ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ಶಿವರಾಜ್ ಕುಮಾರ್
Recommended Video

ವಿಪರೀತ ಜ್ವರದಿಂದ ಬಳಲುತ್ತಿದ್ದ ನಟ ಶಿವರಾಜ್ ಕುಮಾರ್ ಮೊನ್ನೆಯಷ್ಟೇ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರ ಸಲಹೆ ಮೇರೆಗೆ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದ ಶಿವರಾಜ್ ಕುಮಾರ್ ಇಂದು ಡಿಸ್ಚಾರ್ಜ್ ಆಗಿದ್ದಾರೆ.
ಜ್ವರ ಹಾಗೂ ಕೆಮ್ಮಿನಿಂದ ಸಂಪೂರ್ಣ ಗುಣಮುಖರಾದ ಕಾರಣ ನಟ ಶಿವರಾಜ್ ಕುಮಾರ್ ರನ್ನ ಡಿಸ್ಚಾರ್ಜ್ ಮಾಡಲಾಗಿದೆ. ಚಿಕಿತ್ಸೆ ಪಡೆದು ಫುಲ್ ಫಿಟ್ ಅಂಡ್ ಫೈನ್ ಆಗಿ ಬಂದ ಶಿವಣ್ಣ, ''ವೈರಲ್ ಫೀವರ್ ಬಂದಿದ್ರಿಂದ ವಿಶ್ರಾಂತಿ ಪಡೆಯಬೇಕಾಯಿತು. 'ದಿ ವಿಲನ್' ನಾಳೆ ರಿಲೀಸ್ ಆಗಲಿದೆ. ಅಭಿಮಾನಿಗಳ ಜೊತೆಗೆ ಸಿನಿಮಾ ನೋಡುವೆ'' ಎಂದರು.
ಜಂಬು ಸವಾರಿ ವೀಕ್ಷಿಸಲು ಇದೇ ಶುಕ್ರವಾರ ಶಿವಣ್ಣ ಮೈಸೂರಿಗೆ ತೆರಳುತ್ತಿದ್ದಾರಂತೆ. ಬಳಿಕ ಚಿತ್ರೀಕರಣದಲ್ಲಿ ಶಿವಣ್ಣ ಪಾಲ್ಗೊಳ್ಳಲಿದ್ದಾರೆ. ಸದ್ಯ ಶಿವಣ್ಣನ ಕೈಯಲ್ಲಿ 'ರುಸ್ತುಂ', 'ದ್ರೋಣ' ಚಿತ್ರಗಳಿವೆ.

ಮುಂದಿನ ತಿಂಗಳು ಶಿವರಾಜ್ ಕುಮಾರ್-ಪಿ.ವಾಸು ಕಾಂಬಿನೇಶನ್ ನಲ್ಲಿ 'ಆನಂದ್' ಸಿನಿಮಾ ಸೆಟ್ಟೇರಲಿದೆ. 56 ವರ್ಷ ವಯಸ್ಸಿನ ಶಿವಣ್ಣ ಕಾಲ್ ಶೀಟ್ ಗಾಗಿ ಸಾಲು ಸಾಲು ಚಿತ್ರಗಳು ಕಾಯುತ್ತಿವೆ.


Click it and Unblock the Notifications











