twitter
    For Quick Alerts
    ALLOW NOTIFICATIONS  
    For Daily Alerts

    '30 ವರ್ಷದಲ್ಲಿ ಹೀಗೆ ಆಗಿಲ್ಲ': ಟಿವಿ ವಾಹಿನಿಗಳ ವಿರುದ್ಧ ಶಿವಣ್ಣ ಬೇಸರ

    |

    Recommended Video

    30 ವರ್ಷ ಕಳೆದಮೇಲೆ ಶಿವಣ್ಣ ಹೀಗೆ ಎಂದಿದ್ದೇಕೆ? | FILMIBEAT KANNADA

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಬಂದು 30 ವರ್ಷ ಕಳೆದಿದೆ. ಈಗ ಇದ್ದಷ್ಟು ಟಿವಿ ವಾಹಿನಿಗಳು, ಸುದ್ದಿ ಪತ್ರಿಕೆಗಳು ಆಗ ಇರಲಿಲ್ಲ. ಆದ್ರೀಗ ಮಾಧ್ಯಮ ಎನ್ನುವುದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಸೆಕೆಂಡ್ ಗಳಲ್ಲಿ ಜನರಿಗೆ ಸುದ್ದಿಗಳನ್ನ ಮುಟ್ಟಿಸುತ್ತಿವೆ.

    ಮಾಧ್ಯಮದವರು ಜೊತೆ ಎಲ್ಲ ಸೆಲೆಬ್ರಿಟಿಗಳು ಆತ್ಮೀಯವಾಗಿರಲ್ಲ. ಆದ್ರೆ, ಈ ವಿಷ್ಯದಲ್ಲೂ ಶಿವಣ್ಣ ವಿಶೇಷ. ಎಷ್ಟೇ ಬ್ಯುಸಿ ಇದ್ದರೂ ಮಾಧ್ಯಮದವರನ್ನ ಮಾತನಾಡಿಸಿ ನಂತರ ತಮ್ಮ ಕೆಲಸ ಮಾಡುವ ವ್ಯಕ್ತಿತ್ವವುಳ್ಳವರು. ಶಿವಣ್ಣ ಮನೆಗೆ ಹೋದರೆ, ಮನೆಯವರಂತೆ ವಿಚಾರಿಸುವ ಗುಣ ಹೊಂದಿದ್ದಾರೆ.

    ಮಂಡ್ಯದಲ್ಲಿ ಹೋಗಿ ಮಾತಾಡಿ, ಇಲ್ಲಿ ಬೇಡ: ಶಿವಣ್ಣನಿಗೆ ಕುಮಾರ್ ಬಂಗಾರಪ್ಪ ಟಾಂಗ್ಮಂಡ್ಯದಲ್ಲಿ ಹೋಗಿ ಮಾತಾಡಿ, ಇಲ್ಲಿ ಬೇಡ: ಶಿವಣ್ಣನಿಗೆ ಕುಮಾರ್ ಬಂಗಾರಪ್ಪ ಟಾಂಗ್

    ಇಂತಹ ಸೂಪರ್ ಸ್ಟಾರ್ ಈಗ ಟಿವಿ ವಾಹಿನಿಗಳ ಮೇಲೆ ಬೇಸರಗೊಂಡಿದ್ದಾರೆ. ಸುದ್ದಿ ವಾಹಿನಿಗಳು ಮಾಡುತ್ತಿರುವುದು ಸರಿಯಿಲ್ಲ ಎಂದಿದ್ದಾರೆ. ಶಿವರಾಜ್ ಕುಮಾರ್ ಅವರ ಮಾತು ಸತ್ಯವೆನಿಸಿದರೂ, ವಾಸ್ತವದಲ್ಲಿ ಟಿವಿ ಚಾನಲ್ ಗಳು ಮಾಡುತ್ತಿರುವುದು ಅವರ ಕರ್ತವ್ಯವೆನಿಸುತ್ತಿದೆ. ಅಷ್ಟಕ್ಕೂ, ಶಿವಣ್ಣನ ಬೇಸರಕ್ಕೆ ಕಾರಣವೇನು? ಮುಂದೆ ಓದಿ......

    ಕನ್ನಡ ಸಿನಿಮಾಗಳು ನಿರ್ಲಕ್ಷ್ಯ.!

    ಕನ್ನಡ ಸಿನಿಮಾಗಳು ನಿರ್ಲಕ್ಷ್ಯ.!

