ಶಿವರಾಜ್ ಕುಮಾರ್ ಜನ್ಮದಿನ ಮಹೋತ್ಸವಕ್ಕೆ ಚಾಲನೆ ನೀಡಿದ ಸುದೀಪ್
ಶಿವರಾಜ್ ಕುಮಾರ್ ಹುಟ್ಟುಹಬ್ಬ ಇನ್ನೂ ವಾರವಿರುವಾಗಲೇ ಸಂಭ್ರಮ ಆರಂಭಗೊಂಡಿದೆ. ಜುಲೈ 12 ಕ್ಕೆ ಶಿವರಾಜ್ ಕುಮಾರ್ ಹುಟ್ಟುಹಬ್ಬ. ಅದಕ್ಕೆ ಈಗಾಗಲೇ ತಯಾರಿಗಳು ಆರಂಭವಾಗಿವೆ.
Recommended Video
ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ಬಿಡುಗಡೆ ಆಗಿದ್ದು, ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿದ್ದು ಮತ್ತೊಬ್ಬ ಸ್ಟಾರ್ ನಟ ಸುದೀಪ್.
ಹೌದು, ಸುದೀಪ್ ಅವರು ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಬಳಸಲು ಕಾಮನ್ ಡಿಪಿ ಬಿಡುಗಡೆ ಮಾಡಿದ್ದಾರೆ. ಇದೇ ಚಿತ್ರವನ್ನು ಶಿವಣ್ಣ ಹುಟ್ಟುಹಬ್ಬದಂದು ಅಭಿಮಾನಿಗಳು ಪ್ರೊಫೈಲ್‌ಗಳಲ್ಲಿ ಬಳಸಲಿದ್ದಾರೆ.

ಹೇಗಿದೆ ಕಾಮನ್ ಡಿಪಿ?
ಶಿವಣ್ಣ ಅವರ ಬಂಗಾರದ ಬಣ್ಣದ ಪುತ್ಥಳಿಯ ಚಿತ್ರವನ್ನು ಕಾಮನ್ ಡಿಪಿ ಮಾಡಲಾಗಿದೆ. ಸರಳತೆಯ ಮೂರ್ತರೂಪ ಎಂಬ ಟ್ಯಾಗ್ ಲೈನ್ ಬರೆಯಲಾಗಿದೆ. ಜೊತೆಗೆ 58ನೇ ಶಿವಣ್ಣ ಮಹೋತ್ಸವ ಎಂದು ಬರೆಯಲಾಗಿದೆ. ಕಾಮನ್ ಡಿಪಿ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಚೆನ್ನಾಗಿಲ್ಲವೆಂದು ಸಹ ಅಭಿಪ್ರಾಯಪಟ್ಟಿದ್ದಾರೆ.

ಮನೆಯ ಬಳಿ ಬರಬೇಡಿರೆಂದು ಮನವಿ
ಈ ಬಾರಿಯ ಹುಟ್ಟುಹಬ್ಬ ಅತ್ಯಂತ ಸರಳವಾಗಿರುತ್ತದೆ. ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳನ್ನು ಭೇಟಿ ಆಗಲು ಆಗುವುದಿಲ್ಲ, ಯಾರೂ ಮನೆಯ ಬಳಿ ಬರಬೇಡಿರೆಂದು ಸ್ವತಃ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

ಮನೆಯಲ್ಲಿ ಇರುವುದಿಲ್ಲವೆಂದು ಶಿವಣ್ಣ
ಕೊರೊನಾ ವೈರಸ್ ಸಂಕಷ್ಟದಲ್ಲಿ ಎಲ್ಲರೂ ಮುಳುಗಿರುವ ಕಾರಣ, ಅಭಿಮಾನಿಗಳು ಮನೆಯ ಬಳಿ ಬಂದರೆ ಸಾಮಾಜಿಕ ಅಂತರ ಕಾಪಾಡುವುದು ಸಾಧ್ಯವಿಲ್ಲವಾದ್ದರಿಂದ ಶಿವಣ್ಣ ಹೀಗೆ ಮನವಿ ಮಾಡಿದ್ದಾರೆ. ಹುಟ್ಟುಹಬ್ಬದಂದು ನಾನು ಮನೆಯಲ್ಲಿ ಇರುವುದಿಲ್ಲವೆಂದು ಸಹ ಹೇಳಿದ್ದಾರೆ.

ಭಜರಂಗಿ 2 ಸಿನಿಮಾ ಟ್ರೇಲರ್ ಬಿಡುಗಡೆ
ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಭಜರಂಗಿ 2 ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಅದರ ಜೊತಗೆ ಶಿವಣ್ಣ ಅವರ ಕೆಲವು ಸಿನಿಮಾಗಳು ಘೋಷಣೆ ಸಹ ಆಗುವ ನಿರೀಕ್ಷೆ ಇದೆ. ಜುಲೈ 12 ಕ್ಕೆ ಶಿವಣ್ಣ ಅವರಿಗೆ 58 ನೇ ವರ್ಷಕ್ಕೆ ಕಾಲಿಡಲಿದ್ದಾರೆ.


Click it and Unblock the Notifications











