ಮೊದಲ ಸಿನಿಮಾದಲ್ಲಿಯೇ ಶಿವಣ್ಣನಿಗೆ ಆಕ್ಷನ್ ಹೇಳುವ ಅದೃಷ್ಟ!

ನಟ ಶಿವರಾಜ್ ಕುಮಾರ್ ಅವರಷ್ಟು ಬ್ಯುಸಿ ನಾಯಕ ನಟ ಕನ್ನಡ ಚಿತ್ರರಂಗದಲ್ಯಾರೂ ಇಲ್ಲ. 60ರ ವಯಸ್ಸಿನಲ್ಲೂ ಚಿರ ಯುವಕನ ಉತ್ಸಾಹ ಶಿವಣ್ಣನದ್ದು. ಒಂದರ ಹಿಂದೊಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಸಾಗುತ್ತಿದ್ದಾರೆ ಶಿವಣ್ಣ.

ಶಿವರಾಜ್ ನಟನೆಯ 'ಬೈರಾಗಿ' ಸಿನಿಮಾ ಬಿಡುಗಡೆ ಆಗಿ ಕೆಲವು ದಿನಗಳಷ್ಟೆ ಕಳೆದಿವೆ. ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಶಿವಣ್ಣ ಇನ್ನೊಂದು ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಅದೂ ಹೊಸ ನಿರ್ದೇಶಕನ ಸಿನಿಮಾಕ್ಕೆ!

ಜುಲೈ 12 ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ ಹುಟ್ಟುಹಬ್ಬ. ಈ ಸಮಯದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಘೋಷಣೆಯಾಗಿದೆ. ಮೊದಲ ಬಾರಿಗೆ ನಿರ್ದೇಶಕ ಆಗಲು ಹೊರಟಿರುವ ಕೊಟ್ರೇಶ್ ಈ ಸಿನಿಮಾ ನಿರ್ದೇಶಿಸಲಿದ್ದಾರೆ.

ಶಿವಣ್ಣ ಅಭಿನಯದ "ವಜ್ರಕಾಯ", " ಬಂಗಾರ s\o ಬಂಗಾರದ ಮನುಷ್ಯ" ಮುಂತಾದ ಚಿತ್ರಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೊಟ್ರೇಶ್ ಕೆಲಸ ಮಾಡಿದ್ದರು. ಈಗ ಶಿವಣ್ಣ ಅವರ ಸಿನಿಮಾ ಮೂಲಕವೇಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಸದ್ಯದಲ್ಲೇ ಚಿತ್ರೀಕರಣ ಆರಂಭ

ಸದ್ಯದಲ್ಲೇ ಚಿತ್ರೀಕರಣ ಆರಂಭ

''ಮೊದಲು ನಾನು ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳುಸುತ್ತೇನೆ. ಅವರು ನೂರುವರ್ಷ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ. ಅವರ ಅಭಿನಯದ ಕೆಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಈಗ ಅಂತಹ ಅದ್ಭುತ ನಟನ ಚಿತ್ರ ನಿರ್ದೇಶಿಸುತ್ತಿರುವುದು ನಿಜಕ್ಕೂ ನನ್ನ ಅದೃಷ್ಟ. ನನಗೆ ನಿರ್ದೇಶನ ಮಾಡಲು ಅವಕಾಶ ನೀಡಿರುವ ಶಿವಣ್ಣ ಹಾಗೂ ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಾಕಷ್ಟು ಶ್ರಮವಹಿಸುತ್ತೇನೆ. ಈಗ ಚಿತ್ರೀಕರಣ ನಡೆಸುವ ಸ್ಥಳಗಳ ಆಯ್ಕೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರ ಆರಂಭವಾಗುತ್ತದೆ'' ಎಂದು ನಿರ್ದೇಶಕ ಕೊಟ್ರೇಶ್ ಹೇಳಿದ್ದಾರೆ.

