twitter
    For Quick Alerts
    ALLOW NOTIFICATIONS  
    For Daily Alerts

    ಪರಭಾಷೆ ಚಿತ್ರಗಳಿಗೆ 'ಡೋಂಟ್ ಕೇರ್' ಎಂದ ಶಿವಣ್ಣ

    |

    Recommended Video

    TheVillain : ಕನ್ನಡ ಸಿನಿಮಾಗಳ ಬಗ್ಗೆ ಶಿವಣ್ಣ ಹೇಳಿದ್ದೇನು..? | Filmibeat Kannada

    ಕನ್ನಡ ಚಿತ್ರರಂಗದಲ್ಲಿ ಪರಭಾಷೆ ಸಿನಿಮಾಗಳ ಹಾವಳಿ ಹೆಚ್ಚಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬೇರೆ ಭಾಷೆಯ ಸಿನಿಮಾಗಳೇ ಪ್ರದರ್ಶನವಾಗ್ತಿರುತ್ತೆ. ಕನ್ನಡ ಸಿನಿಮಾಗಳಿಗೆ ಎಲ್ಲಾ ರೀತಿಯಲ್ಲೂ ಕಾಂಪಿಟೇಶನ್ ಕೊಡ್ತಿವಿ ಎಂಬುದು ವಾಸ್ತವ.

    ಆದ್ರೆ, ಇದನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಡೋಂಟ್ ಕೇರ್' ಎನ್ನುತ್ತಿದ್ದಾರೆ. ನಮ್ಮಲ್ಲೂ ಒಳ್ಳೆಯ ಚಿತ್ರಗಳು ಬರ್ತಿದೆ. ನಾವು ನಮ್ಮ ಸಿನಿಮಾಗಳನ್ನ ನೋಡುವುದು ಮತ್ತು ಬೆಳೆಸುವುದು ಕಲಿಯಬೇಕು ಎಂದು ಸೆಂಚುರಿ ಸ್ಟಾರ್ ಹೇಳಿದ್ದಾರೆ.

    ಅಣ್ಣಾವ್ರ ಮಗ ಶಿವಣ್ಣನ ಸಿಂಪ್ಲಿಸಿಟಿಗೆ ಇದು ಲೇಟೆಸ್ಟ್ ಉದಾಹರಣೆ.! ಅಣ್ಣಾವ್ರ ಮಗ ಶಿವಣ್ಣನ ಸಿಂಪ್ಲಿಸಿಟಿಗೆ ಇದು ಲೇಟೆಸ್ಟ್ ಉದಾಹರಣೆ.!

    'ದಿ ವಿಲನ್' ಸಿನಿಮಾ ಅಕ್ಟೋಬರ್ 18 ರಂದು ಬಿಡುಗಡೆಯಾಗುತ್ತಿದೆ. ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ, ನಮ್ಮ ಚಿತ್ರಗಳು ಯಾರಿಗೂ ಕಮ್ಮಿ ಇಲ್ಲ. ಅವರು ಮೇಕಿಂಗ್ ನಲ್ಲಿ ಅದ್ಧೂರಿಯಾಗಿದ್ರೆ, ನಾವು ಸಂಸ್ಕ್ರತಿಯಲ್ಲಿ ಅದ್ಧೂರಿ ಎಂದು ಶಿವರಾಜ್ ಕುಮಾರ್ ಕಾಲರ್ ಎತ್ತಿ ಮಾತನಾಡಿದ್ದಾರೆ. ಅಷ್ಟಕ್ಕೂ, ಶಿವಣ್ಣ ಹೇಳಿದ ಪೂರ್ತಿ ಡೈಲಾಗ್ ಏನು.? ಮುಂದೆ ಓದಿ.....

    ಸಂಸ್ಕ್ರತಿಯಲ್ಲಿ ನಾವು ಶ್ರೀಮಂತರು

    ಸಂಸ್ಕ್ರತಿಯಲ್ಲಿ ನಾವು ಶ್ರೀಮಂತರು

    ''ಕನ್ನಡ ಸಿನಿಮಾಗಳು ತುಂಬಾ ಚೆನ್ನಾಗಿ ಬರ್ತಿದೆ. ಬೇರೆ ಭಾಷೆಯ ಸಿನಿಮಾಗಳ ಹಾವಳಿ ಅಂತ ಅಂದುಕೊಳ್ಳುವುದೇ ಇಲ್ಲ. ಯಾವ ಭಾಷೆಯ ಸಿನಿಮಾ ಬಂದ್ರೂ ಕನ್ನಡ ಸಂಸ್ಕ್ರತಿ ಶ್ರೀಮಂತವಾಗಿದೆ''

    ದೊಡ್ಡ ವ್ಯಕ್ತಿ ಕೊಟ್ಟಿದ್ದ ಉಡುಗೊರೆಯನ್ನ ವಿಷ್ಣು, ಶಿವಣ್ಣಗೆ ನೀಡಿದ್ದರಂತೆ.! ಏನದು.? ದೊಡ್ಡ ವ್ಯಕ್ತಿ ಕೊಟ್ಟಿದ್ದ ಉಡುಗೊರೆಯನ್ನ ವಿಷ್ಣು, ಶಿವಣ್ಣಗೆ ನೀಡಿದ್ದರಂತೆ.! ಏನದು.?

