For Quick Alerts
  ALLOW NOTIFICATIONS  
  For Daily Alerts

  ಚಿರಯುವಕ ಶಿವರಾಜ್‌ ಕುಮಾರ್‌ಗೆ ಹುಟ್ಟುಹಬ್ಬದ ಸಂಭ್ರಮ

  |

  ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರಿಗೆ ಇಂದು 59ನೇ ವರ್ಷದ ಹುಟ್ಟುಹಬ್ಬ. ಆದರೆ ಕೊರೊನಾ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಶಿವಣ್ಣ.

  ಕೊರೋನ ಕಾರಣದಿಂದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ ಶಿವಣ್ಣ! | Filmibeat Kannada

  ''ಹುಟ್ಟುಹಬ್ಬಕ್ಕಿಂತಲೂ ಆರೋಗ್ಯ ಮುಖ್ಯ ಯಾರೂ ಸಹ ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡ. ಹುಟ್ಟುಹಬ್ಬಕ್ಕಿಂತಲೂ ಆರೋಗ್ಯ ಮುಖ್ಯ. ನಾನು ಸಹ ಹುಟ್ಟುಹಬ್ಬದಂತೆ ಕಾರಣಾಂತರಗಳಿಂದ ಮನೆಯಲ್ಲಿ ಇರುವುದಿಲ್ಲ'' ಎಂದಿದ್ದಾರೆ ನಟ ಶಿವರಾಜ್ ಕುಮಾರ್.

  ವಯಸ್ಸು 59 ಆದರು ಯುವಕರನ್ನು ನಾಚಿಸುವ ಉತ್ಸಾಹ, ಅಂದ ಉಳ್ಳ ಶಿವರಾಜ್ ಕುಮಾರ್, ಅದೇ ಉತ್ಸಾಹದಿಂದ ಈಗಲೂ ಹಲವು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ.

  ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂದರ್ಭ ಇಂದು ಶಿವರಾಜ್ ಕುಮಾರ್ ಅಭಿನಯದ ಹಲವು ಸಿನಿಮಾಗಳ ಹೆಸರು ಘೋಷಣೆ, ಟೀಸರ್ ಬಿಡುಗಡೆ ಆಗಲಿದೆ.'

  ವಿಜಯ್ ಮಿಲ್ಟನ್ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ 123ನೇ ಸಿನಿಮಾದ ಹೆಸರು ಇಂದು ಘೋಷಣೆ ಆಗಲಿದೆ. ಈ ಸಿನಿಮಾದಲ್ಲಿ ನಟ ಧನಂಜಯ್ ಹಾಗೂ ಪೃಥ್ವಿ ಅಂಬರ್ ಸಹ ನಟಿಸುತ್ತಿದ್ದಾರೆ.

  ರಿಷಬ್ ಶೆಟ್ಟಿ, ಶಿವಣ್ಣನಿಗಾಗಿ ನಿರ್ದೇಶಿಸಲಿರುವ ಹೊಸ ಸಿನಿಮಾದ ಟೈಟಲ್ ಸಹ ಇಂದೇ ಘೋಷಣೆ ಆಗಲಿದೆ. ಶಿವಣ್ಣನಿಗಾಗಿ ಅನಿಲ್ ರವಿಪುಡಿ ನಿರ್ದೇಶಿಸಲಿರುವ ಸಿನಿಮಾ, ಹರ್ಷಾ ನಿರ್ದೇಶಿಸಲಿರುವ ಸಿನಿಮಾಗಳ ಬಗ್ಗೆಯೂ ಅಪ್‌ಡೇಟ್ ಇಂದು ಹೊರಬೀಳುವ ಸಾಧ್ಯತೆ ಇದೆ.

  English summary
  Actor Shiva Rajkumar celebrating 61st birthday on July 12. He requested his fans to not to celebrate his birthday on public due to corona situation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X