ತಮಿಳು ನಿರ್ದೇಶಕನ ಸಿನಿಮಾಗಾಗಿ ಮತ್ತೆ ಒಂದಾದ ಡಾಲಿ ಮತ್ತು 'ಟಗರು' ಶಿವ

ಹ್ಯಾಟ್ರಿಕ್ ಹೀರೋ ಶಿವರಾಜ್ ಮತ್ತು ನಟ ಧನಂಜಯ್ ಟಗರು ಸಿನಿಮಾ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಈ ಸುದ್ದಿ ಅಭಿಮಾನಿಗಳಿಗೆ ಸಖತ್ ಥ್ರಿಲ್ ಕೊಡ್ತಿದೆ. ಸೂಪರ್ ಹಿಟ್ 'ಟಗರು' ಸಿನಿಮಾದಲ್ಲಿ ಧನಂಜಯ್ ಡಾಲಿ ಪಾತ್ರದಲ್ಲಿ ಮಿಂಚಿದ್ದರು. ಈ ಪಾತ್ರ ಧನಂಜಯ್ ಸಿನಿಬದುಕನ್ನೇ ಬದಲಾಯಿಸಿದೆ. ಶಿವಣ್ಣ ಚಿತ್ರದಲ್ಲಿ ಎಸಿಪಿ ಶಿವಕುಮಾರ್ ಅಲಿಯಾಸ್ ಟಗರು ಶಿವನ ಪಾತ್ರದಲ್ಲಿ ಮಿಂಚಿದ್ದರು.

ಇಬ್ಬರ ಕಾಂಬಿನೇಶನ್ ಅಭಿಮಾನಿಗಳ ಹೃದಯಗೆದ್ದಿತ್ತು. ಇದೀಗ ಈ ಜೋಡಿ ಮತ್ತೆ ತೆರೆಮೇಲೆ ಬರ್ತಿದೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಧನಂಜಯ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ತಮಿಳು ನಿರ್ದೇಶಕ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.

ವಿಶೇಷ ಅಂದರೆ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದು, ಈಗಾಗಲೇ ಸಂಗೀತ ಕೆಲಸ ಪ್ರಾರಂಭಿಸಿದ್ದಾರೆ. ದಸರಾ ಹಬ್ಬದ ಸಮಯದಲ್ಲಿ ಅಧಿಕೃತವಾಗಿ ಸಿನಿಮಾ ಕೆಲಸ ಪ್ರಾರಂಭ ಮಾಡಿದೆ ಸಿನಿಮಾತಂಡ. ಈ ಬಗ್ಗೆ ನಟ ಧನಂಜಯ್ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.

 Shiva Rajkumar And Dhananjay Team Up Again For Vijay Milton New Film

2021ರಲ್ಲಿ ನಮ್ಮ ಶಿವಣ್ಣನೊಂದಿಗೆ ಮತ್ತೆ ಕಾಣಿಸಿಕೊಳ್ಳುತ್ತಿದ್ದೀನಿ ಎಂದು ಬರೆದುಕೊಂಡು ಪ್ರೊಡಕ್ಷನ್-2 ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ಶಿವಣ್ಣ ಮತ್ತು ಡಾಲಿ ಇಬ್ಬರು ಇದ್ದಾರೆ. ಅಂದ್ಹಾಗೆ ನಟ ಧನಂಜಯ್ ನಿರ್ದೇಶಕ ವಿಜಯ್ ಜೊತೆ ಈ ಮೊದಲೇ ಕೆಲಸ ಮಾಡಿದ್ದಾರೆ. ಪೊಗರು ಸಿನಿಮಾಗೆ ವಿಜಯ್ ಛಾಯಾಗ್ರಾಹಣ ಮಾಡಿದ್ದಾರೆ. ಪೊಗರು ಸಿನಿಮಾದಲ್ಲಿ ಧನಂಜಯ್ ವಿಲನ್ ಆಗಿ ಅಬ್ಬರಿಸಿದ್ದಾರೆ.

ಧನಂಜಯ್, ವಿಜಯ್ ಮಿಲ್ಟನ್ ಅವರ ತಮಿಳು ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ಹಾಗಾಗಿ ಈಗಾಗಲೇ ಧನಂಜಯ್ ಗೆ ವಿಜಯ್ ಜೊತೆ ಕೆಲಸ ಮಾಡಿದ ಅನುಭವವಿದೆ. ವಿಜಯ್ ಹೇಳಿದ ಕಥೆ ಕೇಳಿ ಶಿವಣ್ಣ ತುಂಬಾ ಖುಷಿಪಟ್ಟು ಸಿನಿಮಾಗೆ ಸಹಿ ಮಾಡಿದ್ದಾರಂತೆ. ಇಬ್ಬರ ಕಾಂಬಿನೇಶನ್ ಅನ್ನು ಮತ್ತೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

Recommended Video

Shashi Kumar ಮಗನಿಗೆ ಸಾಥ್ ಕೊಟ್ಟ ಉಪೇಂದ್ರ | Filmibeat Kannada

More from Filmibeat

English summary
After Tagaru success Shiva rajkumar and Dhananjay team up again for Vijay Milton new film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X