»   » ಹುಚ್ಚ ವೆಂಕಟ್ ಗೆ ಉಗಿದು ಉಪ್ಪಿನಕಾಯಿ ಹಾಕಿದ ಶಿವಣ್ಣನ ಅಭಿಮಾನಿಗಳು!

ಹುಚ್ಚ ವೆಂಕಟ್ ಗೆ ಉಗಿದು ಉಪ್ಪಿನಕಾಯಿ ಹಾಕಿದ ಶಿವಣ್ಣನ ಅಭಿಮಾನಿಗಳು!

Posted By:
Subscribe to Filmibeat Kannada

ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಲು, ಅವರ ಮನೆ ಬಳಿ ಹುಚ್ಚ ವೆಂಕಟ್ ಹೋಗಿದ್ದಾರೆ. ಆದ್ರೆ, ಮನೆಯಲ್ಲಿ ಶಿವಣ್ಣ ಇರಲಿಲ್ಲ. ಶಿವಣ್ಣನ ಡ್ರೈವರ್ ಹಾಗೂ ಸೆಕ್ಯೂರಿಟಿ ಗಾರ್ಡ್ ಕೂಡ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಅಷ್ಟಕ್ಕೆ, ಶಿವಣ್ಣನ ಬಗ್ಗೆ ಹುಚ್ಚ ವೆಂಕಟ್ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ.

ಶಿವಣ್ಣನ ಬಗ್ಗೆ ನಾಲಿಗೆ ಬಿಗಿ ಹಿಡಿಯದೆ ಹುಚ್ಚ ವೆಂಕಟ್ ಮಾತನಾಡಿರುವ ವಿಡಿಯೋ ಬಗ್ಗೆ ಈಗ ಎಲ್ಲೆಡೆ ಅಸಮಾಧಾನ ಭುಗಿಲೆದ್ದಿದೆ. ಮನಬಂದಂತೆ ಮಾತನಾಡುವ ಹುಚ್ಚ ವೆಂಕಟ್ ಗೆ ಶಿವಣ್ಣನ ಅಭಿಮಾನಿಗಳು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ.

ಶಿವಣ್ಣನ ಬಗ್ಗೆ ಅರಿಯದೆ ಹುಚ್ಚ ವೆಂಕಟ್ ಮಾಡಿರುವ ಹುಚ್ಚಾಟಕ್ಕೆ ಶಿವರಾಜ್ ಕುಮಾರ್ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಹೀಗಾಗಿ ಹುಚ್ಚ ವೆಂಕಟ್ ಮೂತಿಗೆ ಶಿವ'ಭಕ್ತ'ರು ಮಹಾ ಮಂಗಳಾರತಿ ಎತ್ತುತ್ತಿದ್ದಾರೆ. ಮುಂದೆ ಓದಿರಿ...

ನಾಲಿಗೆ ಬಿಡಿ ಹಿಡಿ

ಶಿವಣ್ಣ ಬಗ್ಗೆ ಏನೇನೋ ಮಾತನಾಡಿರುವ ಹುಚ್ಚ ವೆಂಕಟ್ ಮೇಲೆ ಶಿವಣ್ಣನ ಅಭಿಮಾನಿಯಾದ ಸಾಗರ್ ಮನಸ್ಸು ಕಿಡಿಕಾರಿದ್ದಾರೆ. ಹುಚ್ಚ ವೆಂಕಟ್ ಗೆ ವಿಡಿಯೋ ಮೂಲಕವೇ ಚಳಿ ಬಿಡಿಸಿದ್ದಾರೆ ಸಾಗರ್ ಮನಸ್ಸು. ''ಅವರಿವರ ಹೆಸರು ಹೇಳಿ ಬಿಟ್ಟಿ ಪಬ್ಲಿಸಿಟಿ ತೆಗೆದುಕೊಳ್ಳುವುದಲ್ಲ. ಶಿವಣ್ಣ ಏನು ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಅಂತಹ ದೊಡ್ಡ ವ್ಯಕ್ತಿ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿ'' ಅಂತ ಸಾಗರ್ ಮನಸ್ಸು ಹುಚ್ಚ ವೆಂಕಟ್ ಗೆ ಬಿಸಿ ಮುಟ್ಟಿಸಿದ್ದಾರೆ.

