ವಿಪರೀತ ಜ್ವರ: ಮಲ್ಯ ಆಸ್ಪತ್ರೆಗೆ ನಟ ಶಿವರಾಜ್ ಕುಮಾರ್ ದಾಖಲು

Recommended Video

ವಿಪರೀತ ಜ್ವರ: ಮಲ್ಯ ಆಸ್ಪತ್ರೆಗೆ ನಟ ಶಿವರಾಜ್ ಕುಮಾರ್ ದಾಖಲು | Filmibeat Kannada

ವಿಪರೀತ ಜ್ವರದಿಂದ ಬಳಲುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ರಾತ್ರಿಯೇ ಜ್ವರ ಕಾಣಿಸಿಕೊಂಡಿದ್ದು, ಇಂದು ಬೆಳಗ್ಗೆ ಶಿವಣ್ಣ ರನ್ನ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚೆಕಪ್ ಗಾಗಿ ಮಲ್ಯ ಆಸ್ಪತ್ರೆಗೆ ಬಂದ ಶಿವರಾಜ್ ಕುಮಾರ್ ಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಂಜೆ ವರೆಗೂ ಆಸ್ಪತ್ರೆಯಲ್ಲೇ ಶಿವಣ್ಣ ಚಿಕಿತ್ಸೆ ಪಡೆದು, ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.

ಶಿವಣ್ಣ ಜೊತೆ ಪತ್ನಿ ಗೀತಾ ಹಾಗೂ ಕುಟುಂಬಸ್ಥರು ಮಲ್ಯ ಆಸ್ಪತ್ರೆಯಲ್ಲಿದ್ದಾರೆ. ಶಿವರಾಜ್ ಕುಮಾರ್ ಅವರ ಆರೋಗ್ಯದ ಬಗ್ಗೆ ವೈದ್ಯರು ಇನ್ನಷ್ಟೇ ಮಾಹಿತಿ ಕೊಡಬೇಕಿದೆ.

Shiva Rajkumar admitted to Mallya Hospital due to high fever

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಅತ್ಯಂತ ಬಿಜಿ ನಟ. 'ಕವಚ' ಚಿತ್ರದ ಚಿತ್ರೀಕರಣ ಮುಗಿಸಿರುವ ಶಿವಣ್ಣ 'ರುಸ್ತುಮ್' ಚಿತ್ರದ ಶೂಟಿಂಗ್ ನಲ್ಲಿ ತೊಡಗಿದ್ದರು. ಮುಂದಿನ ತಿಂಗಳು ಶಿವಣ್ಣ ಅಭಿನಯದ ಹೊಸ ಸಿನಿಮಾ 'ಆನಂದ್' ಸೆಟ್ಟೇರಲಿದೆ.

ವಯಸ್ಸು 56 ಆದರೂ ಸದಾ ಹುರುಪಿನಿಂದ ಕಾಣಿಸಿಕೊಳ್ಳುವ ಶಿವರಾಜ್ ಕುಮಾರ್ ಸದ್ಯ ಅನಾರೋಗ್ಯಕ್ಕೀಡಾಗಿದ್ದಾರೆ. ಆದಷ್ಟು ಬೇಗ ಶಿವಣ್ಣ ಗುಣಮುಖರಾಗಲಿ ಅನ್ನೋದೇ ಅಭಿಮಾನಿಗಳ ಹಾಗೂ ನಮ್ಮ ಆಶಯ.

More from Filmibeat

English summary
Kannada Actor Shiva Rajkumar admitted to Mallya Hospital due to high fever.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X