    ರಾಜಾರೋಷವಾಗಿ ಹೇಳ್ತೀನಿ

    ರಾಜಾರೋಷವಾಗಿ ಹೇಳ್ತೀನಿ

    ''ಕನ್ನಡದಲ್ಲಿ ಆವಾಗನಿಂದ ಇವಾಗನಿವರೆಗೂ ಒಳ್ಳೆಯ ಡೈರೆಕ್ಟರ್ ಗಳು ಇದ್ದಾರೆ. ಆಗ ಪುಟ್ಟಣ್ಣ ಕಣಗಾಲ್ ಸಿನಿಮಾಗಳಿಂದ ಹಿಡಿದು ಈಗ ಪ್ರೇಮ್, ಉಪೇಂದ್ರ ಅಂತಹ ನಿರ್ದೇಶಕರಿದ್ದಾರೆ ಅಂತ ನಾವು ರಾಜಾರೋಷವಾಗಿ ಹೇಳಬಹುದು''

    ತಾಯಾಣೆಯಿಟ್ಟು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಶಿವಣ್ಣ ತಾಯಾಣೆಯಿಟ್ಟು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಶಿವಣ್ಣ

    ಪರಭಾಷೆಗೆ ನಾವು ಎದುರಲ್ಲ

    ಪರಭಾಷೆಗೆ ನಾವು ಎದುರಲ್ಲ

    ''ಯಾವ ಪರಭಾಷೆಯ ಚಿತ್ರಕ್ಕೂ ನಾವು ಎದುರಲ್ಲ. ಇದನ್ನ ನಾನಂತೂ ಒಪ್ಪಿಕೊಳ್ಳುವುದಿಲ್ಲ. ಅವರು ತುಂಬಾ ದೊಡ್ಡ ದೊಡ್ಡ ಸಿನಿಮಾ ಮಾಡಬಹುದು. ಅವರ ಚಿತ್ರಗಳಲ್ಲಿ ಅದ್ಧೂರಿತನ ಇರಬಹುದು. ನಾವು ಸಾಂಸ್ಕ್ರತಿಕವಾಗಿ ಅದ್ಧೂರಿಯಾಗಿದ್ದೀವಿ. ನಮ್ಮ ಭಾಷೆಯಲ್ಲಿ ಶ್ರೀಮಂತವಾಗಿದ್ದೇವೆ''

    ನೂರು ಕೋಟಿ ಕ್ಲಬ್ ಕಡೆ ಮುಖ ಮಾಡಿದ ಅಗ್ರಗಣ್ಯ ನಾಯಕರು.! ನೂರು ಕೋಟಿ ಕ್ಲಬ್ ಕಡೆ ಮುಖ ಮಾಡಿದ ಅಗ್ರಗಣ್ಯ ನಾಯಕರು.!

    ನನಗೆ ನಮ್ಮ ಇಂಡಸ್ಟ್ರಿ ಹೆಮ್ಮೆ

    ನನಗೆ ನಮ್ಮ ಇಂಡಸ್ಟ್ರಿ ಹೆಮ್ಮೆ

    ''ಅಪ್ಪಾಜಿ ಸಿನಿಮಾ, ವಿಷ್ಣುವರ್ಧನ್ ಅವರ ಸಿನಿಮಾ, ಅಂಬರೀಶ್ ಅವರ ಸಿನಿಮಾ, ಅನಂತ್ ನಾಗ್ ಅವರ ಸಿನಿಮಾ ಅವರಿಂದ ಇಲ್ಲಿಯವರೆಗೂ ಎಲ್ಲ ಚಿತ್ರಗಳು ಅಷ್ಟೊಂದು ಅದ್ಧೂರಿತನ ಇದೆ. ಇದನ್ನ ನಾನು ತುಂಬಾ ಹೆಮ್ಮೆಯಿಂದ ಹೇಳುತ್ತೇನೆ''

    English summary
    Kannada actor, hatrick hero Shiva rajkumar didn't care about other industry movies.
    Wednesday, October 3, 2018, 16:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X