ವಿಡಿಯೋ: ಶಿವಣ್ಣ ಬಗ್ಗೆ ಬಾಯಿಗೆ ಬಂದ್ಹಂಗೆ ಮಾತನಾಡಿರುವ ಹುಚ್ಚ ವೆಂಕಟ್

ಹುಚ್ಚುಚ್ಚಾಗಿ ಮಾತಾಡ್ಬೇಡ್ರಿ

''ಹೆಸರಿಗೆ ತಕ್ಕ ಹಾಗೆ ಹುಚ್ಚುಚ್ಚಾಗಿ ಮಾತಾಡ್ಬೇಡ್ರಿ. ಶಿವಣ್ಣನ ಮನೆಗೆ ಹೋದರೆ ಬರಿ ನೀರಲ್ಲ. ಪಾನಕ ಕೊಡುತ್ತಾರೆ. ಹಸಿವಿನಿಂದ ಹೋದರೆ ಬಿರಿಯಾನಿ ಕೊಡ್ತಾರೆ. ಸುಮ್ ಸುಮ್ನೆ ಪಬ್ಲಿಸಿಟಿಗೆ ಈ ರೀತಿ ಹೇಳಿಕೆ ಕೊಡಬೇಡಿ. ಪಬ್ಲಿಕ್ ನಿಂದ ತುಂಬಾ ತೊಂದರೆ ಅನುಭವಿಸುತ್ತೀರಾ. ಹುಷಾರ್'' ಅಂತ ಶಿವಣ್ಣ ಅಭಿಮಾನಿಗಳು ಹುಚ್ಚ ವೆಂಕಟ್ ಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಹುಚ್ಚ ವೆಂಕಟ್ ಮೂತಿಗೆ ಮಂಗಳಾರತಿ ಎತ್ತಿದ ಪತ್ರಕರ್ತ ಯತಿರಾಜ್.!

ಬಿಟ್ಟಿ ಬಿಲ್ಡಪ್ ಯಾಕೆ.?

''ನಮ್ಮ ಬಾಸ್ ಮನೆಗೆ ಹೋದರೆ ಯಾವತ್ತೂ ಏನೂ ತಿನ್ನಿಸದೆ ಕಳುಹಿಸುವುದಿಲ್ಲ. ಅವರ ಮನೆಯಲ್ಲಿ ಒಂದು ಫಂಕ್ಷನ್ ಅಂದ್ರೆ, ಇಡೀ ಮನೆಯೇ ಅಭಿಮಾನಿಗಳದ್ದಾಗಿರುತ್ತದೆ. ಸುಮ್ಮನೆ ಯಾಕೆ ಬಿಟ್ಟಿ ಬಿಲ್ಡಪ್ ತೆಗೆದುಕೊಳ್ತೀಯಾ. ಅವರೇನು ಅಂತ ಎಲ್ಲರಿಗೂ ಗೊತ್ತು'' ಎಂದಿದ್ದಾರೆ ಶಿವಣ್ಣನ ಅಭಿಮಾನಿಗಳು.

ಹದ್ದಿನ ತರಹ ಕುಕ್ಕಿ ಸಾಯಿಸ್ತೀವಿ

ಹುಚ್ಚ ವೆಂಕಟ್ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಎಷ್ಟು ಕೋಪಗೊಂಡಿದ್ದಾರೆ ಎನ್ನುವುದಕ್ಕೆ ಈ ಕಾಮೆಂಟ್ ಸಾಕ್ಷಿ.

English summary
Kannada Actor Shiva Rajkumar fans are annoyed with Firing Star Huccha Venkat for his video against Shiva Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada