»   » ಎಕ್ಸ್ ಕ್ಲೂಸಿವ್: 'ಕಲಿ' ಗಾಸಿಪ್ ಬಗ್ಗೆ ಮೌನ ಮುರಿದ ನಿರ್ಮಾಪಕ ಮನೋಹರ್

ಎಕ್ಸ್ ಕ್ಲೂಸಿವ್: 'ಕಲಿ' ಗಾಸಿಪ್ ಬಗ್ಗೆ ಮೌನ ಮುರಿದ ನಿರ್ಮಾಪಕ ಮನೋಹರ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸಬೇಕಿದ್ದ ಬಹು ನಿರೀಕ್ಷಿತ, ಬಹು ದೊಡ್ಡ ಬಜೆಟ್ ಸಿನಿಮಾ 'ಕಲಿ' ಡ್ರಾಪ್ ಆಗಿದೆ ಅಂತ ಗಾಂಧಿನಗರದ ತುಂಬೆಲ್ಲಾ ಗುಲ್ಲೋ ಗುಲ್ಲು.

ಇದು ನಿಜವೋ? ಸುಳ್ಳೋ.? ತಿಳಿಯೋಣ ಅಂತ ನಾವು ನಿರ್ಮಾಪಕ ಸಿ.ಆರ್.ಮನೋಹರ್, ನಿರ್ದೇಶಕ ಪ್ರೇಮ್ ರವರಿಗೆ ಫೋನ್ ಮಾಡಿದ್ವಿ. [ಶಾಕಿಂಗ್ ನ್ಯೂಸ್: ಶಿವಣ್ಣ - ಸುದೀಪ್ 'ಕಲಿ' ಸಿನಿಮಾ ನಿಂತುಹೋಯ್ತಾ.?]


ಆಗಲೇ, 'ಕಲಿ' ಚಿತ್ರದ ಬಗ್ಗೆ ಅಸಲಿ ಸಂಗತಿ ಗೊತ್ತಾಗಿದ್ದು. ಅಷ್ಟಕ್ಕೂ, 'ಕಲಿ' ಚಿತ್ರ ನಿಂತ ನೀರಾಗಿದ್ಯಾ.? ಈ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿ ನಾವು ಕೊಡ್ತಿದ್ದೀವಿ. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ.....


ಗಾಸಿಪ್ ಅಲ್ಲ.! 100% ಸತ್ಯ.!

'ಕಲಿ' ಸಿನಿಮಾ ಸದ್ಯಕ್ಕೆ ಡ್ರಾಪ್ ಆಗಿರುವುದು ನೂರಕ್ಕೆ ನೂರರಷ್ಟು ಸತ್ಯ. ಇದನ್ನ ನಿರ್ಮಾಪಕ ಸಿ.ಆರ್.ಮನೋಹರ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸ್ಪಷ್ಟ ಪಡಿಸಿದ್ದಾರೆ.


ಹಾಗಾದ್ರೆ, ಶಿವಣ್ಣ-ಸುದೀಪ್ ಒಟ್ಟಿಗೆ ನಟಿಸಲ್ವಾ?

'ಕಲಿ' ಸಿನಿಮಾ ಸ್ಟಾಪ್ ಆಗಿರಬಹುದು. ಆದ್ರೆ, ಶಿವಣ್ಣ ಮತ್ತು ಸುದೀಪ್ ರನ್ನ ತೆರೆ ಮೇಲೆ ಒಂದು ಮಾಡಲು ನಿರ್ಮಾಪಕ ಸಿ.ಆರ್.ಮನೋಹರ್ ಮತ್ತೊಂದು ಪ್ರಾಜೆಕ್ಟ್ ಗೆ ಕೈಹಾಕಿದ್ದಾರೆ. [ಶಿವಣ್ಣ-ಸುದೀಪ್ 'ಕಲಿ' ಚಿತ್ರದ ಬಗ್ಗೆ ಹೊಸ ಗಾಸಿಪ್!]


ಈ ಬಾರಿ ಪಕ್ಕಾ ಕರ್ಮಶಿಯಲ್.!

'ಕಲಿ' Periodical ಸಿನಿಮಾ. ಅದಕ್ಕೆ ಗ್ರಾಫಿಕ್ಸ್ ಬಳಕೆ ಅವಶ್ಯಕ. ಹೀಗಾಗಿ 'ಕಲಿ' ಡಿಲೇ ಆಗುತ್ತಿದೆ. ಇದರಿಂದ ಶಿವಣ್ಣ ಹಾಗೂ ಸುದೀಪ್ ರವರ ಕಾಲ್ ಶೀಟ್ ಸದ್ಯಕ್ಕೆ ಮಿಸ್ ಆಗಬಾರದು ಅಂತ ಔಟ್ ಅಂಡ್ ಔಟ್ ಕಮರ್ಶಿಯಲ್ ಸಿನಿಮಾ ಮಾಡಲು ಸಿ.ಆರ್.ಮನೋಹರ್ ಮುಂದಾಗಿದ್ದಾರೆ.


