'ನಮ್ಮ ಬಾಸ್' ಅಂತ ಕಿತ್ತಾಡೋದು ಬಿಡಿ: ನಿಜಕ್ಕೂ 'ಬಾಸ್'ಗಳು ಹೇಗಿದ್ದಾರೆ ನೋಡಿ
Recommended Video

ಸೋಶಿಯಲ್ ಮೀಡಿಯಾದ ಪ್ರಭಾವ ಹೆಚ್ಚಾಗುತ್ತಿದ್ದಂತೆ 'ಸ್ಟಾರ್ ವಾರ್' ಕೂಡ ಜಾಸ್ತಿಯಾಗುತ್ತಲೇ ಇದೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸುದೀಪ್, ದರ್ಶನ್ ಮತ್ತು ಶಿವರಾಜ್ ಕುಮಾರ್, ಹೀಗೆ ಪರಸ್ಪರ ನಟರ ಅಭಿಮಾನಿಗಳು ಒಂದಲ್ಲ ಒಂದು ವಿಷ್ಯವನ್ನ ಕೆಣಕಿ ಕಿತ್ತಾಡ್ತಾರೆ.
ಅಂದು ಡಾ ರಾಜ್ ಕುಮಾರ್ ಮತ್ತು ತೂಗುದೀಪ ಶ್ರೀನಿವಾಸ ಅವರ ಆತ್ಮೀಯತೆ ಎಷ್ಟು ಚೆನ್ನಾಗಿತ್ತು. ಅದೇ ರೀತಿ ಇಂದು ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರ ಸಂಬಂಧವೂ ಇದೆ. ಆದ್ರೆ, ಇದನ್ನರಿಯದ ಕೆಲವು ಮಂದಿ ಅವರಿಬ್ಬರಿಗೆ ಆಗಲ್ಲ ಎಂಬ ಮಾತುಗಳನ್ನ ಹೇಳಿ ಅಭಿಮಾನಿಗಳ ಮನಸ್ತಾಪಕ್ಕೆ ಕಾರಣವಾಗಿದ್ದಾರೆ.
ಇದಕ್ಕೆಲ್ಲಾ ತಲೆಕೆಡಿಸಿಕೊಳ್ಲದ ಹ್ಯಾಟ್ರಿಕ್ ಹೀರೋ ಮತ್ತು ಚಾಲೆಂಜಿಂಗ್ ಸ್ಟಾರ್ ಇಬ್ಬರು ಪರಸ್ಪರ ಯೋಗಕ್ಷೇಮ ವಿಚಾರಿಸಿದ್ದಾರೆ. ತಮ್ಮಿಬ್ಬರ ನಡುವಿನ ಆತ್ಮೀಯತೆಯನ್ನ ಸಾರ್ವಜನಿಕವಾಗಿ ತೋರಿಸಿದ್ದಾರೆ. ಇವರಿಬ್ಬರನ್ನ ಹೀಗೆ ನೋಡಿದ್ಮೇಲೆ ಬಹುಶಃ 'ಸ್ಟಾರ್ ವಾರ್' ಅನ್ನೋ ಪದಕ್ಕೆ ಅರ್ಥವೇ ಇಲ್ಲ ಎನಿಸುತ್ತಿದೆ. ಅಷ್ಟಕ್ಕೂ, ದಚ್ಚು ಮತ್ತು ಶಿವಣ್ಣ ಈ ಆತ್ಮೀಯತೆ ಕಂಡು ಬಂದಿದ್ದು ಎಲ್ಲಿ.? ಮುಂದೆ ಓದಿ....

