ಫ್ಲ್ಯಾಶ್ ನ್ಯೂಸ್: 3000 ಥಿಯೇಟರ್ ಗಳಲ್ಲಿ ಶಿವಣ್ಣ, ಕಿಲ್ಲಿಂಗ್ ವೀರಪ್ಪನ್

By Suneetha

ಸ್ಯಾಂಡಲ್ ವುಡ್ ನಲ್ಲಿ 25 ರ ಯುವಕರನ್ನು ನಾಚಿಸುವಂತೆ ನಟಿಸುವ ನಟನೆಂದರೆ ಅದು ಶಿವರಾಜ್ ಕುಮಾರ್. ಪ್ರತಿವರ್ಷ 2 ಅಥವಾ 3 ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಕನ್ನಡ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೀರೋ ಅಂತಾನೇ ಫೇಮಸ್ ಅಂತ ನಿಮಗೆಲ್ಲರಿಗೂ ಗೊತ್ತಿರೋ ವಿಚಾರ.

ಸದ್ಯಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಎರಡು ಚಿತ್ರಗಳಾದ 'ಶಿವಲಿಂಗ' ಹಾಗೂ ಖ್ಯಾತ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್-ಕಟ್ ಹೇಳಿರುವ 'ಕಿಲ್ಲಿಂಗ್ ವೀರಪ್ಪನ್' 2015, ಈ ವರ್ಷದ ಕೊನೆಯಲ್ಲಿ ತೆರೆ ಕಾಣಲಿದೆ.

'ಶಿವಲಿಂಗ' ಅಕ್ಟೋಬರ್ ಕೊನೆಯ ವಾರದಲ್ಲಿ ತೆರೆ ಕಾಣಲು ತಯಾರಾಗಿ ನಿಂತಿದ್ದು, ನಿರ್ದೇಶಕ ಆರ್ ಜಿ ವಿ ಅವರ ಕಿಲ್ಲಿಂಗ್ ವೀರಪ್ಪನ್ ಬಿಡುಗಡೆಗೆ ಡೇಟ್ ಪಕ್ಕಾ ಆಗಿದ್ದು, ನವೆಂಬರ್ 6 ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸಲಿದೆ.[ನವೆಂಬರ್ 6ರಂದು ತೆರೆಗೆ ಅಪ್ಪಳಿಸಲಿದೆ 'ಕಿಲ್ಲಿಂಗ್ ವೀರಪ್ಪನ್']

shiva rajkumar

ಕುಖ್ಯಾತ ಕಾಡುಗಳ್ಳ ವೀರಪ್ಪನ್ ನಿಜ ಜೀವನ ಕಥೆಯಾಧರಿತ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಟ್ರೈಲರ್ ಮೂಲಕ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಹುಟ್ಟಿಸಿತ್ತು.

ಇದೀಗ ಸದ್ಯಕ್ಕೆ ಗಾಂಧಿನಗರದಿಂದ ಬಂದಿರೋ ಬ್ರೇಕಿಂಗ್ ನ್ಯೂಸ್ ಪ್ರಕಾರ ಬಹುನಿರೀಕ್ಷಿತ 'ಕಿಲ್ಲಿಂಗ್ ವೀರಪ್ಪನ್' ಚಿತ್ರವನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ನವೆಂಬರ್ 6 ರಂದು ದಕ್ಷಿಣ ಭಾರತದಲ್ಲಿ ಸುಮಾರು 3000 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಕರ್ನಾಟಕದಾದ್ಯಂತ ಆಕ್ಷನ್-ಡ್ರಾಮಾ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಸುಮಾರು 450 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ನಮ್ಮ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಎಲ್ಲಾ ಮುಖ್ಯ ಚಿತ್ರಮಂದಿರಗಳಲ್ಲಿ ಈ ಚಿತ್ರ ತೆರೆ ಕಾಣುವ ಸಾಧ್ಯತೆಯಿದ್ದು, ಹಿಟ್ ಚಿತ್ರಗಳಾದ ಶೋಲೆ, ಮಯೂರ ಮತ್ತು ಜೋಗಯ್ಯ ಚಿತ್ರಗಳು ಮಾಡಿರುವ ರೇಕಾರ್ಡ್ ಗಳನ್ನೆಲ್ಲಾ 'ಕಿಲ್ಲಿಂಗ್ ವೀರಪ್ಪನ್' ಬ್ರೇಕ್ ಮಾಡಲಿದೆ.['ಕಿಲ್ಲಿಂಗ್ ವೀರಪ್ಪನ್'ನಲ್ಲಿ ಪಾರುಲ್ ನಾನಾ ಅವತಾರ]

ಮುಖ್ಯ ಚಿತ್ರಮಂದಿರ ಸಂತೋಷ್ ಹಾಗೂ ಕಪಾಲಿ ಥಿಯೇಟರ್ ನಲ್ಲಿ ಕನ್ನಡ ಭಾಷೆಯಲ್ಲಿ 'ಕಿಲ್ಲಿಂಗ್ ವೀರಪ್ಪನ್' ಪ್ರದರ್ಶನಗೊಂಡರೆ, ಭೂಮಿಕ ಮತ್ತು ನಟರಾಜ ಚಿತ್ರಮಂದಿರದಲ್ಲಿ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಪ್ರದರ್ಶನಗೊಳ್ಳಲಿದೆ.

shiva rajkumar

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಹಿರಿಯ ಪುತ್ರನಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಬಹುನಿರೀಕ್ಷಿತ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮೂಲಕ ಹಿಸ್ಟರಿ ರೀ ಕ್ರಿಯೇಟ್ ಮಾಡುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ.

ಒಟ್ನಲ್ಲಿ ಶಿವಣ್ಣ ಅವರು ತಮ್ಮ ಅಭಿಮಾನಿಗಳಿಗೆ ಈ ವರ್ಷ ಕೊನೆಯಾಗುವ ಒಳಗೆ ಒಂದೊಳ್ಳೆ ಉಡುಗೊರೆ ನೀಡುತ್ತಿದ್ದಾರೆ ಅಂದ್ರು ತಪ್ಪಾಗ್ಲಿಕ್ಕಿಲ್ಲ.

ಇನ್ನು ವಿವಾದಾತ್ಮಕ ನಿರ್ದೇಶಕ ಅಂತಾನೇ ಫೇಮಸ್ ಆಗಿರುವ ಆರ್ ಜಿ ವಿ [ರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು.!]ಅವರ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಶಿವರಾಜ್ ಕುಮಾರ್, ಪಾರುಲ್ ಯಾದವ್, ಯಜ್ಞಾ ಶೆಟ್ಟಿ, ಸಂದೀಪ್ ಭಾರದ್ವಾಜ್, ಸಂಚಾರಿ ವಿಜಯ್, ರಾಜೇಶ್ ನಟರಂಗ್ ಹಾಗೂ ನಿರ್ದೇಶಕ ಗಡ್ಡಾ ವಿಜಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

More from Filmibeat

English summary
Kannada Movie 'Killing Veerappan' has confirmed its release on November 6th in 3000 theatres in South India. For the first time controversial director Ram Gopal Varma and Dr Shivarajkumar has teamed up for Killing Veerappan, which is based on the real life story of smuggler Veerappan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X