For Quick Alerts
  ALLOW NOTIFICATIONS  
  For Daily Alerts

  ಹುತಾತ್ಮ ಯೋಧನ ಕುಟುಂಬಕ್ಕೆ 'ಶಿವಸೈನ್ಯ'ದಿಂದ ಸಹಾಯ ಹಸ್ತ

  |
  Pulwama : ಹುತಾತ್ಮ ಯೋಧನ ಕುಟುಂಬಕ್ಕೆ 'ಶಿವಸೈನ್ಯ'ದಿಂದ ಸಹಾಯ ಹಸ್ತ..! | Oneindia Kannada

  ದೇಶದಾದ್ಯಂತ ನೋವು ತಂದಂಥ ಘಟನೆ ಜಮ್ಮು ಕಾಶ್ಮೀರದಲ್ಲಿ ಉಂಟಾದ ಯೋಧರ ದುರ್ಮರಣ. ಕನ್ನಡ ಚಿತ್ರರಂಗ ಕೂಡ ಘಟನೆಗೆ ದೊಡ್ಡ ಮಟ್ಟದಲ್ಲಿ ಸ್ಪಂದಿಸಿದೆ. ಕನ್ನಡದ ಖ್ಯಾತ ನಟ ಡಾ. ಶಿವರಾಜ್ ಕುಮಾರ್ ಅವರ ಅಭಿಮಾನಿ ಬಳಗ ಕೂಡ ಈ ನಿಟ್ಟಿನಲ್ಲಿ ಪ್ರಮುಖ ಕೆಲಸವೊಂದನ್ನು ಮಾಡಿದೆ.

  ಇಂದಿಗೂ ಮೂವತ್ತ ಮೂರು ವರ್ಷಗಳ ನವಯುವಕನಂತೆ ಕಾಣಿಸುವ ಮೈಕಟ್ಟು ಶಿವಣ್ಣನದು. ಆದರೆ ಅವರು ಚಿತ್ರರಂಗ ಪ್ರವೇಶಿಸಿಯೇ ಮೂವತ್ತ ಮೂರು ವರ್ಷಗಳಾಗಿದೆ ಎನ್ನುವುದು ವಾಸ್ತವ. ಆನಂದ್ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಂಥ ಶಿವರಾಜ್ ಕುಮಾರ್ ಬಗ್ಗೆ ಅಂದಿಗಿಂತ ನೂರು ಪಟ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಅಭಿಮಾನ ತೋರಿಸುತ್ತಿದ್ದಾರೆ.

  ಯೋಧರ ಕುಟುಂಬದ ಕಣ್ಣೀರು ಒರೆಸಿದ ಅಕ್ಷಯ್ ಕುಮಾರ್

  ಹಾಗಾಗಿಯೇ ಈ ಸಂಭ್ರಮವನ್ನು ಒಂದು ಕಾರ್ಯಕ್ರಮವಾಗಿ ಆಯೋಜಿಸುವ ಪ್ರಯತ್ನ ಶಿವರಾಜ್ ಫ್ಯಾನ್ಸ್ ಗಳ 'ಶಿವಸೈನ್ಯ' ತಂಡದಲ್ಲಿತ್ತು. ಆದರೆ ಇದೇ ಸಂದರ್ಭದಲ್ಲಿ ಯೋಧರ ಸಾವು ಸೂತಕದ ಛಾಯೆ ಸೃಷ್ಟಿಸಿತು. ಅದನ್ನು ಅರಿತ ಅಭಿಮಾನಿಗಳು‌ ಒಂದು ಪ್ರಜ್ಞಾವಂತ ನಿರ್ಧಾರಕ್ಕೆ ‌ಮುಂದಾಗಿದ್ದಾರೆ.

   ಗುರು ಕುಟುಂಬಕ್ಕೆ ಸಹಾಯ ಹಸ್ತ

  ಗುರು ಕುಟುಂಬಕ್ಕೆ ಸಹಾಯ ಹಸ್ತ

  ಮಂಡ್ಯದ ವೀರ‌ಯೋಧ ಗುರುವಿನ ಸಾವು ಆ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟು‌ಮಾಡಿದೆ. ಈ‌ ಸಂದರ್ಭದಲ್ಲಿ ನಾಡಿನ ಸಾಂಸ್ಕೃತಿಕ ರಾಯಭಾರಿ ಡಾ.ರಾಜ್ ಅವರ ಪುತ್ರ ಶಿವರಾಜ್ ಅವರ ಅಭಿಮಾನಿಗಳು ‌ಕೂಡ ಹಿರಿಯರು ಹಾಕಿಕೊಟ್ಟಂಥ ಆದರ್ಶವನ್ನು ಅನುಕರಿಸಿದ್ದಾರೆ. ಹುತಾತ್ಮ ಯೋಧನ ಕುಟುಂಬಕ್ಕೆ ಸಹಾಯ ಮಾಡುವುದಕ್ಕಾಗಿ ನಿಗಿಧಿಯಾಗಿದ್ದ ಕಾರ್ಯಕ್ರಮವನ್ನೇ ರದ್ದು ಮಾಡಿದ್ದಾರೆ ಶಿವು ಫ್ಯಾನ್ಸ್.

