twitter
    For Quick Alerts
    ALLOW NOTIFICATIONS  
    For Daily Alerts

    ಸುಮಲತಾ ಮಾತ್ರವಲ್ಲ, ನಾನು ಯಾರ ಪರವೂ ಪ್ರಚಾರ ಮಾಡಲ್ಲ: ಶಿವಣ್ಣ

    |

    ಮಂಡ್ಯ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸುಮಲತಾ ಮತ್ತು ನಿಖಿಲ್ ಕುಮಾರ್ ಸ್ವಾಮಿ ಇಬ್ಬರು ಚಿತ್ರರಂಗಕ್ಕೆ ಸೇರಿದವರಾಗಿರುವುದರಿಂದ ಚಿತ್ರರಂಗದ ಗಣ್ಯರು ಯಾರ ಪರ ನಿಲ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಈಗಾಗಲೇ ನಟರಾದ ದರ್ಶನ್ ಮತ್ತು ಯಶ್ ಇಬ್ಬರು ಸುಮಲತಾ ಪರ ನಿಂತ ಬೆನ್ನಲ್ಲೆ ಶಿವರಾಜ್ ಕುಮಾರ್ ಪ್ರಚಾರಕ್ಕೆ ಹೋಗ್ತಾರಾ ಎನ್ನುವ ಚರ್ಚೆ ಪ್ರಾರಂಭವಾಗಿತ್ತು.

    ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಈ ಹಿಂದೆ ಜೆಡಿಎಸ್ ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಹಾಗಾಗಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಪರ ಏನಾದರು ಪ್ರಚಾರಕ್ಕೆ ಬರಬಹುದಾ ಅಥವಾ ಅಂಬರೀಶ್ ಅವರ ಮೇಲಿನ ಅಭಿಮಾನಕ್ಕಾಗಿ ಸುಮಲತಾ ಪರ ಪ್ರಚಾರಕ್ಕೆ ಇಳಿಯಬಹುದಾ ಎನ್ನುವ ಕುತೂಹಲವಿತ್ತು.

    ಮಂಡ್ಯ ಚುನಾವಣಾ ಪ್ರಚಾರದ ಬಗ್ಗೆ ನಿರ್ಧಾರ ತಿಳಿಸಿದ ಪವರ್ ಸ್ಟಾರ್ ಮಂಡ್ಯ ಚುನಾವಣಾ ಪ್ರಚಾರದ ಬಗ್ಗೆ ನಿರ್ಧಾರ ತಿಳಿಸಿದ ಪವರ್ ಸ್ಟಾರ್

    ಆದ್ರೀಗ ಈ ಬಗ್ಗೆ ಶಿವಣ್ಣ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ನಡೆದ 'ಕವಚ' ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಶಿವಣ್ಣ ಪ್ರಚಾರದ ವಿಷಯವಾಗಿ ತಮ್ಮ ನಿರ್ಧಾರ ತಿಳಿಸಿದ್ದಾರೆ. ಮಂಡ್ಯ ಚುನಾವಣೆ ವಿಚಾರವಾಗಿ ಶಿವಣ್ಣ ಹೇಳಿದ್ದೇನು? ಮುಂದೆ ಓದಿ..

    ಯಾರ ಪರವೂ ಪ್ರಚಾರಕ್ಕೆ ಹೋಗಲ್ಲ

    ಯಾರ ಪರವೂ ಪ್ರಚಾರಕ್ಕೆ ಹೋಗಲ್ಲ

    'ಯಾವುದೇ ಕಾರಣಕ್ಕೂ ಪ್ರಚಾರಕ್ಕೆ ಹೋಗಲ್ಲ, ಸುಮಲತಾ ಅವರು ಕರೆದರೂ ಪ್ರಚಾರಕ್ಕೆ ಹೋಗುವುದಿಲ್ಲ' ಎಂದು ಹ್ಯಾಟ್ರಿಕ್ ಹೀರೋ ತಮ್ಮ ನಿರ್ಧಾರ ತಿಳಿಸಿದ್ದಾರೆ. 'ಒಳ್ಳೆಯವರು ಆಯ್ಕೆ ಆಗಲಿ, ಒಳ್ಳೆ ಕೆಲಸಗಳನ್ನು ಮಾಡಲಿ' ಎಂದು ಹೇಳುವ ಮೂಲಕ ಶಿವಣ್ಣ ಪ್ರಚಾರದ ಬಗ್ಗೆ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

