twitter
    For Quick Alerts
    ALLOW NOTIFICATIONS  
    For Daily Alerts

    ಶಿವ ಸೈನ್ಯ ಹುಡುಗರಿಂದ ಮಹತ್ವದ ಕಾರ್ಯಕ್ರಮ

    |

    Recommended Video

    Kavacha Kannada movie : ಶಿವ ಸೈನ್ಯ ಹುಡುಗರಿಂದ ಮಹತ್ವದ ಕಾರ್ಯಕ್ರಮ..!

    ಹ್ಯಾಟ್ರಿಕ್ ಹೀರೋ ಡಾ ಶಿವರಾಜ್ ಕುಮಾರ್ ಅಭಿನಯದ "ಕವಚ" ಸಿನಿಮಾ ಇದೇ ತಿಂಗಳು 18 ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಕಣ್ಣಿಲ್ಲದ ವ್ಯಕ್ತಿಯಾಗಿ ಅಭಿನಯಿಸಿದ್ದಾರೆ. ಇದು ಸಹಜವಾಗಿ ಶಿವು ಫ್ಯಾನ್ಸ್ ಹೊಸ ರೀತಿಯ ಮನರಂಜನೆಯಾಗಲಿದೆ.

    'ಕವಚ' ಚಿತ್ರದ ಪ್ರಯುಕ್ತ ಶಿವಣ್ಣ ಅಭಿಮಾನಿಗಳು ವಿಶೇಷವಾದ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ಶಿವ ಸೈನ್ಯ ಹುಡುಗರು 'ಕವಚ' ಬಿಡುಗಡೆಯ ದಿನ ಕೆಲವು ಮಹತ್ವದ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.

    ಮೂರು ದಿನ 'ಗೃಹಬಂಧನ'ದ ಬಗ್ಗೆ 'ಸಿಂಹದ ಮರಿ' ಹೇಳಿದ್ದೇನು? ಮೂರು ದಿನ 'ಗೃಹಬಂಧನ'ದ ಬಗ್ಗೆ 'ಸಿಂಹದ ಮರಿ' ಹೇಳಿದ್ದೇನು?

    ಹೌದು, ಕೆಜಿ ರಸ್ತೆಯ ತ್ರಿವೇಣಿ ಚಿತ್ರಮಂದಿರದಲ್ಲಿ ಕವಚ ಸಿನಿಮಾ ಬಿಡುಗಡೆಯಾಗುತ್ತಿದೆ. ಅದೇ ದಿನ ಅದೇ ಸ್ಥಳದಲ್ಲಿ ನೇತ್ರ ತಪಾಸಣೆ, ನೇತ್ರ ಚಿಕಿತ್ಸೆ, ನೇತ್ರದಾನ ಎಂಬ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದಾರೆ.

    Shiva rajkumar fans organized eye donate camp

    ಕತೆ ಕೇಳುವಾಗಲೇ ಫ್ಯಾನ್ಸ್ ಬಗ್ಗೆಯೂ ಯೋಚಿಸುತ್ತೇನೆ ಎಂದ ಡಾ.ಶಿವರಾಜ್ ಕುಮಾರ್.! ಕತೆ ಕೇಳುವಾಗಲೇ ಫ್ಯಾನ್ಸ್ ಬಗ್ಗೆಯೂ ಯೋಚಿಸುತ್ತೇನೆ ಎಂದ ಡಾ.ಶಿವರಾಜ್ ಕುಮಾರ್.!

    ವರ್ಧಮಾನ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಬೆಳಿಗ್ಗೆ 9 ಗಂಟೆಯಿಂದ 2 ಗಂಟೆಯವರೆಗೆ ಅವಶ್ಯಕತೆವುಳ್ಳವರು ಬಂದು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಮನವಿ ಮಾಡಿಕೊಂಡಿದ್ದಾರೆ.

    ಇನ್ನುಳಿದಂತೆ ಕವಚ ಸಿನಿಮಾ ಮಲಯಾಳಂ ಭಾಷೆಯ ಒಪ್ಪಂ ಚಿತ್ರದ ರೀಮೇಕ್ ಆಗಿದ್ದು, ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆಯುತ್ತಿದೆ. ಜಿ.ವಿ.ಆರ್ ವಾಸು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಇಶಾ ಕೊಪ್ಪಿಕಾರ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇವರ ಜೊತೆ ಕೃತಿಕಾ ಜಯರಾಂ, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ಕಾಣಿಸಿಕೊಂಡಿದ್ದಾರೆ.

    English summary
    Kannada actor shiva rajkumar fans (shiva sainya) organized eye donate camp in front of triveni theater on january 18th. same day shivanna movie kavacha to release
    Wednesday, January 9, 2019, 15:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X