ಚೆನ್ನೈನಲ್ಲಿ ಪುನೀತ್, ಮಂಗಳೂರಿನಲ್ಲಿ ಶಿವಣ್ಣ, ಬೆಂಗಳೂರಿನಲ್ಲಿ ಡಿ ಬಾಸ್.!

Recommended Video

ಪುನೀತ್ ರಾಜ್ ಕುಮಾರ್ ಚೆನ್ನೈನಲ್ಲಿ, ಮಂಗಳೂರಿನಲ್ಲಿ ಶಿವಣ್ಣ, ಬೆಂಗಳೂರಿನಲ್ಲಿ ಡಿ ಬಾಸ್

ಬೆಂಗಳೂರಿನ ಸೌತ್ ಎಂಡ್ ವೃತ್ತದಲ್ಲಿಂದು ಡಾ ಪಾರ್ವತಮ್ಮ ರಾಜ್ ಕುಮಾರ್ ಅವರ ಕಂಚಿನ ಪ್ರತಿಮೆ ಅನಾವರಣವಾಯಿತು. ರಾಘವೇಂದ್ರ ರಾಜ್ ಕುಮಾರ್, ಯುವರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬ ಭಾಗಿಯಾಗಿತ್ತು.

ಆದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಮಾತ್ರ ಕಾಣಿಸಿಕೊಂಡಿಲ್ಲ. ಇವರಿಬ್ಬರು ಎಲ್ಲೋದ್ರು, ಯಾಕೆ ಬರಲಿಲ್ಲ ಎಂದು ಅಭಿಮಾನಿಗಳು ಹುಡುಕುತ್ತಿದ್ದರು. ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ರಾಜ್ ಪುತ್ರರು ಈ ಕಾರ್ಯಕ್ರಮಕ್ಕ ಗೈರಾಗಿದ್ದಾರೆ.

ಇನ್ನೊಂದೆಡೆ ಅಭಿಷೇಕ್ ಅಂಬರೀಶ್ ನಟನೆಯ ಅಮರ್ ಸಿನಿಮಾ ರಿಲೀಸ್ ಆಗಿದ್ದು, ಈ ಚಿತ್ರಕ್ಕೆ ಶಿವಣ್ಣ ಮತ್ತು ಪುನೀತ್ ಇಬ್ಬರು ವಿಡಿಯೋ ಬೈಟ್ ಮೂಲಕ ಶುಭ ಕೋರಿದ್ದಾರೆ. ಅಷ್ಟಕ್ಕೂ, ರಾಜ್ ಸಹೋದರರು ಎಲ್ಲಿದ್ದಾರೆ? ಯಾವ ಶೂಟಿಂಗ್ ನಲ್ಲಿದ್ದಾರೆ? ಮುಂದೆ ಓದಿ.....

ಚೆನ್ನೈನಲ್ಲಿ ಪುನೀತ್.!

ಚೆನ್ನೈನಲ್ಲಿ ಪುನೀತ್.!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಚೆನ್ನೈನಲ್ಲಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿರುವ 'ಯುವರತ್ನ' ಸಿನಿಮಾದ ಚಿತ್ರೀಕರಣಕ್ಕಾಗಿ ಪುನೀತ್ ಭಾಗಿಯಾಗಿದ್ದಾರೆ.

ಮಂಗಳೂರಿನಲ್ಲಿ ಶಿವಣ್ಣ

ಮಂಗಳೂರಿನಲ್ಲಿ ಶಿವಣ್ಣ

ರುಸ್ತುಂ ಸಿನಿಮಾ ಶೂಟಿಂಗ್ ಮುಗಿಸಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಅನಂದ್ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಪಿ ವಾಸು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯುತ್ತಿದೆ.

ಬೆಂಗಳೂರಿನಲ್ಲಿ ದರ್ಶನ್

ಬೆಂಗಳೂರಿನಲ್ಲಿ ದರ್ಶನ್

ಪಾಂಡಿಚೇರಿಯಲ್ಲಿ ರಾಬರ್ಟ್ ಸಿನಿಮಾ ಶೂಟಿಂಗ್ ಮಾಡುತ್ತಿದ್ದ ದರ್ಶನ್ ಬೆಂಗಳೂರಿಗೆ ವಾಪಸ್ ಬಂದಿದ್ದರು. ಸುಮಲತಾ ಅವರ ಸ್ವಾಭಿಮಾನ ವಿಜಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿದ್ದ ದರ್ಶನ್ ಈಗ ಬೆಂಗಳೂರಿನಲ್ಲಿ ನಡೆಯಲಿರುವ ರಾಬರ್ಟ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಂದಿನ ವಾರದಿಂದ ಕೆಜಿಎಫ್

ಮುಂದಿನ ವಾರದಿಂದ ಕೆಜಿಎಫ್

ಮಂಡ್ಯ ಚುನಾವಣೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದ ಯಶ್ ಈಗ ಕೆಜಿಎಫ್ ಚಾಪ್ಟರ್ 2 ತಂಡವನ್ನ ಸೇರಿಕೊಳ್ಳಲಿದ್ದಾರೆ. ಈಗಾಗಲೇ ಕೆಜಿಎಫ್ ಶೂಟಿಂಗ್ ಆರಂಭವಾಗಿದ್ದು, ಯಶ್ ಅವರ ಭಾಗ ಶುರುವಾಗಿಲ್ಲ. ಜೂನ್ 6 ರಿಂದ ಯಶ್ ಅವರು ಅಧಿಕೃತವಾಗಿ ಸೆಟ್ ಗೆ ಹೋಗಲಿದ್ದಾರೆ ಯಶ್.

More from Filmibeat

English summary
Kannada actor shiva rajkumar and puneeth rajkumar did not attend the parvathamma ehbronze statues inauguration function. then where he are went?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X