ಹಲಗೂರಿನ ಬೆಣ್ಣೆ ದೋಸೆ ಸವಿದ ಸೆಂಚುರಿ ಸ್ಟಾರ್ ಶಿವಣ್ಣ

Recommended Video

ಇದು ಶಿವಣ್ಣನ ನಿಜವಾದ ಸಿಂಪ್ಲಿಸಿಟಿ..! | FILMIBEAT KANNADA

ಹಲಗೂರಿನ ಬೆಣ್ಣೆ ದೋಸೆ ಅಂದ್ರೆ ಮಳವಳ್ಳಿ ಸುತ್ತಮುತ್ತ ಬಹಳ ಫೇಮಸ್. ಹಲಗೂರಿನಲ್ಲಿ ಖ್ಯಾತಿ ಹೊಂದಿರುವ ಬಾಬು ಅವರ ಶೆಡ್ ಹೋಟೆಲ್ ನಲ್ಲಿ ಬೆಣ್ಣೆ ದೋಸೆ ತಿನ್ನುವ ಮೂಲಕ ಶಿವರಾಜ್ ಕುಮಾರ್ ಗಮನ ಸೆಳೆದಿದ್ದಾರೆ.

ಸ್ಯಾಂಡಲ್ ವುಡ್ ನ ದೊಡ್ಡ ಸ್ಟಾರ್ ಆಗಿರುವ ಹ್ಯಾಟ್ರಿಕ್ ಹೀರೋ ಸಾಮಾನ್ಯ ವ್ಯಕ್ತಿಯಿಂದ ಶೆಡ್ ಹೋಟೆಲ್ ನಲ್ಲಿ ದೋಸೆ ತಿಂದಿರುವುದು ಶಿವಣ್ಣ ಸರಳತೆ ಏನು ಎಂಬುದನ್ನ ತೋರಿಸುತ್ತದೆ. ಹಲಗೂರಿನ ದೋಸೆ ಅಂಗಡಿಯಲ್ಲಿ ನಿರ್ದೇಶಕ ರಘುರಾಮ್ ಮತ್ತು ಶಿವಣ್ಣನ ಆತ್ಮೀಯ ಸ್ನೇಹಿತ ನಟ ಗುರುರಾಜ್, ಕೆಪಿ ಶ್ರೀಕಾಂತ್ ಸಾಥ್ ನೀಡಿದ್ದಾರೆ.

ಶಿವರಾಜ್ ಕುಮಾರ್ ಅವರಿಗೆ ದೋಸೆ ಅಂದ್ರೆ ಹೆಚ್ಚು ಇಷ್ಟ. ಇದಕ್ಕೆ ಮುಂಚೆ ದಾವಣಗೆರೆಯ ಹೋಟೆಲ್ ವೊಂದರಲ್ಲಿ ಸ್ವತಃ ತಾವೇ ಬೆಣ್ಣೆ ದೋಸೆ ಮಾಡಿದ್ದರು. ಆ ಫೋಟೋ ಬಹಳ ವೈರಲ್ ಆಗಿತ್ತು. ಈಗ ಸಾಮಾನ್ಯ ವ್ಯಕ್ತಿಯಂತೆ ಶೆಡ್ ಹೋಟೆಲ್ ನಲ್ಲಿ ದೋಸೆ ತಿನ್ನುವ ಮೂಲಕ ಗಮನ ಸೆಳೆದಿದ್ದಾರೆ.

shiva-rajkumar-ate-butter-dosa-in-halagur

ಅಂದ್ಹಾಗೆ, ನಟ ಶಿವರಾಜ್ ಕುಮಾರ್ ಅವರು ಮಲೆ ಮಹದೇಶ್ವರ ಸ್ವಾಮಿ ಸನ್ನಿಧಿಗೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿದ್ದರು. ದೇವರ ದರ್ಶನದ ಬಳಿಕ ಅನ್ನ ದಾಸೋಹ ಭವನಕ್ಕೆ ಭೇಡಿ ದೇಣಿಗೆ ನೀಡಿದ್ದರು.

ಇದಕ್ಕೂ ಮುಂಚೆ ಮುತ್ತತ್ತಿಗೂ ಕರುನಾಡ ಚಕ್ರವರ್ತಿ ಭೇಟಿ ಮಾಡಿದ್ದರು. ಆ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಹಲಗೂರಿನ ಬಳಿ ಬಾಬು ಶೆಡ್ ಹೋಟೆಲ್ ಬಳಿ ನಿಲ್ಲಿಸಿ ದೋಸೆ ಸವಿದಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದೆ.

shiva-rajkumar-ate-butter-dosa-in-halagur

ಭುಜದ ಸಮಸ್ಯೆಯಿಂದ ಬಳಲುತ್ತಿದ್ದ ಶಿವರಾಜ್ ಕುಮಾರ್ ಲಂಡನ್ ನಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಆಗಿದ್ದರು. ಇದೀಗ, ಮತ್ತೆ ಚಿತ್ರೀಕರಣಕ್ಕೆ ಮರಳಲು ಸಜ್ಜಾಗಿದ್ದಾರೆ.

ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರವನ್ನ ಶಿವಣ್ಣ ಕೈಗೆತ್ತಿಕೊಂಡಿದ್ದಾರೆ. ದ್ರೋಣ ಮತ್ತು ಆಯುಷ್ಮಾನ್ ಭವ ಚಿತ್ರಗಳ ಶೂಟಿಂಗ್ ಬಹುತೇಕ ಮುಗಿದಿದೆ. ಜೊತೆಗೆ ಎಸ್.ಆರ್.ಕೆ ಚಿತ್ರವನ್ನ ಕೂಡ ಆರಂಭಿಸಲಿದ್ದಾರೆ.

More from Filmibeat

English summary
Kannada actor Shiva rajkumar has visited malai mahadeshwara temple and he ate Butter Dosa In Halagur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X