ನಿರ್ದೇಶಕ ಪ್ರೇಮ್ ವಿರುದ್ಧ 'ಶಿವ'ಭಕ್ತರು ಸಿಡಿಸಿದ 7 ಸಿಡಿಗುಂಡುಗಳು.!

By Harshitha

Recommended Video

TheVillain :ಪ್ರೇಮ್‌ಗೆ 7 ಸಿಡಿಗುಂಡು ಸಿಡಿಸಿದ ಶಿವಣ್ಣನ ಅಭಿಮಾನಿಗಳು..!

'ಜೋಗಿ' ಖ್ಯಾತಿಯ ಪ್ರೇಮ್ ಇದೀಗ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದ್ದಾರೆ. 'ದಿ ವಿಲನ್' ಅಂತಹ ಮಲ್ಟಿ ಸ್ಟಾರರ್ ಸಿನಿಮಾ ಮಾಡಲು ಹೋಗಿ ನಿರ್ದೇಶಕ ಪ್ರೇಮ್ ವಿವಾದಕ್ಕೀಡಾಗಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ರನ್ನ ಒಟ್ಟಿಗೆ ತೆರೆಮೇಲೆ ತರುವ ನಿರ್ದೇಶಕ ಪ್ರೇಮ್ ಪ್ರಯತ್ನ ಒಳ್ಳೆಯದ್ದೇ. ಆದ್ರೆ, 'ದಿ ವಿಲನ್' ಸಿನಿಮಾದಲ್ಲಿ ಒಬ್ಬರಿಗೆ ಹೆಚ್ಚು, ಇನ್ನೊಬ್ಬರಿಗೆ ಕಡಿಮೆ ಮಾಡಿದರೆ ಪ್ರೇಮ್ ಗೆ ತೊಂದರೆ ತಪ್ಪಿದ್ದಲ್ಲ. ಈಗ ಪ್ರೇಮ್ ಗೆ ಎದುರಾಗಿರುವ ಬಹುದೊಡ್ಡ ಪ್ರಾಬ್ಲಂ ಅಂದ್ರೆ ಇದೇ.!

ಮೊನ್ನೆಮೊನ್ನೆಯಷ್ಟೇ 'ದಿ ವಿಲನ್' ಸಿನಿಮಾದ ಟೀಸರ್ ಬಿಡುಗಡೆ ಆಯ್ತು. ಟೀಸರ್ ರಿಲೀಸ್ ಆದ್ಮೇಲೆ ಅದ್ಯಾಕೋ, ಏನೋ ಶಿವಣ್ಣನ ಅಭಿಮಾನಿಗಳು ಪ್ರೇಮ್ ಮೇಲೆ ಕೋಪಿಸಿಕೊಂಡಿದ್ದಾರೆ.

''ದಿ ವಿಲನ್' ಸಿನಿಮಾದ ಬಹುದೊಡ್ಡ ವಿಲನ್ ಪ್ರೇಮ್'' ಅಂತ ಕೆಂಡಕಾರುತ್ತಿರುವ ಶಿವ'ಭಕ್ತರು' ಟ್ವಿಟ್ಟರ್ ನಲ್ಲಿ #BoycottTheVillain ಎಂಬ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಮಾಡುತ್ತಿದ್ದಾರೆ. ಏನೇ ಆದರೂ 'ದಿ ವಿಲನ್' ಸಿನಿಮಾ ನೋಡಲ್ಲ ಅಂತ ಹೇಳುತ್ತಿರುವ ಶಿವಣ್ಣನ ಅಭಿಮಾನಿಗಳು, ನಿರ್ದೇಶಕ ಪ್ರೇಮ್ ಗೆ ಎಳು ಪ್ರಶ್ನೆಗಳ ಬಾಣ ಬಿಟ್ಟಿದ್ದಾರೆ. ಆ ಪ್ರಶ್ನೆಗಳು ಏನು ಅಂತ ನೀವೇ ಓದಿರಿ, ಫೋಟೋ ಸ್ಲೈಡ್ ಗಳಲ್ಲಿ...

'ಡಾಕ್ಟರ್' ಯಾಕ್ರೀ ಬಿಟ್ರಿ.?

'ಡಾಕ್ಟರ್' ಯಾಕ್ರೀ ಬಿಟ್ರಿ.?

