ಅಣ್ಣಾವ್ರ ಮಗ ಶಿವಣ್ಣನ ಸಿಂಪ್ಲಿಸಿಟಿಗೆ ಇದು ಲೇಟೆಸ್ಟ್ ಉದಾಹರಣೆ.!

By Harshitha

Recommended Video

ಶಿವರಾಜ್ ಕುಮಾರ್ ಸಿಂಪ್ಲಿಸಿಟಿಗೆ ಈ ಘಟನೆ ಲೇಟೆಸ್ಟ್ ಉದಾಹರಣೆ | FIlmibeat Kannada

ಅಣ್ಣಾವ್ರ ಮಗ.. ಹ್ಯಾಟ್ರಿಕ್ ಹೀರೋ.. ನಾಟ್ಯ ಸಾರ್ವಭೌಮ.. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಮೂರು ದಶಕಗಳು ಉರುಳಿವೆ. ಇಂದಿಗೂ ಬಹು ಬೇಡಿಕೆಯ ಹೀರೋ ಆಗಿರುವ, ಶಿವಣ್ಣನಿಗೆ ಸ್ವಲ್ಪ ಕೂಡ ಜಂಬ ಇಲ್ಲ.!

ಅಭಿಮಾನಿಗಳನ್ನ ಸದಾ ಪ್ರೀತಿಯಿಂದ ಕಾಣುವ ನಟ ಈ ಶಿವರಾಜ್ ಕುಮಾರ್. ಅಭಿಮಾನಿಗಳ ಮನಸ್ಸನ್ನ ಶಿವಣ್ಣ ಎಂದೂ ನೋಯಿಸಿದವರಲ್ಲ. ಬೇಕಾದ್ರೆ, ನಿನ್ನೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ..

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನ್ನಡ ಚಲನಚಿತ್ರ ಕಪ್ ಪಂದ್ಯಾವಳಿ ನಡೆಯುತ್ತಿತ್ತು. ಪಂದ್ಯ ನಡೆಯುತ್ತಿದ್ದ ವೇಳೆ ಇಡೀ ಸ್ಟೇಡಿಯಂ ರೌಂಡ್ ಹಾಕಿ ಅಭಿಮಾನಿಗಳಿಗೆ ತಾವೇ ಸೆಲ್ಫಿ ಕ್ಲಿಕ್ ಮಾಡಿಕೊಟ್ಟರು ನಟ ಶಿವರಾಜ್ ಕುಮಾರ್.

 Shiva Rajkumar clicked selfies with Fans during KCC Cricket match

ಜನರು ಎಲ್ಲಿ ನಮ್ಮ ಮೈ ಮೇಲೆ ಬೀಳ್ತಾರೋ ಅಂತ ಸ್ಟಾರ್ ಗಳು ಬೌನ್ಸರ್ ಗಳನ್ನು ಅಕ್ಕಪಕ್ಕ ಇಟ್ಟುಕೊಂಡು ಓಡಾಡುವ ಕಾಲ ಇದು. ಅಂಥದ್ರಲ್ಲಿ, ಶಿವಣ್ಣ ತಾವೇ ಅಭಿಮಾನಿಗಳ ಬಳಿ ಹೋಗಿ ಸೆಲ್ಫಿ ಕ್ಲಿಕ್ ಮಾಡಿಕೊಟ್ಟಿದ್ದಾರೆ ಅಂದ್ರೆ ಗ್ರೇಟ್ ಅಲ್ವಾ.? ಶಿವಣ್ಣನ ಸಿಂಪ್ಲಿಸಿಟಿಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಾ.?

ಶಿವಣ್ಣನಿಗೆ ಸದ್ಯ ವಯಸ್ಸು 56. ಆದರೂ, ಅವರ ಹುಮ್ಮಸ್ಸು ಕೊಂಚ ಕೂಡ ಕಮ್ಮಿ ಆಗಿಲ್ಲ. ಪಂದ್ಯಾವಳಿಯಲ್ಲಿ ಬೌಲಿಂಗ್ ಮಾಡಿದರು. ವಿಕೆಟ್ ಪಡೆದಾಗ ಕುಣಿದು ಕುಪ್ಪಳಿಸಿದರು. ತಮ್ಮ ತಂಡ ಸಿಕ್ಸರ್, ಬೌಂಡರಿ ಬಾರಿಸಿದಾಗ ಡ್ಯಾನ್ಸ್ ಮಾಡಿದರು. ಸ್ಪೋರ್ಟ್ಸ್ ಮ್ಯಾನ್ಸ್ ಸ್ಪಿರಿಟ್ ಶಿವಣ್ಣನಲ್ಲಿ ಎದ್ದು ಕಾಣುತ್ತಿತ್ತು. ಇದಕ್ಕೆ ನೋಡಿ ಹಲವರಿಗೆ ಶಿವಣ್ಣ ಅಂದ್ರೆ ಅಚ್ಚುಮೆಚ್ಚು.!

More from Filmibeat

English summary
Kannada Actor Shiva Rajkumar clicked selfies with Fans during KCC Cricket match.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X