twitter
    For Quick Alerts
    ALLOW NOTIFICATIONS  
    For Daily Alerts

    ನಟಿ ಕಂಗನಾಗೆ ಪದ್ಮಶ್ರೀ: ಶಿವರಾಜ್ ಕುಮಾರ್ ಅಭಿಮಾನಿಗಳ ಅಸಮಾಧಾನ

    |

    Recommended Video

    ಕಂಗನಾಗೆ ಪದ್ಮಶ್ರೀ ಸಿಕ್ಕಿದ್ದಕ್ಕೆ ಶಿವಣ್ಣ ಅಭಿಮಾನಿಗಳು ಬೇಸರ | KANGANA | SHIVANNA | PADMASRI

    ಗಣರಾಜ್ಯೋತ್ಸವದ ದಿನ ಪ್ರತಿ ಬಾರಿಯಂತೆ ಈ ಬಾರಿಯೂ ಪದ್ಮ ಪ್ರಶಸ್ತಿಗಳು ಘೋಷಣೆ ಆಗಿದೆ. ಈ ಪೈಕಿ ಬಾಲಿವುಡ್ ಚಿತ್ರರಂಗದ 4 ಗಣ್ಯರಿಗೆ ಪ್ರಶಸ್ತಿ ದೊರೆತಿದೆ.

    ನಟಿ ಕಂಗನಾ ರಣಾವತ್, ನಿರ್ಮಾಪಕಿ ಏಕ್ತ ಕಪೂರ್, ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್, ಗಾಯಕ ಅದ್ನಾನ್ ಸಮಿ ಈ ನಾಲ್ವರ ಸಿನಿಮಾ ರಂಗದ ಸಾಧನೆಗಾಗಿ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆ.

    ಬಾಲಿವುಡ್ ನ 4 ಮಂದಿಗೆ ಒಲಿದ ಪ್ರತಿಷ್ಠಿತ ಪದ್ಮ ಪ್ರಶಸ್ತಿ: ಸಂತಸ ಹಂಚಿಕೊಂಡ ಸ್ಟಾರ್ಸ್ಬಾಲಿವುಡ್ ನ 4 ಮಂದಿಗೆ ಒಲಿದ ಪ್ರತಿಷ್ಠಿತ ಪದ್ಮ ಪ್ರಶಸ್ತಿ: ಸಂತಸ ಹಂಚಿಕೊಂಡ ಸ್ಟಾರ್ಸ್

    ಆದರೆ, ಈ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಶಿವರಾಜ್ ಕುಮಾರ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಶಿವರಾಜ್ ಕುಮಾರ್ ಅವರ ಸಾಧನೆಯನ್ನು ಗಮನಿಸಿಲ್ಲ. ಕಂಗಾನಾರಿಗೆ ಪದ್ಮ ಶ್ರೀ ಪ್ರಶಸ್ತಿ ನೀಡಿರುವ ಸರ್ಕಾರ 30 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಶಿವರಾಜ್ ಕುಮಾರ್ ರನ್ನು ಏಕೆ ನೋಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

    ಡಾ ಶಿವರಾಜ್ ಕುಮಾರ್ ಯುವ ಸೇನೆ ಫೇಸ್ ಬುಕ್ ಪೇಜ್ ಮೂಲಕ ಈ ರೀತಿಯಾಗಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.

    ಶಿವಣ್ಣನಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿಲ್ಲ

    ಶಿವಣ್ಣನಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿಲ್ಲ

    ''ಕಂಗನಾ ರಣಾವತ್ ರಿಗೆ ಪದ್ಮಶ್ರೀ ಗೌರವ.. ಇರಲಿ ನಮ್ಮ ದೇಶದ ನಟಿಗೆ ಸಿಕ್ಕಿರುವ ಪ್ರಶಸ್ತಿಗೆ ಕಂಗನಾ ರಣಾವತ್ ಅವರನ್ನು ಗೌರವಿಸೋಣ. ಕಂಗನಾ ರಾವತ್ ಅವರು ಹುಟ್ಟಿದ್ದು 23-3-1987 ಅಂದರೆ, ಈಗ ಕಂಗನಾ ಅವರಿಗೆ 32 ವರ್ಷ. ಅದೇ ನಮ್ಮ ಶಿವಣ್ಣ ಚಿತ್ರರಂಗ ಪ್ರವೇಶಿಸಿದ್ದು 1986. ಶಿವಣ್ಣನಿಗೆ ಈಗ 57 ವರ್ಷ. ಆದರೂ ಶಿವಣ್ಣನಿಗೆ ಇದುವರೆಗೂ ಯಾವುದೇ ರಾಷ್ಟ್ರ ಪ್ರಶಸ್ತಿ ದೊರೆತಿಲ್ಲ.'' - ಡಾ ಶಿವರಾಜ್ ಕುಮಾರ್ ಯುವ ಸೇನೆ