''ಪದೇ ಪದೇ ಹೇಳಿದರೂ, 'ದಿ ವಿಲನ್' ಸಿನಿಮಾದ ಪೋಸ್ಟರ್ ಗಳಲ್ಲಿ ಶಿವರಾಜ್ ಕುಮಾರ್ ಹೆಸರಿಗೂ ಮುನ್ನ 'ಡಾ' ಅಂತ ಯಾಕೆ ಬಳಸುತ್ತಿಲ್ಲ. ಇದೇನಾ ನೀವು ಒಬ್ಬ ಲೆಜೆಂಡ್ ಗೆ ಕೊಡುವ ಮರ್ಯಾದೆ.?'' - ಇದು ನಿರ್ದೇಶಕ ಪ್ರೇಮ್ ಗೆ ಶಿವ'ಭಕ್ತ'ರು ಕೇಳಿರುವ ಮೊದಲ ಪ್ರಶ್ನೆ.

ಎಡಗಡೆ ಯಾಕೆ.?

ಎಡಗಡೆ ಯಾಕೆ.?

''ಬಹುತೇಕ ಎಲ್ಲ ಪೋಸ್ಟರ್ ಗಳಲ್ಲಿ ಶಿವಣ್ಣ ಎಡಭಾಗದಲ್ಲಿಯೇ ಇದ್ದಾರೆ. ಯಾಕೆ.? ಅವರು ಲೆಜೆಂಡ್ ಅನ್ನೋದು ನಿಮಗೆ ಗೊತ್ತಿಲ್ವ.?'' - ಇದು ನಿರ್ದೇಶಕ ಪ್ರೇಮ್ ಗೆ ಶಿವಣ್ಣನ ಅಭಿಮಾನಿಗಳು ಕೇಳಿರುವ ಎರಡನೇ ಪ್ರಶ್ನೆ.

ಎರಡು ಸಾಂಗ್ ಮಾತ್ರ ಯಾಕೆ.?

ಎರಡು ಸಾಂಗ್ ಮಾತ್ರ ಯಾಕೆ.?

''ದೀಪಣ್ಣ (ಸುದೀಪ್)ಗೆ ಮೂರು ಸಾಂಗ್ ಯಾಕೆ.? ಶಿವಣ್ಣನಿಗೆ ಬರೀ ಎರಡು ಹಾಡು ಯಾಕೆ.? ಡ್ಯಾನ್ಸ್ ಕಿಂಗ್ ಯಾರು ಅಂತ ನಿಮಗೆ ಗೊತ್ತಾ.?'' - ಇದು ನಿರ್ದೇಶಕ ಪ್ರೇಮ್ ಗೆ ಶಿವಣ್ಣನ ಅಭಿಮಾನಿಗಳು ಕೇಳಿರುವ ಮೂರನೇ ಪ್ರಶ್ನೆ.

ಶಿವಣ್ಣನ ಯಾಕೆ ಹೊಗಳಲ್ಲ.?

ಶಿವಣ್ಣನ ಯಾಕೆ ಹೊಗಳಲ್ಲ.?

''ಟ್ವಿಟ್ಟರ್ ನಲ್ಲಿ ಯಾವಾಗಲೂ ದೀಪಣ್ಣ (ಸುದೀಪ್)ನ ಮಾತ್ರ ಹೊಗಳುತ್ತಿರುತ್ತೀರಾ.! ಯಾಕೆ.. ಬಾಸ್ (ಶಿವಣ್ಣ) ಟ್ವಿಟ್ಟರ್ ನಲ್ಲಿ ಇಲ್ಲ ಅಂತಾನಾ.? ನಾವು ಫ್ಯಾನ್ಸ್ ಇನ್ನೂ ಬದುಕಿದ್ದೇವೆ'' - ಇದು ನಿರ್ದೇಶಕ ಪ್ರೇಮ್ ಗೆ ಶಿವಣ್ಣನ ಅಭಿಮಾನಿಗಳು ಕೇಳಿರುವ ನಾಲ್ಕನೇ ಪ್ರಶ್ನೆ.

ವಿಗ್ ಯಾಕಪ್ಪ.?

ವಿಗ್ ಯಾಕಪ್ಪ.?