  ಹುತಾತ್ಮ ಯೋಧರಿಗೆ ನೆರವಾದ 'ಉರಿ' ಚಿತ್ರತಂಡ: ಎಷ್ಟು ಹಣ ನೀಡಿದ್ರು?

  ಯೋಧನ ಕುಟುಂಬಕ್ಕೆ ಸಾಂತ್ವನ

  ಯೋಧನ ಕುಟುಂಬಕ್ಕೆ ಸಾಂತ್ವನ

  ತಾವು ವಾರ್ಷಿಕೋತ್ಸವದ ಸಂಭ್ರಮಕ್ಕೆಂದು ಸಂಗ್ರಹಿಸಿದ ಹಣಕ್ಕೆ ಇನ್ನಷ್ಟು ಸೇರಿಸಿ ಅದನ್ನು‌ 63ಸಾವಿರದಷ್ಟು ಮಾಡಿ, ಸಾವಿನ ಮನೆಯ ಸಹಾಯಕ್ಕೆ ಧಾವಿಸಿದ್ದಾರೆ. ಯೋಧನ ಪತ್ನಿ ಕಲಾವತಿಯವರ ಕೈಗೆ ತಮ್ಮಿಂದಾಗುವ ಈ‌ ಮೊತ್ತವನ್ನು‌ ನೀಡಿ ಅವರೊಂದಿಗೆ ಸದಾ ಬೆಂಬಲವಾಗಿ ನಿಲ್ಲುವ ಭರವಸೆಯನ್ನು ಶಿವಸೈನ್ಯ ನೀಡಿದೆ.

  ಹುತಾತ್ಮ ಯೋಧ ಗುರು ಕುಟುಂಬಕ್ಕೆ ಧನ ಸಹಾಯ ಮಾಡಿದ 'ಬೆಲ್ ಬಾಟಂ' ತಂಡ

  ಶಿವಣ್ಣನಿಂದ ಸಾಂತ್ವಾನ

  ಪ್ರಸ್ತುತ ಡಾ. ಶಿವಣ್ಣ ಕೇರಳದಲ್ಲಿ ಸಿನಿಮಾ ಚಿತ್ರೀಕರಣ ನಿರತರಾಗಿದ್ದಾರೆ. ‌ಆದರೆ ತಮ್ಮ ಅಭಿಮಾನಿ ಸಂಘಟನೆಯಾದ ಶಿವಸೈನ್ಯ ತಂಡದವರು ಇಂಥದೊಂದು ಕಾರ್ಯ ಮಾಡಿರುವುದನ್ನು ತಿಳಿದು ಅವರಿಗೂ ಹೆಮ್ಮೆ ಮೂಡಿದೆ. ಅಲ್ಲಿಂದಲೇ ಫೋನಲ್ಲಿ ಮಾತನಾಡಿದ ಡಾ.ಶಿವರಾಜ್ ಕುಮಾರ್ ಗುರು ಅವರ ಪತ್ನಿ ಕಲಾವತಿಯವರಿಗೆ ಸಾಂತ್ವನದ ಮಾತುಗಳನ್ನು ಹೇಳಿದ್ದಾರೆ. ಚಿತ್ರೀಕರಣದಿಂದ ಮರಳಿದ ಮೇಲೆ ಅಲ್ಲಿಗೆ ಭೇಟಿ ನೀಡುವುದಾಗಿ ಹೇಳಿರುವ ಅವರು, ತಮ್ಮ ಸಹಕಾರ ಎಂದಿಗೂ ಇರುವುದಾಗಿ ಭರವಸೆ ನೀಡಿದ್ದಾರೆ.

  ಹುತಾತ್ಮ ಯೋಧ ಗುರು ಕುಟುಂಬಕ್ಕೆ ಧನಸಹಾಯ ಮಾಡಿದ ನಟ ಭುವನ್ ಪೊನ್ನಣ್ಣ

  ಮೆಚ್ಚುವಂತಹ ಕೆಲಸ ಇದು

  ಮೆಚ್ಚುವಂತಹ ಕೆಲಸ ಇದು

  ಶಿವಸೈನ್ಯದ ಈ ಕಾರ್ಯ, ಎಲ್ಲರಲ್ಲಿಯೂ ಅಭಿಮಾನಿಗಳ ಬಗ್ಗೆ ಮೆಚ್ಚುಗೆಯನ್ನು ಮೂಡಿಸಿದೆ. ನಟನ ಹೆಸರಿನಲ್ಲಿ ಸಂಭ್ರಮ ಪಡುವುದಕ್ಕಿಂತ, ಆ ನಟನ ಹೆಸರಿನಲ್ಲಿ ದೇಶಕ್ಕಾಗಿ ಹುತಾತ್ಮರಾದ ಕುಟುಂಬಕ್ಕೆ ಸಹಾಯ ಮಾಡುವುದು ಅದಕ್ಕಿಂತ ಉತ್ತಮ ಕೆಲಸ ಎಂಬುದು ಖುಷಿ ನೀಡಿದೆ.

  'ಯೋಧ ಗುರು' ಕುಟುಂಬಕ್ಕೆ 'ಕೆಮಿಸ್ಟ್ರಿ ಕರಿಯಪ್ಪ' ಚಿತ್ರತಂಡ ನೆರವು

  English summary
  Kannada actor shiva rajkumar fans association shiva sainya helped to soldier guru family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X