twitter
    For Quick Alerts
    ALLOW NOTIFICATIONS  
    For Daily Alerts

    ಮರಾಠ ಪ್ರಾಧಿಕಾರ ರಚನೆ: ಅಸಮಾಧಾನ ವ್ಯಕ್ತಪಡಿಸಿದ ಶಿವರಾಜ್ ಕುಮಾರ್

    |

    ರಾಜ್ಯ ಸರ್ಕಾರವು ಮರಾಠ ಪ್ರಾಧಿಕಾರ ರಚನೆ ಮಾಡಿರುವ ಬಗ್ಗೆ ವಿರೋಧ ಪಕ್ಷಗಳು, ಕನ್ನಡಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಇದೀಗ ನಟ ಶಿವರಾಜ್ ಕುಮಾರ್ ಸಹ ಮರಾಠ ಪ್ರಾಧಿಕಾರ ರಚನೆ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ತಮ್ಮ 123ನೇ ಸಿನಿಮಾ 'ಶಿವಪ್ಪ' ಸಿನಿಮಾದ ಮುಹೂರ್ತದ ವೇಳೆ ಮಾಧ್ಯಮದವರೊಟ್ಟಿಗೆ ಮಾತನಾಡಿದ ಶಿವರಾಜ್ ಕುಮಾರ್, 'ಕರ್ನಾಟಕದಲ್ಲಿ ಕನ್ನಡಿಗರಿಗಷ್ಟೆ ಮೊದಲ ಆದ್ಯತೆ ಕೊಡಬೇಕು' ಎಂದರು ಶಿವರಾಜ್ ಕುಮಾರ್.

    ಕರ್ನಾಟಕದಲ್ಲಿ ಕನ್ನಡಿಗನಿಗೇ ಮೊದಲ ಆದ್ಯತೆ ಕೊಡಬೇಕು, ಇಲ್ಲಿ ಜಾತಿ, ಮತ ಎಲ್ಲಾ ಬರಬಾರದು. ಅಂಥಹಾ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಶಿವರಾಜ್ ಕುಮಾರ್ ಹೇಳಿದರು. ಶಿವರಾಜ್ ಕುಮಾರ್ ಅವರನ್ನು ಚಂದನವನದ ನಾಯಕ ಎಂದು ಕೆಲವು ದಿನಗಳ ಹಿಂದಷ್ಟೆ ಒಕ್ಕೂರಲಿನಿಂದ ಸಿನಿ ಪ್ರಮುಖರು ಒಪ್ಪಿಕೊಂಡಿದ್ದು, ಶಿವರಾಜ್ ಕುಮಾರ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    ಎಲ್ಲಾ ಪಾತ್ರಗಳೂ ಸಹ ಪ್ರಾಮುಖ್ಯತೆ ಹೊಂದಿವೆ: ಶಿವಣ್ಣ

    ಎಲ್ಲಾ ಪಾತ್ರಗಳೂ ಸಹ ಪ್ರಾಮುಖ್ಯತೆ ಹೊಂದಿವೆ: ಶಿವಣ್ಣ

    ಇನ್ನುಳಿದಂತೆ ತಮ್ಮ ಹೊಸ ಸಿನಿಮಾ 'ಶಿವಪ್ಪ' ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, 'ಈ ಸಿನಿಮಾದಲ್ಲಿ ಎಲ್ಲರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಧನಂಜಯ್, ಉಮಾಶ್ರಿ, ಶಶಿಕುಮಾರ್, ಪೃಥ್ವಿ ಅಂಬರ್ ಎಲ್ಲರ ಪಾತ್ರಗಳೂ ಸಹ ಮುಖ್ಯ. ಕತೆಯಲ್ಲಿ ಸಾಕಷ್ಟು ಭಾವನಾತ್ಮ ಅಂಶಗಳು ಇವೆ' ಎಂದರು.

