For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ ಮತ್ತು ಸುದೀಪ್: ಇಬ್ಬರಲ್ಲಿ 'ವಿಲನ್' ಯಾರು.?

  By Harshitha
  |

  ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ರನ್ನ ಮೊಟ್ಟ ಮೊದಲ ಬಾರಿಗೆ ತೆರೆ ಮೇಲೆ ಒಟ್ಟಾಗಿಸುವ ಸಾಹಸಕ್ಕೆ ಮೊದಲು ಕೈಹಾಕಿದವರು 'ಜೋಗಿ' ನಿರ್ದೇಶಕ ಪ್ರೇಮ್.

  ''ಬಾಹುಬಲಿ' ರೇಂಜ್ ನ ಸಿನಿಮಾ ಇದು'' ಅಂತ 'ಕಲಿ' ಚಿತ್ರವನ್ನ ಅನೌನ್ಸ್ ಮಾಡಿದ ಪ್ರೇಮ್, ಒಂದು ವರ್ಷ ಕಳೆದರೂ 'ಕಲಿ'ಗೆ ಕಿಕ್ ಸ್ಟಾರ್ಟ್ ಕೊಡಲಿಲ್ಲ.

  ಕಡೆಗೆ 'ಕಲಿ' ಚಿತ್ರವನ್ನ ಪೆಂಡಿಂಗ್ ನಲ್ಲಿಟ್ಟು, ಅದೇ ಶಿವಣ್ಣ ಹಾಗೂ ಸುದೀಪ್ ಜೊತೆಗೂಡಿ ಅಪ್ಪಟ ಕಮರ್ಶಿಯಲ್ ಸಿನಿಮಾ ಮಾಡಲು ಹೊರಟಿದ್ದಾರೆ ಪ್ರೇಮ್. ಅದರ ಟೈಟಲ್ ಕೂಡ ಜಗಜ್ಜಾಹೀರು ಮಾಡಿದ್ದಾರೆ.

  ಆ ಟೈಟಲ್ ಕೇಳಿದ್ರೆ, ನಿಮ್ಮ ತಲೆಗೆ ಹುಳ ಅಲ್ಲ ಸ್ವಾಮಿ, ಹೆಬ್ಬಾವು ನುಗ್ಗುವುದು ಗ್ಯಾರೆಂಟಿ..! ಮುಂದೆ ಓದಿ.....

  ಏನಪ್ಪಾ ಅಂತಹ ಟೈಟಲ್..?

  ಏನಪ್ಪಾ ಅಂತಹ ಟೈಟಲ್..?

  ಹೇಳಿ ಕೇಳಿ ಇದು ಪ್ರೇಮ್ ಸಿನಿಮಾ. ಗಿಮಿಕ್ ಮಾಡುವುದರಲ್ಲಿ ಎಕ್ಸ್ ಪರ್ಟ್ ಆಗಿರುವ ಪ್ರೇಮ್, ತಮ್ಮ ಹೊಸ ಚಿತ್ರಕ್ಕೆ ಯಾರೂ ನಿರೀಕ್ಷೆ ಮಾಡದ ಶೀರ್ಷಿಕೆ ಇಟ್ಟಿದ್ದಾರೆ. [ಶಾಕಿಂಗ್ ನ್ಯೂಸ್: ಶಿವಣ್ಣ - ಸುದೀಪ್ 'ಕಲಿ' ಸಿನಿಮಾ ನಿಂತುಹೋಯ್ತಾ.?]

  ಆ ಟೈಟಲ್ ಇದೇ..!

  ಆ ಟೈಟಲ್ ಇದೇ..!

  ಶಿವರಾಜ್ ಕುಮಾರ್ ಹಾಗೂ ಸುದೀಪ್ ತೆರೆ ಹಂಚಿಕೊಳ್ಳುತ್ತಿರುವ ಚಿತ್ರಕ್ಕೆ ಪ್ರೇಮ್ ಇಟ್ಟಿರುವ ಹೆಸರು 'ದಿ ವಿಲನ್'.! [ಎಕ್ಸ್ ಕ್ಲೂಸಿವ್: 'ಕಲಿ' ಗಾಸಿಪ್ ಬಗ್ಗೆ ಮೌನ ಮುರಿದ ನಿರ್ಮಾಪಕ ಮನೋಹರ್]

  ಯಾರು ವಿಲನ್.?

