For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಲಾಕ್‌ಡೌನ್‌ ನಂತರ ಮತ್ತೆ ಅಖಾಡಕ್ಕಿಳಿದ ಶಿವಣ್ಣ, ಧನಂಜಯ್

  |

  ಕೊರೊನಾ ಲಾಕ್‌ಡೌನ್‌ ಕಾರಣದಿಂದ ಶೂಟಿಂಗ್ ಇಲ್ಲದೇ ಮನೆಯಲ್ಲಿ ಕುಳಿತಿದ್ದ ಸ್ಟಾರ್ ನಟರು ಮತ್ತೆ ಅಖಾಡಕ್ಕಿಳಿಯುತ್ತಿದ್ದಾರೆ. ದೇಶದಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಿದ್ದು, ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದೆ. ಕರ್ನಾಟಕದಲ್ಲೂ ಶೂಟಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಹಿನ್ನೆಲೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳ ಚಿತ್ರೀಕರಣ ಮುಂದುವರಿಸಲು ಮುಂದಾಗಿದ್ದಾರೆ.

  ಬಹಳ ದಿನಗಳ ನಂತರ ಕರುನಾಡ ಚಿಕ್ರವರ್ತಿ ಶಿವರಾಜ್ ಕುಮಾರ್ ಶೂಟಿಂಗ್‌ಗೆ ಮರಳಿದ್ದಾರೆ. ತಮಿಳು ನಿರ್ದೇಶಕ ವಿಜಯ್ ಮಿಲ್ಟನ್ ಜೊತೆ ಮಾಡುತ್ತಿರುವ 123ನೇ ಪ್ರಾಜೆಕ್ಟ್‌ಗೆ ಮರುಚಾಲನೆ ಕೊಟ್ಟಿದ್ದಾರೆ. ಹ್ಯಾಟ್ರಿಕ್ ಹೀರೋ ಶೂಟಿಂಗ್‌ಗೆ ಹಾಜರಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಂದೆ ಓದಿ...

  ಶೀಘ್ರದಲ್ಲಿಯೇ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಶಿವಣ್ಣ: ಯಾವ ಸಿನಿಮಾ?ಶೀಘ್ರದಲ್ಲಿಯೇ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಶಿವಣ್ಣ: ಯಾವ ಸಿನಿಮಾ?

  ಡಾಲಿ ಜೊತೆ ಶಿವಣ್ಣ

  ಡಾಲಿ ಜೊತೆ ಶಿವಣ್ಣ

  ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಜೊತೆ 'ಡಾಲಿ' ಧನಂಜಯ್ ಸಹ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕೊರೊನಾ ಲಾಕ್‌ಡೌನ್‌ ಬಳಿಕ ಇಬ್ಬರು ಶೂಟಿಂಗ್‌ಗೆ ಹಾಜರಾಗಿದ್ದು, ಶಿವಣ್ಣ ಟ್ರ್ಯಾಕ್ಟರ್ ಓಡಿಸುತ್ತಿರುವ ಫೋಟೋ ಗಮನ ಸೆಳೆಯುತ್ತಿದೆ.

  ಕೊನೆಯ ಹಂತದ ಚಿತ್ರೀಕರಣ

  ಕೊನೆಯ ಹಂತದ ಚಿತ್ರೀಕರಣ

  ಸದ್ಯಕ್ಕೆ ಸಿನಿಮಾದ ಹೆಸರು ಅಂತಿಮವಾಗಿಲ್ಲ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ನಿರ್ದೇಶಕ ಈಗ ಕೊನೆಯ ಹಂತದ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ಕೆಲವು ಆಕ್ಷನ್ ದೃಶ್ಯಗಳು ಹಾಗೂ 20 ನಿಮಿಷದ ಕ್ಲೈಮ್ಯಾಕ್ಸ್‌ ದೃಶ್ಯಗಳ ಚಿತ್ರೀಕರಣವಷ್ಟೆ ಬಾಕಿ ಇದೆ. ಇದು ಕೊನೆಯ ಶೆಡ್ಯೂಲ್ ಎಂದು ಸ್ವತಃ ವಿಜಯ್ ಮಿಲ್ಟನ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

  ಶಿವರಾಜ್ ಕುಮಾರ್ 'ಶಿವಪ್ಪ' ಸಿನಿಮಾದ ಟೈಟಲ್ ಬದಲಾವಣೆಶಿವರಾಜ್ ಕುಮಾರ್ 'ಶಿವಪ್ಪ' ಸಿನಿಮಾದ ಟೈಟಲ್ ಬದಲಾವಣೆ

  'ಶಿವಪ್ಪ' ಟೈಟಲ್ ಬದಲಾವಣೆ

  'ಶಿವಪ್ಪ' ಟೈಟಲ್ ಬದಲಾವಣೆ

  ಈ ಹಿಂದೆ ವರದಿಯಾಗಿರುವಂತೆ ವಿಜಯ್ ಮಿಲ್ಟನ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ಸಿನಿಮಾಗೆ 'ಶಿವಪ್ಪ' ಎಂದು ನಾಮಕರಣ ಮಾಡಲಾಗಿತ್ತು. ಆದರೆ ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಿರಲಿಲ್ಲ. ಆಮೇಲೆ ಕೆಲವು ದಿನಗಳ ನಂತರ 'ಶಿವಪ್ಪ' ಶೀರ್ಷಿಕೆ ಬೇಡ ಎಂದು ಕೈಬಿಟ್ಟರು ಎನ್ನುವ ಸುದ್ದಿಯೂ ವರದಿಯಾಯಿತು.

  ಶಿವರಾಜ್ ಕುಮಾರ್ ಹುಟ್ಟಿದ ದಿನ ಅಣ್ಣಾವ್ರು ಏನ್ ಮಾಡಿದ್ರು ಗೊತ್ತಾ? | Filmibeat Kannada
  ಸೆಂಚುರಿ ಸ್ಟಾರ್ ಬರ್ತಡೇಗೆ ಟೀಸರ್

  ಸೆಂಚುರಿ ಸ್ಟಾರ್ ಬರ್ತಡೇಗೆ ಟೀಸರ್

  ಶಿವರಾಜ್ ಕುಮಾರ್, ಡಾಲಿ ಧನಂಜಯ್ ಜೊತೆ 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ. ಜುಲೈ 12ಕ್ಕೆ ಶಿವಣ್ಣನ ಹುಟ್ಟುಹಬ್ಬವಿದ್ದು, ಆ ವಿಶೇಷವಾಗಿ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ ಚಿತ್ರತಂಡ. ಅಂದ್ಹಾಗೆ, ಈ ಚಿತ್ರಕ್ಕೆ ಕೃಷ್ಣ ಸಮರ್ಥ್ ಬಂಡವಾಳ ಹಾಕಿದ್ದಾರೆ.

  English summary
  Kannada actor Shiva Rajkumar and Vijay Milton's SRK123 Movie Shooting Started after lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X