ಇದಕ್ಕೂ ಪ್ರೇಮ್ ನಿರ್ದೇಶಕ.!

ಶಿವರಾಜ್ ಕುಮಾರ್ ಹಾಗೂ ಸುದೀಪ್ ಕಾಂಬಿನೇಷನ್ ನ ಹೊಸ ಕಮರ್ಶಿಯಲ್ ಚಿತ್ರಕ್ಕೆ 'ಜೋಗಿ' ಪ್ರೇಮ್ ನಿರ್ದೇಶಕರಾಗಿ ಮುಂದುವರಿಯಲಿದ್ದಾರೆ.[ಚಂದನವನದಲ್ಲಿ ಕ್ರೇಜ್ ಹುಟ್ಟಿಸಲಿರುವ ಶಿವಣ್ಣ-ದೀಪಣ್ಣ 'ಕಲಿ']


ಸಿ.ಆರ್.ಮನೋಹರ್ ಏನಂದ್ರು?

''ಕಲಿ' Periodical ಸಿನಿಮಾ. ಈಗ ಅದನ್ನ ಬಿಟ್ಟು, ಅದೇ ಕಾಂಬಿನೇಷನ್ ನಲ್ಲೇ (ಶಿವಣ್ಣ-ಸುದೀಪ್-ಪ್ರೇಮ್) ಕಮರ್ಶಿಯಲ್ ಪ್ರಾಜೆಕ್ಟ್ ಮಾಡ್ತಿದ್ದೀವಿ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಸಿ.ಆರ್.ಮನೋಹರ್ ತಿಳಿಸಿದರು.


ಸದ್ಯಕ್ಕೆ 'ಕಲಿ' ಆಗಲ್ಲ.!

''ಸದ್ಯಕ್ಕೆ 'ಕಲಿ' ಸಿನಿಮಾ ಆಗಲ್ಲ. ಗ್ರಾಫಿಕ್ಸ್ ವರ್ಕ್ ಬಹಳ ಇದೆ. ಅದಕ್ಕೆ ತುಂಬಾ ಟೈಮ್ ಬೇಕು. ಅದಕ್ಕೆ ಸದ್ಯಕ್ಕೆ 'ಕಲಿ' ಬಿಟ್ಟು ಕಮರ್ಶಿಯಲ್ ಸಿನಿಮಾ ಮಾಡಲು ನಿರ್ಧಾರ ಮಾಡಿದ್ದೀವಿ'' - ಸಿ.ಆರ್.ಮನೋಹರ್, ನಿರ್ಮಾಪಕ


ಕಮರ್ಶಿಯಲ್ ಸಿನಿಮಾ.!

''ಈಗ ನಾವು ಮಾಡಲು ಹೊರಟಿರುವುದು ಒಳ್ಳೆ ಕಮರ್ಶಿಯಲ್ ಸಬ್ಜೆಕ್ಟ್. ಮೂವಿ ಲಾಂಚ್ ಅಂತ ಮಾಡಲ್ಲ. ಡೈರೆಕ್ಟ್ ಶೂಟಿಂಗ್ ಶುರು ಮಾಡ್ತೀವಿ. ಜುಲೈ ಹೊತ್ತಿಗೆ ಚಿತ್ರೀಕರಣ ಶುರು ಮಾಡಬೇಕು ಎನ್ನುವ ಪ್ಲಾನ್ ಇದೆ'' - ಸಿ.ಆರ್.ಮನೋಹರ್, ನಿರ್ಮಾಪಕ


ಮೊದಲು ಅಂದುಕೊಂಡ ಸಿನಿಮಾ ಇದೇ.!

