»   » ದರ್ಶನ್ ಜೊತೆ ಶಿವರಾಜ್ ಕುಮಾರ್ ಹಾಗೂ ಪುನೀತ್ ಸಿನಿಮಾ ಮಾಡ್ತಾರಾ!

ದರ್ಶನ್ ಜೊತೆ ಶಿವರಾಜ್ ಕುಮಾರ್ ಹಾಗೂ ಪುನೀತ್ ಸಿನಿಮಾ ಮಾಡ್ತಾರಾ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈಗ ಮಲ್ಟಿಸ್ಟಾರ್ ಸಿನಿಮಾಗಳು ಹೆಚ್ಚಾಗುತ್ತಿದೆ. ಶಿವಣ್ಣ ಮತ್ತು ಸುದೀಪ್, ಸುದೀಪ್ ಮತ್ತು ಉಪೇಂದ್ರ ಈಗಾಗಲೇ ಸಿನಿಮಾ ಮಾಡಿದ್ದಾರೆ. ಆದರೆ ಇದೀಗ ಡಿ ಬಾಸ್ ದರ್ಶನ್ ಜೊತೆ ಪುನೀತ್ ಮತ್ತು ಶಿವಣ್ಣ ಸಿನಿಮಾ ಮಾಡುತ್ತಾರಾ ಎನ್ನುವ ಸುದ್ದಿ ಬಂದಿದೆ.

ಇತ್ತೀಚಿಗಷ್ಟೆ ನಟ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಿಗೆ ಪಿ.ಆರ್.ಕೆ ಆಡಿಯೋ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಬಂದಿದ್ದರು. ಈ ವೇಳೆ ಅಭಿಮಾನಿಯೊಬ್ಬರು ''ನೀವು ದರ್ಶನ್ ಜೊತೆ ಯಾವಗ ಸಿನಿಮಾ ಮಾಡುತ್ತೀರ'' ಎಂದು ಶಿವಣ್ಣ ಮತ್ತು ಪುನೀತ್ ಗೆ ಕೇಳಿದರು.

Shiva Rajkumar and Puneeth Rajkumar's spoke about Darshan

ಇನ್ನು ಅಭಿಮಾನಿಯ ಪ್ರಶ್ನೆಗೆ ಇಬ್ಬರು ನಟ ಉತ್ತರಿಸಿದರು. ''ಖಂಡಿತ ದರ್ಶನ್ ಜೊತೆ ಸಿನಿಮಾ ಮಾಡುತ್ತೇನೆ. ಒಳ್ಳೆಯ ಕಥೆ ಸಿಕ್ಕರೆ ಸಿನಿಮಾ ಮಾಡುವುದು ಗ್ಯಾರೆಂಟಿ. ದರ್ಶನ್ ಅವರನ್ನು ಸಣ್ಣ ಹುಡುಗನಿಂದ ನೋಡುತ್ತಿತ್ತೇನೆ. ಅಂದಿನಿಂದ ತೂಗುದೀಪ ಕುಟುಂಬ ಮತ್ತು ನಮ್ಮ ಕುಟುಂಬ ತುಂಬ ಹತ್ತಿರವಾಗಿದೆ. ಸೋ, ನನಗೂ ದರ್ಶನ್ ಜೊತೆಗೆ ಸಿನಿಮಾ ಮಾಡುವ ಆಸೆ ಇದೆ. ಅದಷ್ಟು ಬೇಗ ಮಾಡುತ್ತೇವೆ.'' ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

ಅಂದಹಾಗೆ, ಪುನೀತ್ ಅವರ ಪಿ.ಆರ್.ಪಿ ಆಡಿಯೋ ಸಂಸ್ಥೆಯಿಂದ ಹೊರಬಂದಿರುವ ಮೊದಲ ಸಿನಿಮಾ 'ಅಂಜನಿಪುತ್ರ' ಆಗಿದೆ. ಅದೇ ರೀತಿ 'ಟಗರು' ಸಿನಿಮಾ ಹಾಡುಗಳು ಕೂಡ ಪಿ.ಆರ್.ಪಿ ಆಡಿಯೋ ಮೂಲಕವೇ ರಿಲೀಸ್ ಆಗುತ್ತಿದೆ. ಈ ಎರಡು ಸಿನಿಮಾಗಳ ಬಗ್ಗೆ ಮಾತನಾಡುವುದಕ್ಕೆ ಶಿವಣ್ಣ ಮತ್ತು ಪುನೀತ್ ಫೇಸ್ ಬುಕ್ ಲೈವ್ ಬಂದಿದ್ದರು.

English summary
kannada actors Shiva Rajkumar and Puneeth Rajkumar's spoke about Actor Darshan in a facebook live.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X