    ಲೋಕಸಭೆ ಚುನಾವಣೆಯ ಅಬ್ಬರದ ಪ್ರಚಾರದಲ್ಲಿ ಮುಳುಗಿ, ಕನ್ನಡ ಸಿನಿಮಾಗಳ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ. ವಿಶೇಷವಾಗಿ ಟಿವಿ ಚಾನಲ್ ಗಳು ಬರಿ ಎಲೆಕ್ಷನ್ ಕುರಿತಾಗಿ ಕಾರ್ಯಕ್ರಮಗಳನ್ನ ಪ್ರಸಾರ ಮಾಡುತ್ತಿದೆ ಎಂದು ನಟ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಶಿವಣ್ಣ ಸಂದರ್ಶನ: ನಾನು ಕಾಯಾ, ವಾಚಾ, ಮನಸಾ ತೊಡಗಿಸಿಕೊಂಡ ಚಿತ್ರ 'ಕವಚ'ಶಿವಣ್ಣ ಸಂದರ್ಶನ: ನಾನು ಕಾಯಾ, ವಾಚಾ, ಮನಸಾ ತೊಡಗಿಸಿಕೊಂಡ ಚಿತ್ರ 'ಕವಚ'

    ಸ್ವಲ್ಪ ನಮ್ಮ ಕಡೆಯೂ ನೋಡಿ ಸಾರ್

    ಸ್ವಲ್ಪ ನಮ್ಮ ಕಡೆಯೂ ನೋಡಿ ಸಾರ್

    'ದಿನಪೂರ್ತಿ ಎಲೆಕ್ಷನ್ ಬಗ್ಗೆನೇ ಪ್ರಸಾರ ಮಾಡಿದ್ರೆ ಹೇಗೆ, ಸ್ವಲ್ಪ ನಮ್ಮ ಕಡೆಯೂ ನೋಡಿ ಸಾರ್. ಅದೇ ಬಿಡುವು ಇದ್ದಾಗ, ನಮ್ಮ ಬಳಿ ಬಂದು ಬೇರೆ ಬೇರೆ ವಿಷ್ಯದ ಬಗ್ಗೆ ಬೈಟ್ ಕೇಳ್ತೀರ. ನಾವು ಕೂಡ ನಿಮಗೆ ಗೌರವ ಕೊಟ್ಟು, ಮಾತನಾಡುತ್ತೇವೆ. ಬಟ್, ಇಂತಹ ಸಮಯದಲ್ಲಿ ನಮ್ಮ ಸಿನಿಮಾಗಳ ಬಗ್ಗೆ ಯಾವುದೇ ಕೇರ್ ಮಾಡಲ್ಲ ಯಾಕೆ?' ಎಂದು ಪ್ರಶ್ನಿಸಿದ್ದಾರೆ.

    ಸುಖವಿದ್ದಾಗ ಇರ್ತಾರೆ ನೂರಾರು ಜನ, ಕಷ್ಟದಲ್ಲಿದ್ದಾಗ ಬರ್ತಾರೆ ಶಿವಣ್ಣಸುಖವಿದ್ದಾಗ ಇರ್ತಾರೆ ನೂರಾರು ಜನ, ಕಷ್ಟದಲ್ಲಿದ್ದಾಗ ಬರ್ತಾರೆ ಶಿವಣ್ಣ

    ಸಿನಿಮಾ ಅಂದ್ರೆ ಪ್ರಾಣ ಕೊಡ್ತೀನಿ

    ಸಿನಿಮಾ ಅಂದ್ರೆ ಪ್ರಾಣ ಕೊಡ್ತೀನಿ

    ''ಒಳ್ಳೆ ಸಿನಿಮಾಗಳು ಬರೋದು ಅಪರೂಪ. ಬಂದಾಗ, ಅದಕ್ಕೆ ಸಪೋರ್ಟ್ ಮಾಡುವುದು ಎಲ್ಲರ ಜವಾಬ್ದಾರಿ. 33 ವರ್ಷದ ನಂತರ ಶಿವಣ್ಣ ಯಾಕೆ ಹೀಗೆ ಮಾತಾಡ್ತಿದ್ದಾರೆ ಅಂತ ಕೇಳಬಹುದು. 33 ಅಲ್ಲ, 50 ವರ್ಷ ಆದ್ರೂ ಸಿನಿಮಾ ಅಂತ ಬಂದಾಗ ಪ್ರಾಣ ಕೊಡ್ತೀನಿ''

