ಶಿವಣ್ಣನಿಗೆ ಹುಟ್ಟುಹಬ್ಬದ ಸಂಭ್ರಮ: ಶುಭಾಶಯಗಳ ಮಹಾಪೂರ

ಇಂದು ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ. 1962 ರ ಜುಲೈ 12 ರಂದು ಜನಿಸಿದ ಶಿವರಾಜ್ ಕುಮಾರ್ ಇಂದು ತಮ್ಮ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಕಳೆದ ಕೆಲ ವರ್ಷಗಳಂತೆ ಶಿವರಾಜ್ ಕುಮಾರ್ ತಮ್ಮ ಈ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಪುನೀತ್ ಅಗಲಿಕೆಯ ನೋವು ಅವರನ್ನು ಮನದ ಮೂಲೆಯಲ್ಲಿ ಕಾಡುತ್ತಲೇ ಇರುವ ಕಾರಣ ಬಹಿರಂಗ ಸಂಭ್ರಮಕ್ಕೆ ಒಪ್ಪಿಲ್ಲ ಶಿವರಾಜ್ ಕುಮಾರ್.

ಪ್ರತಿ ವರ್ಷವೂ ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಮನೆಯ ಬಳಿ ಸೇರಿ ಶಿವಣ್ಣನಿಗೆ ಶುಭಾಶಯ ಕೋರುತ್ತಿದ್ದರು. ಆದರೆ ಈ ಬಾರಿ ತಾವು ಶಿವಣ್ಣ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕಾರಣ, ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯಗಳನ್ನು ಕೋರಲಾಗುತ್ತಿದೆ.

Shiva Rajkumar Celebrating His 60th Birthday On July 12, 2022

ಶಿವರಾಜ್ ಕುಮಾರ್ ಅವರು ತಮ್ಮ ಕುಟುಂಬದ ಆಪ್ತರು ಹಾಗೂ ಕೆಲವು ಆಯ್ದ ಕೆಲವು ಗೆಳೆಯರೊಟ್ಟಿಗೆ ಹುಟ್ಟುಹಬ್ಬವನ್ನು ನಿನ್ನೆ ರಾತ್ರಿಯೇ ಆಚರಿಸಿಕೊಂಡಿದ್ದಾರೆ. ಪತ್ನಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಶಿವಣ್ಣ ಕೇಕ್ ತಿನ್ನಿಸುತ್ತಿರುವ ಕೆಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಲವು ಹೊಸ ಸಿನಿಮಾಗಳು, ಸಿನಿಮಾಗಳ ಪೋಸ್ಟರ್‌ಗಳು, ಹಾಡುಗಳು, ಟೀಸರ್‌ಗಳು ಇಂದು ಬಿಡುಗಡೆ ಆಗಲಿವೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ತೊಡಗಿಕೊಂಡಿದ್ದು, ಎಲ್ಲ ಸಿನಿಮಾ ತಂಡಗಳು ಶಿವಣ್ಣನ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಸಜ್ಜಾಗಿವೆ.

ಕಳೆದ ವರ್ಷದ ಹುಟ್ಟುಹಬ್ಬವನ್ನು ಶಿವರಾಜ್ ಕುಮಾರ್ ಸರಳವಾಗಿ ಆಚರಿಸಿಕೊಂಡಿದ್ದರು. ಕೆಲವು ಆಪ್ತ ಗೆಳೆಯರಷ್ಟೆ ಹುಟ್ಟುಹಬ್ಬದ ದಿನದಂದು ಶಿವಣ್ಣನ ಮನೆಗೆ ಹೋಗಿ ಅವರಿಗೆ ಜೈಕಾರ ಹಾಕಿ ಕೇಕ್ ಕತ್ತರಿಸಿ ಶುಭ ಹಾರೈಸಿದ್ದರು. ಪುನೀತ್ ರಾಜ್‌ಕುಮಾರ್ ಸಹ ಅಂದು ಶಿವಣ್ಣನಿಗೆ ಜೈಕಾರ ಹಾಕಿದ್ದರು. ಶಿವಣ್ಣನ ಜೊತೆಗೆ ಕೆಳಗೆ ಮಂಡಿ ಊರಿ ಕೂತು ಅಪ್ಪು ಫೋಟೊಕ್ಕೆ ಫೋಸ್ ನೀಡಿದ್ದರು. ಆದರೆ ಈ ಬಾರಿ ಅಪ್ಪು ಇಲ್ಲದೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಪುನೀತ್ ರಾಜ್‌ಕುಮಾರ್.

More from Filmibeat

English summary
Actor Shiva Rajkumar celebrating his 60th Birthday on July 12, 2022. He request fans to not come near his home. because he is celebrating this birthday simply.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X