ಪ್ರೀತಿಯ ಶಿವಣ್ಣನ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

By Naveen

Recommended Video

ಹುಟ್ಟುಹಬ್ಬದಂದು ಶಿವಣ್ಣನ ಮನೆಯಲ್ಲಿ ಅಭಿಮಾನಿಗಳ ಕಲರವ...!! | Filmibeat Kannada

ನಟ ಶಿವರಾಜ್ ಕುಮಾರ್ ಇಂದು ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.‌ ನಿನ್ನೆ ತಡ ರಾತ್ರಿಯಿಂದಲೇ ನಾಗವರ ಬಳಿಯ ಶಿವಣ್ಣ ಅವರ ಶ್ರೀ ಮುತ್ತು ನಿವಾಸದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಶುರುವಾಗಿದೆ.

ನಿನ್ನೆ ರಾತ್ರಿ 12 ಗಂಟೆಗೆ ಸರಿಯಾಗಿ ಶಿವಣ್ಣ ಕೇಕ್ ಕಟ್ ಮಾಡುವ ಮೂಲಕ ಬರ್ತ್ ಡೇ ಆಚರಿಸಿಕೊಂಡರು. ನೂರಾರೂ ಅಭಿಮಾನಿಗಳು ತಂದ ಉಡುಗೋರೆಯನ್ನು ಸ್ವೀಕರಿಸಿ, ಅವರ ಜೊತೆಗೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟರು ಶಿವಣ್ಣ.

Shiva rajkumar celebrating his 56th birthday

ಈ ವರ್ಷ ಶಿವಣ್ಣನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಲು ಅಭಿಮಾನಿಗಳು ನಿರ್ಧಾರ ಮಾಡಿದ್ದಾರೆ. ಶಿವು ಅಡ್ಡ ಟೀಂ ಬರೋಬ್ಬರಿ 56 ಅಡಿ ಕೇಕ್ ಅನ್ನು ಶಿವಣ್ಣ ನಿಂದ ಕಟ್ ಮಾಡಿಸುವ ಪ್ಲಾನ್ ಮಾಡಿದೆ. ಕಳೆದ ವರ್ಷ ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಸರಳವಾಗಿ ಮಾಡಿದ್ದರು. ಆದರೆ ಈ ಬಾರಿ ಅವರ ಸಂಭ್ರಮ ಡಬಲ್ ಆಗಿದೆ. 'ಟಗರು' ಸಿನಿಮಾದ ಯಶಸ್ಸು ಕೂಡ ಅವರ ಸಂತಸಕ್ಕೆ ಕಾರಣ ಆಗಿದೆ.

ಇನ್ನು ಶಿವಣ್ಣನ ಹುಟ್ಟುಹಬ್ಬದ ವಿಶೇಷವಾಗಿ ಅನೇಕ ಸಿನಿಮಾಗಳ ಹೊಸ ಹೊಸ ಪೊಸ್ಟರ್ ಗಳು ಬಿಡುಗಡೆಯಾಗುತ್ತಿವೆ. 'ಕವಚ', 'ರುಸ್ತುಂ', 'ವೈರ ಮುಡಿ' ಹಾಗೂ ಯೊಗರಾಜ್ ಭಟ್ - ಶಿವಣ್ಣನ ಕಾಂಬಿನೇಶನ್ ಸಿನಿಮಾಗಳ ಪೋಸ್ಟರ್ ಗಳು ಹೊರಬಂದಿದೆ. ಜೊತೆಗೆ ಟಿ ಎಸ್ ನಾಗರಭರಣ ಅವರ ಜೊತೆಗೆ ಶಿವಣ್ಣ ಮತ್ತೊಂದು ಕಾದಂಬರಿ ಆಧಾರಿತ ಸಿನಿಮಾ ಮಾಡುತ್ತಿದ್ದು, ಈ ಚಿತ್ರ ಕೂಡ ಇಂದು ಅನೌನ್ಸ್ ಆಗಲಿದೆ.

More from Filmibeat

English summary
Kannada actor Shiva rajkumar celebrating his 56th birthday Today (July 12th) in his residence 'Shree Muttu' at Nagavara.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X