    ಡಾಲಿ ಇದ್ದರೂ ಸಹ ಇದು ಟಗರು ಮಾದರಿ ಸಿನಿಮಾ ಅಲ್ಲ: ಶಿವಣ್ಣ

    ಡಾಲಿ ಇದ್ದರೂ ಸಹ ಇದು ಟಗರು ಮಾದರಿ ಸಿನಿಮಾ ಅಲ್ಲ: ಶಿವಣ್ಣ

    ಸಿನಿಮಾದಲ್ಲಿ ಡಾಲಿ ನನ್ನ ಜೊತೆಗಿದ್ದಾರೆ, ಆದರೆ ಟಗರು ಸಿನಿಮಾಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಶಿವಪ್ಪನ ಜೊತೆಗೆ ಉಳಿದೆಲ್ಲ ಪಾತ್ರಗಳು ಹೇಗೆ ತಮ್ಮ ಸಂಬಂಧವನ್ನು ಹೊಂದಿರುತ್ತವೆ, ಕತೆಯ ಜೊತೆಗೆ ಆ ಸಂಬಂಧಗಳು ಹೇಗೆ ಬದಲಾಗುತ್ತಾ ಹೋಗುತ್ತವೆ ಎಂಬುದೇ ಸಿನಿಮಾ ಎಂದರು ಶಿವಣ್ಣ.

    ವಿಜಯ್ ಮಿಲ್ಟನ್ ಆಸಕ್ತಿಕರ ನಿರ್ದೇಶಕ: ಶಿವರಾಜ್ ಕುಮಾರ್

    ವಿಜಯ್ ಮಿಲ್ಟನ್ ಆಸಕ್ತಿಕರ ನಿರ್ದೇಶಕ: ಶಿವರಾಜ್ ಕುಮಾರ್

    ವಿಜಯ್ ಮಿಲ್ಟನ್ ಬಹಳ ಆಸಕ್ತಿಕರ ನಿರ್ದೇಶಕ, ಈ ಸಿನಿಮಾದಲ್ಲಿ ಮೂರು ಕ್ಯಾಮೆರಾ ಬಳಸಿ ಶೂಟ್ ಮಾಡುತ್ತಿದ್ದಾರೆ. ಅವರಿಗೆ ವಿಷ್ಯುಲ್ ಸೆನ್ಸ್ ಬಹಳ ಚೆನ್ನಾಗಿದೆ. ಸಂಗೀತ ನಿರ್ದೇಶಕರಾಗಿ ಅನೂಪ್ ಸಿಳಿನ್ ಇದ್ದಾರೆ. ಯುವ ನಿರ್ಮಾಪಕ ಕೃಷ್ಣ ಸಾರ್ಥಕ್ ಇದ್ದಾರೆ. ಬಹಳ ಒಳ್ಳೆಯ ತಂಡ ಜೊತೆಗೆ ಸೇರಿದೆ ಎಂದರು ಶಿವಣ್ಣ.

    Recommended Video

    ತಮಿಳು ಸ್ಟಾರ್ ಡೈರೆಕ್ಟರ್ ಸಿನಿಮಾ ಮೂಲಕ ಮತ್ತೆ ಒಂದಾದ ಶಿವಣ್ಣ, ಡಾಲಿ | Filmibeat Kannada
    ಪೃಥ್ವಿ ಅಂಬರ್ ಅನ್ನು ಹೊಗಳಿದ ಶಿವಣ್ಣ

    ಪೃಥ್ವಿ ಅಂಬರ್ ಅನ್ನು ಹೊಗಳಿದ ಶಿವಣ್ಣ

    ಯುವ ನಟ ಪೃಥ್ವಿ ಅಂಬರ್ ಅನ್ನು ಹೊಗಳಿದ ಶಿವಣ್ಣ, 'ಪೃಥ್ವಿ ಚೆನ್ನಾಗಿ ನಟಿಸುತ್ತಾನೆ, ನೋಡಲು ಸಹ ಸುಂದರವಾಗಿದ್ದಾನೆ. ಧೈರ್ಯವಾಗಿ ನಟಿಸುತ್ತಾನೆ. ನಾನು ಆತನ 'ದಿಯಾ' ಸಿನಿಮಾವನ್ನು ಎರಡು ಬಾರಿ ನೋಡಿದ್ದೇನೆ' ಎಂದರು.

    English summary
    Shiva Rajkumar express unhappiness about Maratha development board formation by Karnataka state government.
    Friday, November 20, 2020, 9:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X