For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ 125ನೇ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 125ನೇ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. 124 ಸಿನಿಮಾಗಳನ್ನು ಯಶಸ್ವಿಯಾಗಿ ಮುಗಿಸಿರುವ ಶಿವಣ್ಣ ಇಂದು (ಮಾರ್ಚ್ 11) ಶಿವರಾತ್ರಿಯ ಹಬ್ಬದ ವಿಶೇಷವಾಗಿ 125ನೇ ಸಿನಿಮಾದ ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

  ಹೌದು, ಶಿವಣ್ಣ 125ನೇ ಸಿನಿಮಾದ ಪೋಸ್ಟರ್, ಟೈಟಲ್ ಮತ್ತು ನಿರ್ದೇಶಕ ಯಾರು ಎನ್ನುವುದನ್ನು ಅಧಿಕೃತವಾಗಿ ಬಹಿರಂಗ ಪಡಿಸಿದ್ದಾರೆ. ವಿಶೇಷ ಎಂದರೆ ಶಿವರಾಜ್ ಕುಮಾರ್ 125ನೇ ಸಿನಿಮಾಗೆ ನಿರ್ದೇಶನ ಮಾಡುವ ಜವಾಬ್ದಾರಿಯನ್ನು ನಿರ್ದೇಶಕ ಎ ಹರ್ಷ ವಹಿಸಿಕೊಂಡಿದ್ದಾರೆ. ಈ ಮೂಲಕ ಹರ್ಷ ಮತ್ತು ಶಿವಣ್ಣ 4ನೇ ಬಾರಿ ಒಂದಾಗುತ್ತಿದ್ದಾರೆ. ಭಜರಂಗಿ, ವಜ್ರಕಾಯ ಮತ್ತು ಭಜರಂಗಿ-2 ಬಳಿಕ ಇದೀಗ ಮತ್ತೆ ಶಿವಣ್ಣನಿಗೆ ಆಕ್ಷನ್ ಕಟ್ ಹೇಳಲು ಹರ್ಷ ಮುಂದಾಗಿದ್ದಾರೆ. ಮುಂದೆ ಓದಿ...

  ಶಿವರಾತ್ರಿ ಹಬ್ಬದಂದು ಶಿವಣ್ಣ ಕೊಡಲಿದ್ದಾರೆ ಸರ್ಪ್ರೈಸ್ಶಿವರಾತ್ರಿ ಹಬ್ಬದಂದು ಶಿವಣ್ಣ ಕೊಡಲಿದ್ದಾರೆ ಸರ್ಪ್ರೈಸ್

  ಆಂಜನೇಯ ಟೈಟಲ್‌ನಿಂದ ಹೊರಬಂದ ಹರ್ಷ

  ಆಂಜನೇಯ ಟೈಟಲ್‌ನಿಂದ ಹೊರಬಂದ ಹರ್ಷ

  ಈಗಾಗಲೇ ಹರ್ಷ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದುವರೆಗೂ ಆಂಜನೇಯನ ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದ ಹರ್ಷ ಈಗ ಮೊದಲ ಬಾರಿಗೆ ಬೇರೆ ಶೀರ್ಷಿಕೆ ಮೂಲಕ ಕನ್ನಡ ಸಿನಿಮಾಭಿಮಾನಿಗಳ ಮುಂದೆ ಬರ್ತಿದ್ದಾರೆ.

  ಶಿವಣ್ಣ 125ನೇ ಸಿನಿಮಾ ಟೈಟಲ್ 'ವೇದ'

  ಶಿವಣ್ಣ 125ನೇ ಸಿನಿಮಾ ಟೈಟಲ್ 'ವೇದ'

  ಅಂದಹಾಗೆ ಶಿವಣ್ಣ 125ನೇ ಸಿನಿಮಾಗೆ 'ವೇದ' ಎಂದು ಟೈಟಲ್ ಇಡಲಾಗಿದೆ. ಟೈಟಲ್ ಜೊತೆಗೆ ಬ್ರೂಟಲ್ 1960 ಎನ್ನುವ ಟ್ಯಾಗ್ ಲೈನ್ ಕೂಡ ಇದೆ. ಹಾಗಾಗಿ ಇದು ರೆಟ್ರೋ ಶೈಲಿಯ ಸಿನಿಮಾನಾ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಮೂಲಗಳ ಪ್ರಕಾರ ಇದು ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಮೂಡಿಬರುವ ಸಿನಿಮಾ ಎನ್ನಲಾಗುತ್ತಿದೆ.

