For Quick Alerts
  ALLOW NOTIFICATIONS  
  For Daily Alerts

  ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಶಿವಣ್ಣ ದಂಪತಿ

  By Naveen
  |
  ಕುಮಾರಣ್ಣನ ಮನೆಗೆ ಧಿಡೀರ್ ಭೇಟಿ ಕೊಟ್ಟ ಶಿವಣ್ಣ | Filmibeat Kannada

  ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಶಿವರಾಜ್ ಕುಮಾರ್ ನೂತನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಕುಮಾರಸ್ವಾಮಿ ಅವರ ನಿವಾಸಕ್ಕೆ ಆಗಮಿಸಿದ ಶಿವಣ್ಣ ದಂಪತಿ ಮುಖ್ಯಮಂತ್ರಿ ಕುಮಾರಣ್ಣನಿಗೆ ಶುಭಾಶಯವನ್ನು ಕೋರಿದ್ದಾರೆ.

  ಕುಮಾರಸ್ವಾಮಿ ಅವರನ್ನು ಶಿವಣ್ಣ ಭೇಟಿ ಮಾಡಿರುವ ಫೋಟೋ ನಿಮ್ಮ ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿದೆ. ಕುಮಾರಸ್ವಾಮಿ ಜೊತೆಗೆ ಕೆಲ ಕಾಲ ಮಾತನಾಡಿದ ಶಿವಣ್ಣ ಬಳಿಕ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡಿದರು.

  ಸಾಲ ಮನ್ನಾ ಮಾಡದಿದ್ದರೆ ರಾಜೀನಾಮೆ ಕೊಡುವೆ : ಎಚ್.ಡಿ.ಕುಮಾರಸ್ವಾಮಿ

  ಇದೊಂದು ಸಹಜ ಭೇಟಿ ಎಂದ ಶಿವಣ್ಣ ವಿಶ್ ಮಾಡಲು ಕುಮಾರಸ್ವಾಮಿ ಅವರ ಮನೆಗೆ ಬಂದಿದ್ವಿ ಎಂದರು. ಜೊತೆಗೆ ವಿಷ್ಣುವರ್ಧನ್ ಸಮಾಧಿ ಮೈಸೂರಿಗೆ ಸ್ಥಳಾಂತರ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ, ಅದನ್ನು ಅಂಬರೀಶ್ ಅವರು ಬಂದು ಮಾತನಾಡುತ್ತಾರೆ ಎಂದರು. ಇದರ ಜೊತೆಗೆ ಮುಂದಿನ ಲೋಕಸಭೆಗೆ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಗೆ ಇನ್ನೂ ಸಮಯವಿದೆ ಎಂಬ ಹೇಳಿಕೆ ನೀಡಿದರು.

  ಅಂದಹಾಗೆ, ಈ ಬಾರಿಯ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ತಮ್ಮ ಸಹೋದರ ಮಧು ಬಂಗಾರಪ್ಪ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡಿದ್ದರು.

  English summary
  Kannada actor Shiva Rajkumar and Geetha Shivrajkumar meets Karnataka's new Chief Minister HD Kumaraswamy today (May 27th) in his residence Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X