'ದಿ ವಿಲನ್' ನೋಡಿ ಶಿವಣ್ಣ ಪುತ್ರಿ ಫುಲ್ ಖುಷಿಯಾಗಿದ್ದಾರಂತೆ.!

ಒಂದು ಸಿನಿಮಾ ತೆರೆಗೆ ಬಂದ್ಮೇಲೆ, ಅದರ ಬಗ್ಗೆ ಒಳ್ಳೆಯದ್ದು ಮಾತನಾಡುವವರು ಇರ್ತಾರೆ.. ಕೆಟ್ಟದಾಗಿ ಕಾಮೆಂಟ್ ಮಾಡುವವರೂ ಇರ್ತಾರೆ.

ಎಲ್ಲರಿಗೂ ಎಲ್ಲವೂ ಇಷ್ಟ ಆಗಬೇಕು ಅಂತೇನಿಲ್ಲ. ಅವರವರ ವೈಯುಕ್ತಿಕ ಅಭಿಪ್ರಾಯ, ಅಭಿರುಚಿ, ನಿರೀಕ್ಷೆ, ಆಸಕ್ತಿ ಮೇಲೆ ಇಷ್ಟ-ಕಷ್ಟಗಳು ನಿರ್ಧಾರ ಆಗುತ್ತೆ. ಹೀಗಾಗಿ, ಬಹು ನಿರೀಕ್ಷಿತ ಸಿನಿಮಾವೊಂದು ರಿಲೀಸ್ ಆದ್ಮೇಲೆ ತಲೆಗೊಂದೊಂದು ರೀತಿಯ ಮಾತುಗಳು ಕೇಳಿಬರುತ್ತೆ.

ಸದ್ಯಕ್ಕೆ ಇಂದು ಬಿಡುಗಡೆ ಆಗಿರುವ 'ದಿ ವಿಲನ್' ಚಿತ್ರವನ್ನೇ ತೆಗೆದುಕೊಳ್ಳಿ... 'ದಿ ವಿಲನ್' ಚಿತ್ರವನ್ನ ಪ್ರೇಮ್ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ್ದಾರೆ ಅಂತ ಕೆಲವರು ಹೇಳಿದರೆ, ಶಿವಣ್ಣ ಹಾಗೂ ಸುದೀಪ್ ಅಭಿಮಾನಿಗಳಿಗೆ ಪ್ರೇಮ್ ನಿಜವಾದ ವಿಲನ್ ಅಂತ ಹಲವರು ಕಾಮೆಂಟ್ ಮಾಡಿದ್ದಾರೆ.

'ದಿ ವಿಲನ್' ಬಗ್ಗೆ ತರಹೇವಾರಿ ಮಾತುಗಳು ಕೇಳಿಬರುತ್ತಿದ್ದರೂ, ಶಿವಣ್ಣನ ಪುತ್ರಿಗೆ ಮಾತ್ರ ಚಿತ್ರ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಅದಕ್ಕೆ ಸುದೀಪ್ ಆಡಿದ ಮಾತುಗಳೇ ಸಾಕ್ಷಿ. ಮುಂದೆ ಓದಿರಿ...

ಇಂದು ಬೆಳಗ್ಗೆಯೇ ಚಿತ್ರ ನೋಡಿ ಶಿವಣ್ಣ ಪುತ್ರಿ

ಇಂದು ಬೆಳಗ್ಗೆಯೇ ಚಿತ್ರ ನೋಡಿ ಶಿವಣ್ಣ ಪುತ್ರಿ

'ದಿ ವಿಲನ್' ಚಿತ್ರದ ಪ್ರದರ್ಶನ ನಿನ್ನೆ ಮಧ್ಯರಾತ್ರಿಯಿಂದಲೇ ಆರಂಭಗೊಂಡಿದೆ. ಇಂದು ಬೆಳಗ್ಗೆ ಆರು ಗಂಟೆಗೆಯೇ ನಟ ಶಿವರಾಜ್ ಕುಮಾರ್ ಪುತ್ರಿ 'ದಿ ವಿಲನ್' ಚಿತ್ರವನ್ನ ಕಣ್ತುಂಬಿಕೊಂಡಿದ್ದಾರೆ. 'ದಿ ವಿಲನ್' ಚಿತ್ರ ಶಿವಣ್ಣ ಪುತ್ರಿಗೆ ಖುಷಿ ಕೊಟ್ಟಿದೆ.

ಸುದೀಪ್ ಏನಂತಾರೆ.?

ಸುದೀಪ್ ಏನಂತಾರೆ.?

''ನನಗೆ ಮೊದಲು ರಿವ್ಯೂ ಕೊಟ್ಟವರು ಶಿವಣ್ಣ ಪತ್ನಿ ಗೀತಕ್ಕ. ಅವರು ಫೋನ್ ಮಾಡಿ ''ಮಗಳು ಸಿನಿಮಾ ನೋಡಿ ತುಂಬಾ ಇಷ್ಟ ಪಟ್ಟಿದ್ದಾಳೆ. ಆಕೆ ತುಂಬಾ ಖುಷಿ ಪಟ್ಟಿದ್ದಾಳೆ'' ಅಂದ್ರು. ಅದನ್ನ ಕೇಳೋಕೆ ಒಂಥರಾ ಖುಷಿ'' ಎಂದಿದ್ದಾರೆ ನಟ ಸುದೀಪ್

ಇನ್ನೇನು ಬೇಕು.?

ಇನ್ನೇನು ಬೇಕು.?

''ಚಿತ್ರ ತುಂಬಾ ಎಂಟರ್ ಟೈನಿಂಗ್ ಆಗಿದೆ ಅಂತ ನನಗೆ ಫೀಡ್ ಬ್ಯಾಕ್ ಬಂದಿದೆ. ಎಲ್ಲರೂ ಚೆನ್ನಾಗಿದೆ ಅಂತಿದ್ದಾರೆ. ಬೇರೆ ಬೇರೆ ಕಡೆಯಿಂದಲೂ ಒಳ್ಳೆ ರೆಸ್ಪಾನ್ಸ್ ಬಂದಿದೆ. ವಿತರಕರು ತುಂಬಾ ಖುಷಿಯಾಗಿದ್ದಾರೆ. ಅದೇ ಖುಷಿ ನನಗೆ'' ಅಂತಾರೆ ನಟ ಸುದೀಪ್.

ನಿಮ್ಮ ಅಭಿಪ್ರಾಯ ತಿಳಿಸಿ...

ನಿಮ್ಮ ಅಭಿಪ್ರಾಯ ತಿಳಿಸಿ...

ಅಂದ್ಹಾಗೆ, ನೀವು 'ದಿ ವಿಲನ್' ಚಿತ್ರವನ್ನ ಕಣ್ತುಂಬಿಕೊಂಡ್ರಾ.? 'ದಿ ವಿಲನ್' ಚಿತ್ರ ನಿಮಗೆ ಇಷ್ಟ ಆಯ್ತಾ.? ನಿಮ್ಮ ಅಭಿಪ್ರಾಯವನ್ನ ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ..

More from Filmibeat

English summary
Shiva Rajkumar daughter is happy with 'The Villain' movie says Kiccha Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X