''ಬಾಸ್ (ಶಿವಣ್ಣ) ಗೆ ತಲೆ ತುಂಬಾ ಕೂದಲು ಇದ್ರೂ ಯಾಕೆ ವಿಗ್ ಹಾಕ್ಸಿದ್ದು.? ದೀಪಣ್ಣ (ಸುದೀಪ್)ಗೆ ಯಾಕೆ ಹೇರ್ ಕಟ್ ಮಾಡ್ಸಿದ್ದು.?'' - ಇದು ನಿರ್ದೇಶಕ ಪ್ರೇಮ್ ಗೆ ಶಿವಣ್ಣನ ಅಭಿಮಾನಿಗಳು ಕೇಳಿರುವ ಐದನೇ ಪ್ರಶ್ನೆ.

ಪ್ರತಿಭಟನೆ ಮಾಡ್ತೀವಿ.!

ಪ್ರತಿಭಟನೆ ಮಾಡ್ತೀವಿ.!

''ಕ್ಲೈಮ್ಯಾಕ್ಸ್ ಚೇಂಜ್ ಮಾಡಿದರೆ ನಾವೆಲ್ಲ ಸಿನಿಮಾ ನೋಡ್ತೀವಿ, ಇಲ್ಲಾಂದ್ರೆ ದೇವ್ರಾಣೆ ನಾವು ಪ್ರತಿಭಟನೆ ಮಾಡಬೇಕಾಗುತ್ತೆ. ಆಮೇಲೆ ಎಲ್ಲದಕ್ಕೂ ನೀವೇ ಉತ್ತರ ಕೊಡಬೇಕಾಗುತ್ತೆ'' - ಇದು ನಿರ್ದೇಶಕ ಪ್ರೇಮ್ ಗೆ ಶಿವಣ್ಣನ ಅಭಿಮಾನಿಗಳು ಕೇಳಿರುವ ಆರನೇ ಪ್ರಶ್ನೆ.

ಲೆಜೆಂಡ್ ಅಂತ ಗೊತ್ತಿಲ್ವ.?

ಲೆಜೆಂಡ್ ಅಂತ ಗೊತ್ತಿಲ್ವ.?

''ಸುದೀಪ್ ನಿನ್ನೆ ಮೊನ್ನೆ ಬಂದಿರುವ ಹೀರೋ. ಶಿವಣ್ಣ ಒಬ್ಬರು ಲೆಜೆಂಡ್. ಅದು ನಿಮಗೂ ಗೊತ್ತು ತಾನೇ.? ದಯವಿಟ್ಟು ಫ್ಯಾನ್ಸ್ ಮಧ್ಯೆ ತಂದಿಡಬೇಡಿ'' - ಇದು ನಿರ್ದೇಶಕ ಪ್ರೇಮ್ ಗೆ ಶಿವಣ್ಣನ ಅಭಿಮಾನಿಗಳು ಕೇಳಿರುವ ಏಳನೇ ಪ್ರಶ್ನೆ.

ಎಲ್ಲದಕ್ಕೂ ಉತ್ತರ ಬೇಕು.!

ಎಲ್ಲದಕ್ಕೂ ಉತ್ತರ ಬೇಕು.!

ಈ ಎಲ್ಲಾ ಏಳು ಪ್ರಶ್ನೆಗಳಿಗೂ ಪ್ರೇಮ್ ಉತ್ತರ ಕೊಡಬೇಕು ಅಂತ ಶಿವಣ್ಣನ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ನಿರ್ದೇಶಕ ಪ್ರೇಮ್ ವಿರುದ್ಧ ಶಿವ'ಭಕ್ತರು' ಮೂರನೇ ಕಣ್ಣು ಬಿಟ್ಟಿದ್ದಾರೆ. ಇದಕ್ಕೆಲ್ಲ ಪ್ರೇಮ್ ಉತ್ತರ ಕೊಡ್ತಾರಾ.? ಇಲ್ಲ ಈ ವಿವಾದ ಯಾವ ಮಟ್ಟಕ್ಕೆ ಹೋಗಿ ತಲುಪುತ್ತೋ, ನೋಡಬೇಕು.

More from Filmibeat

English summary
Kannada Actor Shiva Rajkumar fans have taken Twitter to ask 7 Questions for 'The Villain' Director Prem. Will Prem answer those questions.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X