spoke about dr vishnuvardhan's first movie 'nagarahavu'. the movie re releasing on july 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X