ಯುವ ನಟನನ್ನ ಪ್ರೋತ್ಸಾಹಿಸಲು ಬಂದಿದ್ದ ದಚ್ಚು-ಶಿವಣ್ಣ
ಶಶಿಕುಮಾರ್ ಅವರ ಮಗ ಆದಿತ್ಯ ಅಭಿನಯದ ಚೊಚ್ಚಲ ಚಿತ್ರಕ್ಕೆ ಶುಭ ಕೋರಲು ನಟ ದರ್ಶನ್ ಮತ್ತು ಶಿವರಾಜ್ ಕುಮಾರ್ ಇಬ್ಬರು ಈ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹೊಸಬರ ಸಿನಿಮಾಗಳಿಗೆ ಸದಾ ಬೆಂಬಲ ನೀಡರುವ ಇಬ್ಬರು, ಒಬ್ಬ ನಟನಿಗಾಗಿ ವೇದಿಕೆ ಹಂಚಿಕೊಂಡಿದ್ದು ವಿಶೇಷವೆನಿಸಿತ್ತು.

ಶಿವಣ್ಣನಿಗೆ ವಿಶೇಷ ಗೌರವ ನೀಡಿದ ದಾಸ
ಅಂದ್ಹಾಗೆ, ಶಶಿಕುಮಾರ್ ಮಗನ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಮೊದಲು ದರ್ಶನ್ ಬಂದಿದ್ದರು. ನಂತರ ಶಿವಣ್ಣ ಬಂದರು. ಈ ವೇಳೆ ಶಿವರಾಜ್ ಕುಮಾರ್ ಬಂದಿದ್ದನ್ನ ಗಮನಿಸಿದ ದಾಸ, ಎದ್ದು ನಿಂತ ಗೌರವ ನೀಡಿದರು. ಅಷ್ಟೇ ಅಲ್ಲದೇ ಶಿವಣ್ಣ ಅವರ ಬಳಿ ಆಶೀರ್ವಾದ ಪಡೆಯಲು ಮುಂದಾದರು. ಅಷ್ಟರಲ್ಲಿ ಶಿವಣ್ಣ, ದರ್ಶನ್ ಅವರನ್ನ ಅಪ್ಪಿಕೊಂಡರು. ಬಹುಶಃ ಒಂದು ಕ್ಷಣ ತಡವಾಗಿದ್ದರೂ ಶಿವಣ್ಣ ಅವರ ಕಾಲು ಮುಟ್ಟಿ ದರ್ಶನ್ ಆಶೀರ್ವಾದ ಪಡೆಯುತ್ತಿದ್ದರು ಎನ್ನುವುದ್ರಲ್ಲಿ ಯಾವುದೇ ಸಂಶಯವಿಲ್ಲ.

ಮಕ್ಕಳಾದ ಸ್ಟಾರ್ ನಟರು
ಸಿನಿಮಾ ಮುಹೂರ್ತದ ಪೂಜೆಯಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಂಡ ಶಿವಣ್ಣ ಮತ್ತು ದಾಸ, ನಂತರ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲು ಹೊರಟರು. ಈ ವೇಳೆ ದರ್ಶನ್ ಅವರು, ಶಿವಣ್ಣನನ್ನ ಹಿಂದೆಯಿಂದ ತಬ್ಬಿಕೊಂಡು ತುಂಬಾ ಆತ್ಮೀಯವಾಗಿ ನಡೆದುಕೊಂಡು ಹೋದರು. ಈ ಕ್ಷಣವನ್ನ ನೋಡುವುದೇ ಒಂದು ಚೆಂದವಾಗಿತ್ತು.

ದಾಸನನ್ನ ಎಳೆದ ಶಿವಣ್ಣ
ಇನ್ನು ಆದಿತ್ಯ ಮತ್ತು ನಟಿ ಅಪೂರ್ವ ಅವರ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲು ಶಿವಣ್ಣ ಮತ್ತು ದರ್ಶನ್ ಇಬ್ಬರು ಬಂದರು. ಆರಂಭದಲ್ಲಿ ದರ್ಶನ್ ಅವರು ಶಿವಣ್ಣ ಕ್ಲಾಪ್ ಮಾಡಲಿ ಅಂತ ಹಿಂದೆ ಸರಿದರು. ಆದ್ರೆ, ದರ್ಶನ್ ರನ್ನ ಬಿಡದ ಶಿವಣ್ಣ ಎಳೆದುಕೊಂಡು ಪಕ್ಕದಲ್ಲಿ ನಿಲ್ಲಿಸಿಕೊಂಡರು. ಇದು ಕೂಡ ನೋಡಲು ತುಂಬಾ ಖುಷಿಯಾಯಿತು.

