ಅಭಿಮಾನಿಗಳ ಪ್ರೀತಿಗೆ ಚಿರಋಣಿ, ನಾನು ಚೆನ್ನಾಗಿದ್ದೀನಿ: ಶಿವಣ್ಣ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತೀವ್ರ ಚಳಿ ಮತ್ತು ಜ್ವರದಿಂದ ಬಳಲುತ್ತಿದ್ದು, ಇಂದು ಮುಂಜಾನೆ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು.
ಶಿವಣ್ಣ ಸಹೋದರ ಪುನೀತ್ ರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಸೆಂಚುರಿಸ್ಟಾರ್ ಆರೋಗ್ಯ ವಿಚಾರಿಸಿದ್ದರು. ಇದೀಗ, ಸ್ವತಃ ಶಿವಣ್ಣನೇ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸಂಜೆ ಆಸ್ಪತ್ರೆಯಿಂದ ಹೊರಬಂದ ಶಿವರಾಜ್ ಕುಮಾರ್, ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. '' ಸ್ವಲ್ಪ ಚಳಿ ಜ್ವರ ಇತ್ತು. ಆಸ್ಪತ್ರೆಗೆ ಬಂದೆ. ಡಾಕ್ಟರ್ ಇವತ್ತು ಇಲ್ಲೇ ಇರಿ ಅಂದ್ರು. ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ. ಈ ರೀತಿ ಅಭಿಮಾನಿಗಳ ಪ್ರೀತಿ ಸಿಗಲ್ಲ. ಏನೂ ಆಗಿಲ್ಲ. ಚೆನ್ನಾಗಿದ್ದೀನಿ. ನಾಳೆ ಡಿಸ್ಚಾರ್ಜ್ ಆಗ್ತೀನಿ. ಎಲ್ಲಾ ಶೆಡ್ಯೂಲ್ ಮುಗಿಸಿದ ಮೇಲೆ ಒಂದು ವಾರ ರೆಸ್ಟ್ ಮಾಡ್ತೀನಿ'' ಎಂದರು.

ಇನ್ನು ವೈದ್ಯರು ಮಾತನಾಡಿ, ''ಶಿವರಾಜ್ ಕುಮಾರ್ ಫಿಟ್ ಆಗಿದ್ದಾರೆ, ಬರಿ ಜ್ವರ ಇತ್ತು ಅಷ್ಟೇ, ಈಗ ನಾರ್ಮಲ್ ಆಗಿದ್ದಾರೆ. ನಾಳೆ ಡಿಸ್ಚಾರ್ಜ್ ಮಾಡ್ತೀವಿ'' ಎಂದರು.
54 ವರ್ಷದ ಎನರ್ಜಿಟಿಕ್ ನಟ ಶಿವರಾಜ್ ಕುಮಾರ್ ಅಭಿನಯದ 'ದಿ ವಿಲನ್' ಸಿನಿಮಾ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ 'ಕವಚ' ಹಾಗೂ 'ರುಸ್ತುಂ' ಸಿನಿಮಾಗಳ ಚಿತ್ರೀಕರಣದಲ್ಲಿ ಕೂಡ ಮಾಡುತ್ತಿದ್ದಾರೆ.


Click it and Unblock the Notifications