  ಯಾರು ವಿಲನ್.?

  ಶಿವರಾಜ್ ಕುಮಾರ್ ಹಾಗೂ ಸುದೀಪ್ ಪೈಕಿ 'ವಿಲನ್' ಯಾರು.? ಅಥವಾ ಇಬ್ಬರಿಗೂ ಸಮವಾಗಿ ತೊಡೆ ತಟ್ಟಿ ನಿಲ್ಲುವ ಗಟ್ಟಿ ಗುಂಡಿಗೆ ಪಾತ್ರವೇ ಬೇರೆ ಇದ್ಯಾ.? ಎಂಬುದು ಸದ್ಯಕ್ಕೆ ಎಲ್ಲರಲ್ಲೂ ಕಾಡುತ್ತಿರುವ ಪ್ರಶ್ನೆ.

  'ದಿ ವಿಲನ್' ಯಾವಾಗ ಶುರು.?

  'ದಿ ವಿಲನ್' ಯಾವಾಗ ಶುರು.?

  'ಕಲಿ' ಚಿತ್ರವನ್ನ ಮುಂದಕ್ಕೆ ತಳ್ಳಿರುವ ಪ್ರೇಮ್, 'ದಿ ವಿಲನ್' ಚಿತ್ರವನ್ನ ಆಗಸ್ಟ್ 12 ರಂದು ಶುರು ಮಾಡುವ ಪ್ಲಾನ್ ನಲ್ಲಿದ್ದಾರೆ.

  'ದಿ ವಿಲನ್' ಗೆ ನಾಯಕಿಯರು ಯಾರು.?

  'ದಿ ವಿಲನ್' ಗೆ ನಾಯಕಿಯರು ಯಾರು.?

  ಈ ಪ್ರಶ್ನೆಗೆ ಚಿತ್ರತಂಡ ಇನ್ನೂ ಉತ್ತರ ಕೊಟ್ಟಿಲ್ಲ.

  'ಕಲಿ' ಕಥೆ ಏನಾಯ್ತು.?

  'ಕಲಿ' ಕಥೆ ಏನಾಯ್ತು.?

  'ಕಲಿ' ಚಿತ್ರಕ್ಕೆ ಗ್ರಾಫಿಕ್ಸ್ ಕೆಲಸ ಬಹಳಷ್ಟು ಇದೆ. ಹೀಗಾಗಿ 'ಕಲಿ' ಚಿತ್ರ ಸೆಟ್ಟೇರಬೇಕು ಅಂದ್ರೆ ಕನಿಷ್ಟ ಇನ್ನೊಂದು ವರ್ಷ ಬೇಕು. ಅಷ್ಟರಲ್ಲಿ 'ದಿ ವಿಲನ್' ಸಿನಿಮಾ ಮಾಡುತ್ತಿದ್ದಾರೆ 'ಜೋಗಿ' ಪ್ರೇಮ್.

  'ದಿ ವಿಲನ್'ಗೆ ಬಂಡವಾಳ ಹಾಕುತ್ತಿರುವವರು ಯಾರು.?

  'ದಿ ವಿಲನ್'ಗೆ ಬಂಡವಾಳ ಹಾಕುತ್ತಿರುವವರು ಯಾರು.?

  'ಕಲಿ' ಚಿತ್ರಕ್ಕೆ ನೂರು ಕೋಟಿ ರೂಪಾಯಿ ಬಂಡವಾಳ ಹಾಕಲು ರೆಡಿಯಿದ್ದ ನಿರ್ಮಾಪಕ ಸಿ.ಆರ್.ಮನೋಹರ್, 'ದಿ ವಿಲನ್' ಚಿತ್ರವನ್ನ ನಿರ್ಮಾಣ ಮಾಡಲಿದ್ದಾರೆ.

  English summary
  Kannada Actor Shiva Rajkumar and Kiccha Sudeep starrer New movie is titled as 'The Villain', which is directed by Prem, produced by C.R.Manohar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X