    ಸುಮಲತಾ ಮಾತ್ರವಲ್ಲ, ನಾನು ಯಾರ ಪರವೂ ಪ್ರಚಾರ ಮಾಡಲ್ಲ: ಶಿವಣ್ಣಸುಮಲತಾ ಮಾತ್ರವಲ್ಲ, ನಾನು ಯಾರ ಪರವೂ ಪ್ರಚಾರ ಮಾಡಲ್ಲ: ಶಿವಣ್ಣ

    ಎಲ್ಲರೂ ದುಡ್ಡಿಗಾಗಿ ಮಾಡ್ತಾರೆ

    ಎಲ್ಲರೂ ದುಡ್ಡಿಗಾಗಿ ಮಾಡ್ತಾರೆ

    ''ದಯವಿಟ್ಟು ಒಂದು ಸ್ವಲ್ಪ ಸಮಯ ಕೊಡಿ. ರಾಜಕೀಯ ಹಾಕಬಾರದು ಅಂತ ಅಲ್ಲ, ಬರಿ ರಾಜಕೀಯವೇ ಯಾಕೆ? ಒಂದು ಅರ್ಧ ಗಂಟೆ ನಮ್ಮ ಸಿನಿಮಾಗಳಿಗೆ ಟೈಂ ಕೊಡಿ. ನಮ್ಮ ಸಿನಿಮಾ ಓಕೆ, ನಾವು ಹೇಗೆ ಮಾಡ್ತೀವಿ. ಆದ್ರೆ, ಎಷ್ಟೊಂದು ಹೊಸ ಹೊಸ ಸಿನಿಮಾ ಬರುತ್ತೆ. ಅವರೆಲ್ಲಾ ಏನ್ ಮಾಡ್ತಾರೆ. ಎಲ್ಲರೂ ದುಡ್ಡು ಹಾಕಿರ್ತಾರೆ. ನಾವು ದುಡ್ಡಿಗಾಗಿ ಕೆಲಸ ಮಾಡ್ತೀವಿ, ನೀವು ದುಡ್ಡಿಗಾಗಿ ಬಿಸಿನೆಸ್‌ ಮಾಡ್ತೀವಿ''

    ವಿಜಯಲಕ್ಷ್ಮಿ ಒಬ್ಬರಿಗೇನೇ ಸಹಾಯ ಮಾಡುತ್ತಾ ಕೂರಲು ಆಗಲ್ಲ: ಶಿವಣ್ಣವಿಜಯಲಕ್ಷ್ಮಿ ಒಬ್ಬರಿಗೇನೇ ಸಹಾಯ ಮಾಡುತ್ತಾ ಕೂರಲು ಆಗಲ್ಲ: ಶಿವಣ್ಣ

    ಕಾಲ ಹೀಗೆ ಇರಲ್ಲ, ಬದಲಾಗುತ್ತೆ

    ಕಾಲ ಹೀಗೆ ಇರಲ್ಲ, ಬದಲಾಗುತ್ತೆ

    ''ಕೆಲವರಿಗೆ ಜಬರ್ ದಸ್ತ್ ಇರಬಹುದು. ಅವರಿಗೇನು ಎಂಬ ಭಾವನೆ ಇರಬಹುದು. ಆಯ್ತು, ನೀವೇ ದೊಡ್ಡವರಿರಬಹುದು ಬಿಡಿ. ಯಾವುತ್ತೂ ಹೀಗೆ ಇರಲ್ಲ. ಸ್ವಲ್ಪ ಎಡುವಿದ್ರೆ ಬೇರೆ ರೀತಿ ಆಗುತ್ತೆ. ಇದನ್ನ ನೀವು ವಾರ್ನಿಂಗ್ ಅಂದುಕೊಂಡರೂ ಪರವಾಗಿಲ್ಲ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ಆದ್ರೆ, ಎಲ್ಲೋ ಒಂದು ಕಡೆ ನಿರ್ಲಕ್ಷ್ಯ ಆಗ್ತಿದೆ ಎಂಬ ಭಾವನೆ ನಮಗಿದೆ'' ಎಂದು ಕವಚ ಸಕ್ಸಸ್ ಮೀಟ್ ನಲ್ಲಿ ತಿಳಿಸಿದರು.

    English summary
    Kannada actor Shivarajkumar vented his anger at news channels for completely ignoring Kannada films in election season and not promoting them.
    Monday, April 15, 2019, 13:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X