  ವಯಸ್ಸಾದ ಗೆಟಪ್ ನಲ್ಲಿ ಶಿವಣ್ಣ ಮಿಂಚಿಂಗ್

  ವಯಸ್ಸಾದ ಗೆಟಪ್ ನಲ್ಲಿ ಶಿವಣ್ಣ ಮಿಂಚಿಂಗ್

  'ವೇದ' ಸಿನಿಮಾದ ಪೋಸ್ಟರ್‌ನಲ್ಲಿ ಹೆಚ್ಚು ಮಾಹಿತಿ ಬಿಟ್ಟುಕೊಟ್ಟಿಲ್ಲ. ಶಿವರಾಜ್ ಕುಮಾರ್ ವಯಸ್ಸಾದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಣ್ಣಾಗಿರುವ ಉದ್ದ ದಾಡಿ ಮತ್ತು ಕೂದಲು ಬಿಟ್ಟಿರುವ ಶಿವಣ್ಣ, ಗಂಭೀರ ನೋಟ ಬೀರುತ್ತಿರುವ ಲುಕ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

  ಶಿವರಾಜ್ ಕುಮಾರ್ ಸಿನಿಯಾನಕ್ಕೆ 35 ವರ್ಷ: ಶುಭಕೋರಿದ ಕಿಚ್ಚ ಸುದೀಪ್ಶಿವರಾಜ್ ಕುಮಾರ್ ಸಿನಿಯಾನಕ್ಕೆ 35 ವರ್ಷ: ಶುಭಕೋರಿದ ಕಿಚ್ಚ ಸುದೀಪ್

  ಸರಳ ಪೂಜೆ ಮೂಲಕ ಚಿತ್ರಕ್ಕೆ ಚಾಲನೆ

  ಸರಳ ಪೂಜೆ ಮೂಲಕ ಚಿತ್ರಕ್ಕೆ ಚಾಲನೆ

  ಇಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಶಿವಣ್ಣ ಸರಳವಾಗಿ ಪೂಜೆ ಮಾಡುವ ಮೂಲಕ 125ನೇ ಸಿನಿಮಾದ 'ವೇದ' ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ವೇದಾ ಶಿವರಾಜ್ ಕುಮಾರ್ ಹೋಮ್ ಬ್ಯಾನರ್ ಗೀತಾ ಪಿಕ್ಚರ್‌ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾವಾಗಿದೆ.

  ಉಮಾಪತಿ ಗಿಫ್ಟ್,ತರುಣ್ ಗೆ ಕ್ರೆಡಿಟ್ ಅಂತಿದ್ದಾರೆ ರಾಬರ್ಟ್ ನೋಡಿದ ಪ್ರೇಕ್ಷಕರು | Roberrt | Filmibeat Kannada
  'ಶಿವಪ್ಪ' ಸಿನಿಮಾದಲ್ಲಿ ಶಿವಣ್ಣ ನಟನೆ

  'ಶಿವಪ್ಪ' ಸಿನಿಮಾದಲ್ಲಿ ಶಿವಣ್ಣ ನಟನೆ

  ಶಿವರಾಜ್ ಕುಮಾರ್ ಸದ್ಯ ಶಿವಪ್ಪ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಚಿತ್ರಕ್ಕೆ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಭಜರಂಗಿ-2 ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ನ 125ನೇ ಸಿನಿಮಾ ವೇದ ಜೂನ್ ಅಥವಾ ಜುಲೈನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.

  English summary
  Actor Shiva Rajkumar and Harsha Next Movie Titled as Veda- The Brutal 1960's.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X