    ಕನ್ನಡ ಚಿತ್ರರಂಗಕ್ಕೆ ಅನ್ಯಾಯ

    ಕನ್ನಡ ಚಿತ್ರರಂಗಕ್ಕೆ ಅನ್ಯಾಯ

    ''ಕನ್ನಡಿಗರು ಇಂತಹ ವಿಚಾರದಲ್ಲಿ ಪಕ್ಷ ಭೇದ ಮರೆಯಬೇಕು. ಸಿನಿಮಾಗಳ ವಿಚಾರದಲ್ಲಿ ಬೇರೆ ಭಾಷೆಯ ನಟರು ಭಾರತ ರತ್ನ ಸೇರಿ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಪ್ರತಿ ವರ್ಷ ಪಡೆಯುತ್ತಲೇ ಇದ್ದಾರೆ. ಆದರೆ, ಕನ್ನಡ ಚಿತ್ರರಂಗ ಮಾತ್ರ ರಾಷ್ಟ್ರ ಪ್ರಶಸ್ತಿಗಳಿಂದ ವಂಚಿತವಾಗುತ್ತಲೇ ಇದೆ.'' - ಡಾ ಶಿವರಾಜ್ ಕುಮಾರ್ ಯುವ ಸೇನೆ

    2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ

    ಕಾದಂಬರಿ ಆಧಾರಿತ ಸಿನಿಮಾಗಳು

    ಕಾದಂಬರಿ ಆಧಾರಿತ ಸಿನಿಮಾಗಳು

    ''ನೆನಪಿಡಿ ಶಿವರಾಜಕುಮಾರ್ ಮಾಡಿರುವ ಕಾದಂಬರಿ ಆಧಾರಿತ ಚಿತ್ರಗಳನ್ನು (ಜನುಮದ ಜೋಡಿ, ಹಗಲುವೇಷ, ಚಿಗುರಿದ ಕನಸು, ದೊರೆ, ಮನ ಮೆಚ್ಚಿದ ಹುಡುಗಿ, ಭೂಮಿ ತಾಯಿಯ ಚೊಚ್ಚಲ ಮಗ.. ಮುಂತಾದವು ) ಇದುವರೆಗೂ ಯಾವ ನಟನೂ (ರಾಜಕುಮಾರ್ ಹೊರತುಪಡಿಸಿ ) ಮಾಡಿಲ್ಲ.. ಈ ವಿಷಯವಾಗಿ ಕನ್ನಡದ ಎಲ್ಲಾ ನಟರ ಅಭಿಮಾನಿಗಳು ಒಗ್ಗಟ್ಟಿನ ಬಲ ಪ್ರದರ್ಶಿಸಬೇಕಿದೆ. ತಪ್ಪಿದ್ದರೆ ಕ್ಷಮಿಸಿ ಕನ್ನಡಿಗರೇ'' - ಡಾ ಶಿವರಾಜ್ ಕುಮಾರ್ ಯುವ ಸೇನೆ

    ಹೋರಾಟ ಮಾಡೋಣ

    ಹೋರಾಟ ಮಾಡೋಣ

    ಶಿವರಾಜ್ ಕುಮಾರ್ ಅಭಿಮಾನಿಗಳು ಈ ರೀತಿಯಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಶಿವರಾಜ್ ಕುಮಾರ್ ಮನವಿಗೆ ಅನೇಕರು ಸ್ಪಂದಿಸಿದ್ದಾರೆ. ಶಿವರಾಜ್ ಕುಮಾರ್ ಸಿನಿಮಾ ಸಾಧನೆಗೆ ರಾಷ್ಟ್ರ ಪ್ರಶಸ್ತಿ, ಪದ್ಮ ಶ್ರೀ ಪ್ರಶಸ್ತಿ ನೀಡಬೇಕು ಎಂದು ತಮ್ಮ ಬೆಂಬಲ ಸೂಚಿಸಿದ್ದಾರೆ. ಎಲ್ಲ ನಟರ ಅಭಿಮಾನಿಗಳು ಈ ಬಗ್ಗೆ ಹೋರಾಟ ಮಾಡೋಣ ಎನ್ನುವ ಮಾತುಗಳು ಕಾಮೆಂಟ್ಸ್ ನಲ್ಲಿ ಕೇಳಿಬರುತ್ತಿವೆ.

    English summary
    Kannada actor Shiva Rajkumar fans unhappy about Padma Award.
    Monday, January 27, 2020, 10:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X