ಒಟ್ಟಿಗೆ ಕ್ಲಾಪ್ ಮಾಡಿದ ಸೂಪರ್ ಸ್ಟಾರ್ಸ್
ನಂತರ ಶಿವರಾಜ್ ಕುಮಾರ್ ಮತ್ತು ದರ್ಶನ್ ಇಬ್ಬರು ಒಟ್ಟಿಗೆ ಆದಿತ್ಯ ಅವರ ಚೊಚ್ಚಲ ಸಿನಿಮಾ 'ಮೊಡವೆ'ಗೆ ಒಳ್ಳೆಯದಾಗಲಿ ಎಂದು ಕ್ಲಾಪ್ ಮಾಡಿ ಶುಭಕೋರಿದರು. ಶಶಿಕುಮಾರ್ ಅವರ ಪುತ್ರ ಆದಿತ್ಯ ಮತ್ತು ನಟಿ ಅಪೂರ್ವ ಅವರಿಗೆ ಆಲ್ ದಿ ಬೆಸ್ಟ ಹೇಳಿದರು.
ಮೊಡವೆ ಚಿತ್ರದ ಮುಹೂರ್ತ ಸಮಾರಂಭದ ಚಿತ್ರಗಳು

ರಾಘಣ್ಣ ಜೊತೆ ಕಾಲ ಕಳೆದ ದರ್ಶನ್
ಶಿವರಾಜ್ ಕುಮಾರ್ ಅವರು ಬರೋದಕ್ಕು ಮುಂಚೆ ನಟ ರಾಘವೇಂದ್ರ ರಾಜ್ ಕುಮಾರ್ ಅವರ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ದರ್ಶನ್ ಮತ್ತು ರಾಘಣ್ಣ ಪಕ್ಕ ಪಕ್ಕದಲ್ಲೇ ಕುಳಿತುಕೊಂಡು ಕೆಲ ಕಾಲ ಮಾತನಾಡಿಕೊಂಡರು. ನಂತರ ರಾಘಣ್ಣ ಒಂದು ಸೆಲ್ಫಿ ಫೋಟೋ ತಗೊಂಡ್ರು.

ಇದು ಆಗಾಗ ನಡೆಯಬೇಕು
ಈ ರೀತಿ ಸ್ಟಾರ್ ನಟರು ಸಮಾಗಮ ಆಗಾಗ ನಡೆಯುತ್ತಿರಬೇಕು. ಅವರ ಮಧ್ಯೆ ಏನೂ ಮನಸ್ತಾಪವಿಲ್ಲ ಎಂಬುದು ಈ ರೀತಿಯಾದರೂ ಹೇಳಿದರೇ, ಅವರ ಅಭಿಮಾನಿಗಳು ಸ್ವಲ್ಪ ಸುಮ್ಮನಾಗುತ್ತಾರೆ. ಮುಂದಿನ ದಿನದಲ್ಲಿ ದರ್ಶನ್-ಯಶ್, ದರ್ಶನ್-ಸುದೀಪ್, ಸುದೀಪ್-ಯಶ್, ಪುನೀತ್-ಸುದೀಪ್ ಹೀಗೆ....ಎಲ್ಲರೂ ಒಟ್ಟೊಟ್ಟಿಗೆ ವೇದಿಕೆ ಹಂಚಿಕೊಳ್ಳಬೇಕು.


Click it and Unblock the Notifications











