»   » 'ಟಗರು' ಮೆರವಣಿಗೆ: ನಿಮ್ಮ ಊರಿಗೆ ಬರ್ತಿದ್ದಾರೆ ಶಿವಣ್ಣ-ಡಾಲಿ.!

'ಟಗರು' ಮೆರವಣಿಗೆ: ನಿಮ್ಮ ಊರಿಗೆ ಬರ್ತಿದ್ದಾರೆ ಶಿವಣ್ಣ-ಡಾಲಿ.!

Posted By:
Subscribe to Filmibeat Kannada
ನಿಮ್ಮ ಊರಿಗೆ ಬರ್ತಿದ್ದಾರೆ ಶಿವಣ್ಣ-ಡಾಲಿ.! | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಧನಂಜಯ್, ವಸಿಷ್ಠ ಸಿಂಹ ಅಭಿನಯದ 'ಟಗರು' ಸಿನಿಮಾ ನಾಲ್ಕನೇ ವಾರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ದಿನದಿಂದ ದಿನಕ್ಕೆ ಚಿತ್ರಮಂದಿರಗಳನ್ನ ಹೆಚ್ಚಿಸಿಕೊಳ್ಳುತ್ತಿರುವ ಟಗರು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಕರ್ನಾಟಕದಲ್ಲಿ ಮಾತ್ರವಲ್ಲದೇ, ಹೊರರಾಜ್ಯಗಳಲ್ಲೂ ಶಿವಣ್ಣನ ಸಿನಿಮಾ ಅಬ್ಬರಿಸುತ್ತಿದೆ. ಕನ್ನಡ ಪ್ರೇಕ್ಷಕರು ಮಾತ್ರವಲ್ಲದೇ ತಮಿಳು, ತೆಲುಗು ಆಡಿಯೆನ್ಸ್ ಗಳು ಕೂಡ ಟಗರು ಚಿತ್ರವನ್ನ ಚಿತ್ರಮಂದಿರಕ್ಕೆ ಬಂದಿ ನೋಡುತ್ತಿದ್ದಾರೆ.

ಪರಭಾಷೆ ಪ್ರೇಕ್ಷಕರಿಗಾಗಿ 'ಟಗರು' ತಂಡದಿಂದ ಮಾಸ್ಟರ್ ಪ್ಲಾನ್.!

ಈ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲು 'ಟಗರು' ಚಿತ್ರತಂಡ ನಿರ್ಧರಿಸಿದ್ದು, ರಾಜ್ಯಾದ್ಯಂತ 'ಟಗರು' ಮೆರವಣಿಗೆ ಹೋಗಲಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಚಿತ್ರವನ್ನ ಗೆಲ್ಲಿಸಿರುವ ಕಾರಣಕ್ಕೆ ಧನ್ಯವಾದ ತಿಳಿಸಲು ಅಭಿಮಾನಿಗಳ ಬಳಿಯೇ 'ಟಗರು' ಟೀಮ್ ಹೋಗುತ್ತಿದೆ. ಯಾವಾಗ, ಎಷ್ಟು ಗಂಟೆಗೆ, ಯಾವ ಚಿತ್ರಮಂದಿರದ ಬಳಿ ಹೋಗಲಿದ್ದಾರೆ ಎಂದು ತಿಳಿಯಲು ಮುಂದೆ ಓದಿ...

ಭಾನುವಾರ ತುಮಕೂರು

18/03/2018, ಭಾನುವಾರ ಮಧ್ಯಾಹ್ನ 12.00ಕ್ಕೆ ತುಮಕೂರಿನ ಪ್ರಶಾಂತ್ ಚಿತ್ರಮಂದಿರದ ಬಳಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ ನೀಡಲಿದ್ದಾರೆ. ಇಲ್ಲಿಗೆ ಧನಂಜಯ್ ಮತ್ತು ಉಳಿದ ಕಲಾವಿದರು ಬರುವ ಬಗ್ಗೆ ಮಾಹಿತಿ ಇಲ್ಲ.

ಡಾಲಿ-ಸೂರಿಯ ಈ ಫೋಟೋ ಹಿಂದಿದೆ ರೋಚಕ ಕಥೆ.!

ಸೋಮವಾರ ಶಿವಮೊಗ್ಗ

19/03/2018, ಸೋಮವಾರ ಸಂಜೆ 4.00 ಗಂಟೆಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಡಾಲಿ ಧನಂಜಯ್ ಸೇರಿದಂತೆ ಇತರೆ ಕಲಾವಿದರು ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಸಿನಿಮಾ ನೋಡಲಿದ್ದಾರೆ.

ಮಂಗಳವಾರ ಎಲ್ಲಿಗೆ.?

20/03/2018, ಮಂಗಳವಾರ ಬೆಳಿಗ್ಗೆ 10.30ಕ್ಕೆ ಡಾಲಿ ಧನಂಜಯ್ ಭದ್ರಾವತಿಯ ವೆಂಕಟೇಶ್ವರ ಚಿತ್ರಮಂದಿರಕ್ಕೆ ಭೇಟಿ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಹಾಸನ ಎಸ್.ಬಿ.ಜಿ ಚಿತ್ರಮಂದಿರದಲ್ಲಿ ಧನಂಜಯ್ 'ಟಗರು' ಸಿನಿಮಾ ನೋಡಲಿದ್ದಾರೆ. ನಂತರ ಸಂಜೆ 4 ಗಂಟೆಗೆ ಚನ್ನರಾಯಪಟ್ಟಣದ ಗಾಯಿತ್ರಿ ಚಿತ್ರಮಂದಿರಕ್ಕೆ ಧನಂಜಯ್ ಭೇಟಿ ನೀಡಲಿದ್ದಾರೆ.

'ಡಾಲಿ' ಧನಂಜಯ್ ಕಷ್ಟದ ದಿನಗಳನ್ನ ಬಿಚ್ಚಿಟ್ಟ ಸ್ನೇಹಿತ 'ಸಿಂಹಾಜಿ'

ದಾವಣಗೆರೆಗೆ ಮಾರ್ಚ್ 26

26/03/2018, ಸೋಮವಾರ ಸಂಜೆ 4ಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜಜ್ ಕುಮಾರ್ ಮತ್ತು ಧನಂಜಯ್ ಅದ್ಧೂರಿ ಮೆರವಣಿಗೆಯೊಂದಿಗೆ ದಾವಣಗೆರೆಯ ಅಶೋಕ ಚಿತ್ರಮಂದಿರಕ್ಕೆ ಆಗಮಿಸಿಲಿದ್ದಾರೆ. ಸಂಜೆ 7 ಗಂಟೆಗೆ ಚಿತ್ರದುರ್ಗದ ವೆಂಕಟೇಶ್ವರ ಚಿತ್ರಮಂದಿರಕ್ಕೆ ಕೂಡ ಶಿವಣ್ಣ ಮತ್ತು ಧನಂಜಯ್ ಹೋಗಲಿದ್ದಾರೆ.

English summary
Hatric hero Shiva rajkumar and Dhananjay has decided to tour the all over karnataka with the success of Tagaru movie. the movie has released on february 23.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X