ಶಿವಣ್ಣ 'ವೇದಾ' ಚಿತ್ರತಂಡದಿಂದ ಅಪ್‌ಡೇಟ್; ವಿಶೇಷ ಪೋಸ್ಟರ್ ರಿಲೀಸ್

ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ಈ ವರ್ಷ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಹಾಗೂ ಬೈರಾಗಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶಿವಣ್ಣ ಕೈನಲ್ಲಿ ಈಗಾಗಲೇ ಘೋಷಣೆಯಾಗಿರುವ ಏಳೆಂಟು ಚಿತ್ರಗಳಿದ್ದು, ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ನಿರ್ದೇಶಕ ಎ ಹರ್ಷ ಜತೆಗಿನ ಚಿತ್ರವೂ ಕೂಡ ಸೇರಿದೆ.

ಹೌದು, ಶಿವ ರಾಜ್‌ಕುಮಾರ್ ಹಾಗೂ ಎ ಹರ್ಷ ನಾಲ್ಕನೇ ಬಾರಿಗೆ ಒಂದಾಗುತ್ತಿದ್ದಾರೆ. ಮೊದಲಿಗೆ ಭಜರಂಗಿ ಮೂಲಕ ಕಮಾಲ್ ಮಾಡಿದ್ದ ಈ ಜೋಡಿ ವಜ್ರಕಾಯ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಇನ್ನು ಕಳೆದ ವರ್ಷವಷ್ಟೇ ಭಜರಂಗಿ 2 ಚಿತ್ರದ ಮೂಲಕ ಮೂರನೇ ಬಾರಿಗೆ ಕೈ ಜೋಡಿಸಿದ್ದ ಈ ಜೋಡಿ ಇದೀಗ ನಾಲ್ಕನೇ ಚಿತ್ರಕ್ಕಾಗಿ ಜೊತೆಯಾಗಿದ್ದು, ಈ ಚಿತ್ರಕ್ಕೆ ವೇದಾ ಎಂಬ ಟೈಟಲ್ ಇಡಲಾಗಿದೆ.

ಇನ್ನು ವೇದಾ ಚಿತ್ರದ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ನಿರ್ದೇಶಕ ಎ ಹರ್ಷ ಚಿತ್ರದ ಕೆಲ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದ್ದು, 1960ರ ಕಾಲ ಕೌರ್ಯದ ಕತೆಯನ್ನು ಹೇಳಲಿದೆ ಎಂಬ ಸುಳಿವನ್ನು ಚಿತ್ರದ ಅಡಿಬರಹ ಬಿಚ್ಚಿಟ್ಡಿದೆ.

Shiva Rajkumar and A Harsha combos Vedha movie special poster releasing on September 30

ಇನ್ನು ಈ ಚಿತ್ರ ಗೀತಾ ಶಿವ ರಾಜ್‌ಕುಮಾರ್ ಅವರ ಗೀತಾ ಪಿಕ್ಚರ್ಸ್ ಹಾಗೂ ಜೀ ಸ್ಟುಡಿಯೊಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದ್ದು, ನಾಳೆ ( ಸೆಪ್ಟೆಂಬರ್ 30 ) ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಹೊರಬೀಳಲಿದೆ. ಇನ್ನು ಚಿತ್ರದ ಕೆಲ ಪೋಸ್ಟರ್‌ಗಳು ಈಗಾಗಲೇ ಬಿಡುಗಡೆಗೊಂಡಿದ್ದರೂ ಸಹ ಚಿತ್ರತಂಡ ವಿಶೇಷ ಪೋಸ್ಟರ್ ಎಂದು ಪ್ರಕಟಿಸಿರುವುದನ್ನು ನೋಡಿ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಚಿತ್ರದಲ್ಲಿ ಶ್ವೇತಾ ಚೆಂಗಪ್ಪ ಅಭಿನಯಿಸಲಿದ್ದು, ಅರ್ಜುನ್ ಜನ್ಯಾ ಸಂಗೀತವಿರಲಿದೆ ಹಾಗೂ ಇದು ಶಿವ ರಾಜ್‌ಕುಮಾರ್ ಅಭಿನಯದ 125 ಸಿನಿಮಾವಾಗಿದೆ.

More from Filmibeat

English summary
Shiva Rajkumar and A Harsha combo's Vedha movie special poster releasing on September 30. Read on. ಸೆಪ್ಟೆಂಬರ್ 30ಕ್ಕೆ ಶಿವರಾಜ್‌ಕುಮಾರ್ ಹಾಗೂ ಎ ಹರ್ಷ ಕಾಂಬೊದ ವೇದಾ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಲಿದೆ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X