ಕೊಟ್ರೇಶಿಗೆ ಶುಭಾಶಯ ಹೇಳಿದ ಶಿವಣ್ಣ

ಕೊಟ್ರೇಶಿಗೆ ಶುಭಾಶಯ ಹೇಳಿದ ಶಿವಣ್ಣ

ನಾನು ಈ ಸಿನಿಮಾದಲ್ಲಿ ಅಭಿನಯಿಸಲು ಉತ್ಸುಕನಾಗಿದ್ದೇನೆ. ನಾನು ನಟಿಸಿರುವ ಮೂರು ಚಿತ್ರಗಳಲ್ಲಿ ಕೊಟ್ರೇಶ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಕೊಟ್ರೇಶ್ ಅವರಿಗೆ ಶುಭವಾಗಲಿ ಎಂದು ಸರಳವಾಗಿ ಶಿವಣ್ಣ, ನಿರ್ದೇಶಕ ಕೊಟ್ರೇಶ್‌ಗೆ ಹಾರೈಸಿದ್ದಾರೆ.

ಮಾಸ್ತಿ, ಕೊಟ್ರೇಶ್ ಹಾಗೂ ಅಭಿ ಚಿತ್ರಕಥೆ

ಮಾಸ್ತಿ, ಕೊಟ್ರೇಶ್ ಹಾಗೂ ಅಭಿ ಚಿತ್ರಕಥೆ

ಎ ಆರ್ ಕೆ ಪ್ರೊಡಕ್ಷನ್ ಮತ್ತು ರುಬಿನ್ ರಾಜ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಜನಪ್ರಿಯ ಸಂಭಾಷಣೆಕಾರ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಮಾಸ್ತಿ, ಕೊಟ್ರೇಶ್ ಹಾಗೂ ಅಭಿ ಚಿತ್ರಕಥೆ ಬರೆದಿರುವ ಈ ನೂತನ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ಸೋಹಿತ್ ನೀಲಮ್ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.

ಹಲವು ಸಿನಿಮಾಗಳು ಶಿವಣ್ಣನ ಕೈಯಲ್ಲಿವೆ

ಹಲವು ಸಿನಿಮಾಗಳು ಶಿವಣ್ಣನ ಕೈಯಲ್ಲಿವೆ

ಶಿವರಾಜ್ ಕುಮಾರ್ ಈಗಾಗಲೇ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಿವಣ್ಣ ಅಭಿನಯದ 'ನೀ ಸಿಗೊವರೆಗೆ' ಬಿಡುಗಡೆ ಆಗಲಿದೆ. ಹೋಮ್ ಪ್ರೊಡಕ್ಷನ್‌ನ ಮೊದಲ ಸಿನಿಮಾ 'ವೇದಾ'ದಲ್ಲಿಯೂ ನಟಿಸಿದ್ದು ಅದೂ ಸಹ ಬಿಡುಗಡೆ ಆಗಲಿದೆ. ಯೋಗರಾಜ್ ಭಟ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸುವವರಿದ್ದಾರೆ. ಅದರಲ್ಲಿ ಪ್ರಭುದೇವಾ ಸಹ ನಟಿಸುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಹೊಸ ಸಿನಿಮಾದಲ್ಲಿಯೂ ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ತೆಲುಗಿನ ನಿರ್ದೇಶನದ ರವಿ ಧುಲಿಪುಡಿ ನಿರ್ದೇಶನದ ಸಿನಿಮಾಕ್ಕೂ ಓಕೆ ಎಂದಿದ್ದಾರೆ. ಈಗ ಕೊಟ್ರೇಶಿಯ ಸಿನಿಮಾಕ್ಕೂ ಎಸ್ ಎಂದಿದ್ದಾರೆ.

More from Filmibeat

English summary
Shiva Rajkumar is acting in new director Kotreshi's movie. Shiva Rajkumar already acting in many movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X