ಅಭಿಮಾನಿಗಳ ಜೊತೆ ಮಾತನಾಡುವಾಗ ಭಾವುಕರಾಗಿ ಕಣ್ಣೀರಿಟ್ಟ ಶಿವಣ್ಣ
Recommended Video
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು ಹುಟ್ಟುಹಬ್ಬದ ದಿನವು ಗಳಗಳನೆ ಕಣ್ಣೀರಿಟ್ಟಿದ್ದಾರೆ. ಅಭಿಮಾನಿಗಳಿಂದ ತುಂಬನೆ ದೂರ ಅಂದ್ರೆ ಲಂಡನ್ ನಲ್ಲಿರುವ ಹ್ಯಾಟ್ರಿಕ್ ಹೀರೋ ಅಭಿಮಾನಿಗಳ ಅಪಾರವಾದ ಪ್ರೀತಿ, ವಿಶ್ವಾಸ ಕಂಡು ಕಣ್ಣೀರಾಕಿದ್ದಾರೆ.
ಹೌದು, ಇಂದು ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಜೊತೆ ಲೈವ್ ಆಗಿ ಮಾತನಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಕಂಠೀರವ ಸ್ಟುಡಿಯೋದಲ್ಲಿ ದೊಡ್ಡ ಪರದೆ ಹಾಕಿ ಅಭಿಮಾನಿಗಳ ಜೊತೆ ಶಿವಣ್ಣ ಲಂಡನ್ ನಿಂದನೇ ನೇರವಾಗಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅಭಿಮಾನಿಗಳ ಪ್ರೀತಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಶಿವಣ್ಣ ಒಂದೇ ಸಮನೆ ಅತ್ತಿದ್ದಾರೆ.

ಶಿವಣ್ಣ ಗಳಗಳನೆ ಅಳುತ್ತಿದ್ದಂತೆ ಅಭಿಮಾನಿಗಳು 'ನೀವು ಅತ್ತರೆ ನಮಗೆ ನೋವಾಗುತ್ತೆ' ದಯವಿಟ್ಟು ಅಳಬೇಡಿ ಎಂದು ಸಮಾಧಾನ ಮಾಡಿದ್ದಾರೆ.ನಂತರ ಮತ್ತೆ ಸುಧಾರಿಸಿಕೊಂಡು ಅಭಿಮಾನಿಗಳ ಜೊತೆ ಮಾತು ಮುಂದುವರೆಸಿದ್ದಾರೆ. ಅಲ್ಲದೆ ಕೈಗೆ ಹಾಕಿರುವ ಬ್ಯಾಂಡೇಜ್ ಅನ್ನು ದಯವಿಟ್ಟು ತೆಗೆಯಬೇಡಿ ಎಂದು ಶಿವಣ್ಣ ಬಳಿ ಮನವಿ ಮಾಡಿಕೊಂಡಿದ್ದಾರೆ.
ಶಿವಣ್ಣ ಅವರ ಭುಜದ ಆಪರೇಷನ್ ಸಕ್ಸಸ್ ಆಗಿದ್ದು ಇನ್ನು ಕೆಲವುದಿಗಳು ವಿಶ್ರಾಂತಿಯಲ್ಲಿರಲಿದ್ದಾರೆ ಹ್ಯಾಟ್ರಿಕ್ ಹೀರೋ. ಇದೇ ತಿಂಗಳು 23ಕ್ಕೆ ಶಿವಣ್ಣ ಲಂಡನ್ ನಿಂದ ಹೊರಡಲಿದ್ದಾರೆ. ಲಂಡನ್ ನಿಂದ ಬರುತ್ತಿದ್ದಂತೆ ಅಭಿಮಾನಿಗಳ ಭೇಟಿಯಾಗುವ ನಿರ್ಧಾರ ಮಾಡಿದ್ದಾರೆ. ಹುಟ್ಟುಹಬ್ಬವನ್ನು ಮಿಸ್ ಮಾಡಿಕೊಂಡ ಅಭಿಮಾನಿಗಳಿಗಾಗಿ ಶಿವಣ್ಣ ಮತ್ತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಪ್ಲಾನ್ ಮಾಡಿದ್ದಾರೆ.


Click it and Unblock the Notifications