    ನಾನು ದಡ್ಡ, ಬುದ್ಧಿವಂತನಲ್ಲ

    ನಾನು ದಡ್ಡ, ಬುದ್ಧಿವಂತನಲ್ಲ

    'ರಾಜಕೀಯ ಗೊತ್ತಿಲ್ಲದೆ ಹೋಗಬಾರದು, ಜನ ದಡ್ಡ ಅಂತಾರೆ. ರಾಜಕೀಯ ಮಾಡುವಷ್ಟು ಬುದ್ಧಿವಂತನಲ್ಲ, ನಾನು ತುಂಬಾ ದಡ್ಡ, ದೇವರು ಬಡವ ನೀ ಮಡಗಿದ ಹಾಗಿರು ಅಂತ ಹೇಳಿದ್ದಾನೆ ಹಾಗೆ ಇದ್ದೀನಿ. ಎಂದು ತಮ್ಮ ರಾಜಕೀಯ ನಿಲುವಿನ ಬಗ್ಗೆ ಶಿವಣ್ಣ ಹೇಳಿದ್ದಾರೆ.

    ಸುಮಲತಾ ಪರ ಪ್ರಚಾರಕ್ಕಾಗಿ ಬರ್ತಾರಾ ಈ ನಾಲ್ಕು ಸೂಪರ್ ಸ್ಟಾರ್ಸ್?ಸುಮಲತಾ ಪರ ಪ್ರಚಾರಕ್ಕಾಗಿ ಬರ್ತಾರಾ ಈ ನಾಲ್ಕು ಸೂಪರ್ ಸ್ಟಾರ್ಸ್?

    ಶಿವಮೊಗ್ಗಕ್ಕೂ ಹೋಗಲ್ಲ

    ಶಿವಮೊಗ್ಗಕ್ಕೂ ಹೋಗಲ್ಲ

    ಮಂಡ್ಯ ಕ್ಷೇತ್ರಕ್ಕೆ ಮಾತ್ರವಲ್ಲ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲೂ ಪ್ರಚಾರಕ್ಕೆ ಹೋಗಲ್ಲ ಅಂತ ಖಡಕ್ ಆಗಿ ಹೇಳಿದ್ದಾರೆ. 'ಶಿವಮೊಗ್ಗಕ್ಕೆ ಹೋಗಿದ್ದು ಪತ್ನಿ ಗೀತಾಗೋಸ್ಕರ. ಈಗ ಹೋಗಲ್ಲ. ಪತ್ನಿ ಬೇಕಾದರೆ ಹೋಗಬಹುದು. ಅವರ ಸಹೋದರ ನಿಂತಿರುವುದರಿಂದ ಅವರ ಪರ ಪ್ರಚಾರಕ್ಕೆ ಹೋಗಲಿ. ಜನ ನಮ್ಮನ್ನು ನಟನಾಗಿ ನೋಡಲು ಇಷ್ಟಪಡುತ್ತಾರೆ. ಹಾಗಾಗಿ ಹೀಗೆ ಇರುತ್ತೇನೆ' ಅಂತ ಹ್ಯಾಟ್ರಿಕ್ ಹೀರೋ ಹೇಳಿದ್ದಾರೆ.

    ರಾಜಕೀಯ ನಿರ್ಧಾರ ತಿಳಿಸಿದ್ದ ಪುನೀತ್

    ರಾಜಕೀಯ ನಿರ್ಧಾರ ತಿಳಿಸಿದ್ದ ಪುನೀತ್

    ''ಗೌರವಾನ್ವಿತ ದೇವೇಗೌಡರ ಕುಟುಂಬ ಹಾಗೂ ಅಂಬರೀಶ್ ಅವರ ಕುಟುಂಬ ನಮ್ಮ ಕುಟುಂಬದ ಹಾಗೆ, ಇಬ್ಬರು ನಮ್ಮ ಹಿತೈಷಿಗಳೇ, ಇಬ್ಬರಿಗೂ ಒಳ್ಳೆದಾಗಲಿ. ಆ ಭಗವಂತ ನಿಮಗೆ ಜನ ಸೇವೆ ಮಾಡುವ ಶಕ್ತಿ ಇನ್ನಷ್ಟು ಕೊಡಲಿ ಎಂದು ಪ್ರಾರ್ಥಿಸುತ್ತ ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಎಲ್ಲರನ್ನು ವಿನಂತಿಸಿಕೊಳ್ಳುತ್ತೇನೆ'' ಎಂದು ಹೇಳಿದ್ದ ಪುನೀತ್ 'ರಾಜಕೀಯಕ್ಕೆ ನನ್ನ ಹೆಸರನ್ನು ಅನಾವಶ್ಯವಾಗಿ ಎಳೆದು ತರಬೇಡಿ' ಎಂದು ಮನವಿ ಮಾಡಿಕೊಂಡಿದ್ದರು.

    English summary
    Kannada actor shiva rajkumar clarified about mandya lok sabha election campaign. he said, he is not to campaign for anyone.
    Monday, March 25, 2019, 13:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X