''ಮೊದಲು ಶಿವಣ್ಣ-ಸುದೀಪ್ ಗೆ ಇದೇ ಕಮರ್ಶಿಯಲ್ ಸಿನಿಮಾ ಮಾಡಬೇಕು ಅಂತ ಅಂದುಕೊಂಡಿದ್ವಿ. ಆಮೇಲೆ, ಮೊದಲ ಬಾರಿಗೆ ಇಬ್ಬರು ಒಟ್ಟಾಗುತ್ತಿರುವುದರಿಂದ ಡಿಫರೆಂಟ್ ಆಗಿ ಮಾಡೋಣ ಅಂತ ಪೀರಿಯಾಡಿಕ್ ಸಿನಿಮಾ ಪ್ಲಾನ್ ಆಯ್ತು. ಅದು ಡಿಲೇ ಆಗ್ತಿರೋ ಕಾರಣ ಕಮರ್ಶಿಯಲ್ ಸಿನಿಮಾ ಮಾಡ್ತಿದ್ದೀವಿ'' - ಸಿ.ಆರ್.ಮನೋಹರ್, ನಿರ್ಮಾಪಕ


ಖ್ಯಾತ ಸಂಗೀತ ನಿರ್ದೇಶಕರು ಬರ್ತಾರೆ.!

''ಕಮರ್ಶಿಯಲ್ ಸಿನಿಮಾಗೆ ಪ್ರೇಮ್ ಅವರದ್ದೇ ಕಥೆ. ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕರು ಮ್ಯೂಸಿಕ್ ಮಾಡಲಿದ್ದಾರೆ'' - ಸಿ.ಆರ್.ಮನೋಹರ್, ನಿರ್ಮಾಪಕ


ನಾಯಕಿಯರು ಯಾರು?

''ಹೀರೋಯಿನ್ ಇನ್ನೂ ಪ್ಲಾನ್ ಆಗಿಲ್ಲ. ಇನ್ನೊಂದು ತಿಂಗಳಲ್ಲಿ ಕನ್ಫರ್ಮ್ ಆಗುತ್ತೆ'' - ಸಿ.ಆರ್.ಮನೋಹರ್, ನಿರ್ಮಾಪಕ [ಶಿವಣ್ಣ-ಸುದೀಪ್ ರವರ 'ಕಲಿ' ಚಿತ್ರದ ನಾಯಕಿಯರು ಯಾರು?]


ಮೂರು ಭಾಷೆಯಲ್ಲಿ ಕಮರ್ಶಿಯಲ್ ಸಿನಿಮಾ.!

''ಈ ಚಿತ್ರವನ್ನೂ ಮೂರು ಭಾಷೆಯಲ್ಲಿ ರೆಡಿ ಮಾಡಬೇಕು ಎನ್ನುವ ಪ್ಲಾನ್ ಇದೆ. ಕನ್ನಡದಲ್ಲಿ ಶಿವಣ್ಣ-ಸುದೀಪ್, ತೆಲುಗು-ತಮಿಳಿನಲ್ಲಿ ಬೇರೆ ಸ್ಟಾರ್ ಗಳ ಕಾಂಬಿನೇಷನ್ ಮಾಡ್ಬೇಕು ಅಂದುಕೊಂಡಿದ್ದೀವಿ'' - ಸಿ.ಆರ್.ಮನೋಹರ್, ನಿರ್ಮಾಪಕ


ಟೈಟಲ್ ಏನು.?

''ಇನ್ನೂ ಶೀರ್ಷಿಕೆ ಹುಡುಕಾಟದಲ್ಲಿದ್ದೀವಿ'' - ಸಿ.ಆರ್.ಮನೋಹರ್, ನಿರ್ಮಾಪಕ


'ಕಲಿ' ಕಥೆ ಮುಗಿದ ಹಾಗೆ.?

''ಇಲ್ಲ, ಈ ಕಮರ್ಶಿಯಲ್ ಸಿನಿಮಾ ಮುಗಿದ ನಂತರ 'ಕಲಿ' ಮಾಡ್ತೀವಿ'' - ಸಿ.ಆರ್.ಮನೋಹರ್, ನಿರ್ಮಾಪಕ.


ಪ್ರೇಮ್ ಏನಂತಾರೆ.?

'ಕಲಿ' ಚಿತ್ರದ ಬಗ್ಗೆ ಪ್ರೇಮ್ ರವರನ್ನ ಮಾತನಾಡಿಸೋಣ ಅಂತ ಫೋನ್ ಮಾಡಿದರೆ, ಆ ಕಡೆಯಿಂದ ''ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು...'' ಹಲೋ ಟ್ಯೂನ್ ಮಾತ್ರ ಕೇಳಿಸುತ್ತಿತ್ತು.


English summary
Producer C.R.Manohar has clarified that Kannada Actor Shiva Rajkumar and Kiccha Sudeep starrer Kannada Film 'Kali' is shelved. Instead of 'Kali', C.R.Manohar is producing a Commercial film for Shiva Rajkumar and Sudeep, which is again directed by 'Jogi' Prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada