ಅರ್ಜುನ್ ಜನ್ಯ, ಶಿವಣ್ಣ ಕಾಂಬಿನೇಷನ್ ಸಿನಿಮಾ ಟೈಟಲ್ ರಿವೀಲ್!

ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ, ನಟ ಶಿವರಾಜ್ ಕುಮಾರ್ ನಟಿಸದ ಕತೆಗಳಿಲ್ಲ ಎನ್ನಬಹುದು. ಯಾಕೆಂದರೆ ನಟ ಶಿವರಾಜ್ ಕುಮಾರ್ ತಮ್ಮ ಸುತ್ತಲೂ ಯಾವುದೇ ತಡೆಗೋಡೆ ಇಟ್ಟುಕೊಂಡಿಲ್ಲ.

ಹೊಸಬರಾದರೂ ಸರಿಯೇ ಶಿವಣ್ಣ ಕಥೆ ಇಷ್ಟವಾದರೆ ಸಿನಿಮಾ ಮಾಡುತ್ತಾರೆ. ವರ್ಷಕ್ಕೆ ಹೆಚ್ಚು ಸಿನಿಮಾ ಬಿಡುಗಡೆ ಆಗೋದು ಕೂಡ ಶಿವರಾಜ್ ಕುಮಾರ್ ಅವರದ್ದು ಮಾತ್ರವೇ. ಸಿನಿಮಾ ಮಾಡುವ ಮೂಲಕ ನಟ ಶಿವರಾಜ್ ಕುಮಾರ್ ಎಲ್ಲರ ಸಿನಿಮಾ ಕನಸಿಗೆ ಸಾಥ್ ಕೊಡುತ್ತಾರೆ.

ಈಗ ಶಿವರಾಜ್ ಕುಮಾರ್ ಸಿನಿಮಾ ಮೂಲಕವೇ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ನಿರ್ದೇಶಕ ಆಗ್ತಿದ್ದಾರೆ. ಶಿವರಾಜ್ ಕುಮಾರ್ ಜೊತೆಗೆ ಅರ್ಜುನ್ ಜನ್ಯ ಕೈ ಜೋಡಿಸಿದ್ದು, ಸಂಗೀತ ಮಾಂತ್ರಿಕನ ಕಥೆಯನ್ನು ಶಿವರಾಜ್‌ಕುಮಾರ್ ಒಪ್ಪಿಕೊಂಡಿದ್ದಾರೆ.

ನಿರ್ದೇಶಕನಾದ ಅರ್ಜುನ್ ಜನ್ಯ!

ನಿರ್ದೇಶಕನಾದ ಅರ್ಜುನ್ ಜನ್ಯ!

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈಗ ನಿರ್ದೇಶಕ ಆಗ್ತಿದ್ದಾರೆ. ನಟ ಶಿವರಾಜ್ ಕುಮಾರ್‌ಗೆ ನಿರ್ದೇಶನ ಮಾಡುವ ಮೂಲಕ ಅರ್ಜುನ್ ಜನ್ಯ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಈ ಸುದ್ದಿ ಹೆಚ್ಚಿನ ಕುತೂಹಲ ಹುಟ್ಟು ಹಾಕಿದೆ. ಅರ್ಜುನ್ ಜನ್ಯ ಮೊದಲ ಸಿನಿಮಾ ಆದ ಕಾರಣ ಹೆಚ್ಚಿನ ನಿರೀಕ್ಷೆ ಇದೆ. ಇನ್ನು ಈ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆಯಂತೆ.

ಚಿತ್ರದ ಟೈಟಲ್ 45?

ಚಿತ್ರದ ಟೈಟಲ್ 45?

ಸದ್ಯ ಚಿತ್ರದ ಟೈಟಲ್ ಬಗ್ಗೆ ಚರ್ಚೆ ಶುರುವಾಗಿದೆ. ಈ ಚಿತ್ರಕ್ಕೆ '45' ಎನ್ನುವ ಟೈಟಲ್ ನಿಗದಿ ಆಗಿದೆ ಎಂದು ಸಿನಿಮಾ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಸಿನಿಮಾದ ಟೈಟಲ್ ಬಗ್ಗೆ ಆಗಲಿ, ಕಥೆಯ ಬಗ್ಗೆ ಆಗಲಿ ಚಿತ್ರತಂಡ ಅಧಿಕೃತವಾಗಿ ಏನನ್ನು ಹೇಳಿಕೊಂಡಿಲ್ಲ. ಇನ್ನೊಂದು ದಿನದಲ್ಲಿ ಇದಕ್ಕೆ ಉತ್ತರ ಸಿಗಲಿದೆ.

ಶಿವಣ್ಣ ಹುಟ್ಟುಹಬ್ಬಕ್ಕೆ ಟ್ರೈಟಲ್!

ಶಿವಣ್ಣ ಹುಟ್ಟುಹಬ್ಬಕ್ಕೆ ಟ್ರೈಟಲ್!

ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಈ ಚಿತ್ರ ಟೈಟಲ್ ರಿವೀಲ್ ಆಗಲಿದೆ. ಇದೇ ಜುಲೈ 12ಕ್ಕೆ ನಟ ಶಿವ ರಾಜ್ ಕುಮಾರ್ ಹುಟ್ಟುಹಬ್ಬ. ಈ ವಿಶೇಷ ದಿನದಂದು ಅರ್ಜುನ್ ಜನ್ಯ ನಿರ್ದೇಶನದ ಹೊಸ ಸಿನಿಮಾ ಟೈಟಲ್ ರಿವೀಲ್ ಆಗಲಿದೆ. ಇದರ ಜೊತೆಗೆ ಶ್ರೀನಿ ನಿರ್ದೇಶನದ 'ಘೋಸ್ಟ್' ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಲಿದೆ.

ಈ ಬಾರಿ ಶಿವಣ್ಣ ಹುಟ್ಟುಹಬ್ಬ ಇಲ್ಲ!

ಈ ಬಾರಿ ಶಿವಣ್ಣ ಹುಟ್ಟುಹಬ್ಬ ಇಲ್ಲ!

ಜುಲೈ 12ರಂದು ಶಿವಣ್ಣನ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ತಯಾರಿಗಿದ್ದರೆ, ನಿಮಗೊಂದು ಕಹಿ ಸುದ್ದಿ ಇಲ್ಲಿದೆ. ಯಾಕೆಂದರೆ ನಟ ಶಿವರಾಜ್ ಕುಮಾರ್ ಈ ಬಾರಿ ಹುಟ್ಟುಹಬ್ಬವನ್ನು ಆಚರಣೆ ಇಲ್ಲ. ಹಾಗಾಗಿ ಅಭಿಮಾನಿಗಳಿಗೆ ಸಂಭ್ರಮದ ಆಚರಣೆ ಇರುವುದಿಲ್ಲ. ಮನೆಯ ಬಳಿ ಅದ್ದೂರಿ ಸೆಲೆಬ್ರೇಷನ್ ಇರುವುದಿಲ್ಲ. ಅಪ್ಪು ಅಗಲಿಕೆಯ ನೋವಿನಿಂದಾಗಿ ಶಿವಣ್ಣ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

More from Filmibeat

English summary
Shiva Rajkumar Arjun Janya Upcoming Movie Reveal, launch On Shivaraj Kumar Birthday, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X