twitter
    For Quick Alerts
    ALLOW NOTIFICATIONS  
    For Daily Alerts

    ಪ್ರೇಮ್ ವಿರುದ್ಧ ಪ್ರತಿಭಟನೆ : ಶಿವಣ್ಣನ ಅಭಿಮಾನಿಗಳ ಆರೋಪಗಳು ಏನು ?

    |

    Recommended Video

    Thevillain :ಪ್ರೇಮ್ ವಿರುದ್ದ ಪ್ರತಿಭಟನೆಗೆ ಶಿವರಾಜ್ ಕುಮಾರ್ ಅಭಿಮಾನಿಗಳ ನಿರ್ಧಾರ

    'ದಿ ವಿಲನ್' ಸಿನಿಮಾ ನಿನ್ನೆ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಆದರೆ, ಈ ಸಿನಿಮಾ ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ಶಿವರಾಜ್ ಕುಮಾರ್ ಅಬಿಮಾನಿಗಳು ಸಿನಿಮಾದ ಮೇಲೆ ಮುನಿಸಿಕೊಂಡಿದ್ದಾರೆ.

    ಚಿತ್ರ ನೋಡಿ ಬಂದವರ ಪೈಕಿ ಅನೇಕರು ಸಿನಿಮಾ ನಿರೀಕ್ಷೆಯ ಮಟ್ಟಕ್ಕೆ ಇಲ್ಲ ಎಂದು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಶಿವರಾಜ್ ಕುಮಾರ್ ಅವರ ಪಾತ್ರ ಅವರ ಅಪಟ್ಟ ಅಭಿಮಾನಿಗಳಿಗೆ ತೃಪ್ತಿ ನೀಡಿಲ್ಲ.

    'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು! 'ದಿ ವಿಲನ್' ವಿಮರ್ಶೆ: ರಾಮನಾಗಿ ಪ್ರೀತಿಸು, ರಾವಣನಾಗಿ ಯೋಚಿಸು!

    ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಶಿವಣ್ಣ ಅಭಿಮಾನಿಗಳು ವಾರ್ ಶುರು ಮಾಡಿದ್ದಾರೆ. ಶಿವರಾಜ್ ಕುಮಾರ್ ನಿರ್ದೇಶಕ ಪ್ರೇಮ್ ಅವರಿಗೆ ಸರಿಯಾದ ಪಾತ್ರ ನೀಡಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇವುಗಳ ನಡುವೆ ಪ್ರೇಮ್ ವಿರುದ್ಧ ಪ್ರತಿಭಟನೆಗೆ ಸಹ ಫ್ಯಾನ್ಸ್ ಮುಂದಾಗಿದ್ದಾರೆ.

    ಚಿತ್ರಮಂದಿರದ ಮುಂದೆ ಪ್ರತಿಭಟನೆ

    ಚಿತ್ರಮಂದಿರದ ಮುಂದೆ ಪ್ರತಿಭಟನೆ

    ನಿರ್ದೇಶಕ ಪ್ರೇಮ್ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಪ್ರತಿಭಟನೆ ಮಾಡಲು ಶಿವಣ್ಣ ಫ್ಯಾನ್ಸ್ ನಿರ್ಧಾರ ಮಾಡಿದ್ದಾರೆ. ಜೊತೆಗೆ ಕೆಲ ಆರೋಗಳನ್ನು ಮಾಡಿದ್ದಾರೆ.

    'ದಿ ವಿಲನ್' ಬಾಯಲ್ಲಿ ಬರುವ ಹೈಲೈಟ್ ಡೈಲಾಗ್ ಗಳಿವು 'ದಿ ವಿಲನ್' ಬಾಯಲ್ಲಿ ಬರುವ ಹೈಲೈಟ್ ಡೈಲಾಗ್ ಗಳಿವು

    ಗೆಸ್ಟ್ ರೋಲ್ ತರ ಇದೆ

    ಗೆಸ್ಟ್ ರೋಲ್ ತರ ಇದೆ

    ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ಪಾತ್ರ ಗೆಸ್ಟ್ ರೋಲ್ ತರ ಇದೆ. ನೂರಕ್ಕೂ ಹೆಚ್ಚು ಸಿನಿಮಾ ಮಾಡಿರುವ ಒಬ್ಬ ನಟನಿಗೆ ಈ ರೀತಿಯ ಪಾತ್ರ ನೀಡಿರುವುದು ಸರಿ ಅಲ್ಲ. ಶಿವಣ್ಣನ ಒಳ್ಳೆಯ ತನವನ್ನು ಪ್ರೇಮ್ ಮಿಸ್ ಯೂಸ್ ಮಾಡಿದ್ದಾರೆ.'' - ಅಭಿಮಾನಿಗಳ ಆರೋಪ ನಂಬರ್ 1

    'ದಿ ವಿಲನ್' ನೋಡಿ ಶಿವಣ್ಣ ಪುತ್ರಿ ಫುಲ್ ಖುಷಿಯಾಗಿದ್ದಾರಂತೆ.! 'ದಿ ವಿಲನ್' ನೋಡಿ ಶಿವಣ್ಣ ಪುತ್ರಿ ಫುಲ್ ಖುಷಿಯಾಗಿದ್ದಾರಂತೆ.!

    ಪಾತ್ರದ ಅವಧಿ ಕಡಿಮೆ ಇದೆ

    ಪಾತ್ರದ ಅವಧಿ ಕಡಿಮೆ ಇದೆ

    ''ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟಿಸಿರುವ ಮಲ್ಟಿಸ್ಟಾರ್ ಸಿನಿಮಾ ಇದು. ಇಲ್ಲಿ ಇಬ್ಬರು ನಟರಿಗೆ ಸಮನಾದ ಪ್ರಾಮುಖ್ಯತೆ ನೀಡಬೇಕು. ಆದರೆ, ಚಿತ್ರದ ಶಿವರಾಜ್ ಕುಮಾರ್ ಅವರ ಪಾತ್ರದ ಅವಧಿ ಸುದೀಪ್ ಅವರ ಪಾತ್ರದ ಅವಧಿಗಿಂತ ಕಡಿಮೆ ಇದೆ.'' - ಅಭಿಮಾನಿಗಳ ಆರೋಪ ನಂಬರ್ 2

    ಜಾನಕಿ ಹಾಗೂ ತಾಯಿ ಇಬ್ಬರೂ ಸಿಗಲ್ಲ

    ಜಾನಕಿ ಹಾಗೂ ತಾಯಿ ಇಬ್ಬರೂ ಸಿಗಲ್ಲ

    ''ಚಿತ್ರದಲ್ಲಿ ರಾಮಣ್ಣ ಎಂಬ ಪಾತ್ರವನ್ನು ಶಿವಣ್ಣ ಮಾಡಿದ್ದಾರೆ. ಈ ಪಾತ್ರಕ್ಕೆ ಕ್ಲೈಮ್ಯಾಕ್ಸ್ ನಲ್ಲಿ ನಾಯಕಿ ಜಾನಕಿಯೂ ಸಿಗೋಲ್ಲ, ಜೊತೆಗೆ ತಾಯಿ ಪ್ರೀತಿ ಕೂಡ ಸಿಗಲ್ಲ. ಈ ರೀತಿ ಮಾಡುವುದು ಸರಿಯಲ್ಲ'' - ಅಭಿಮಾನಿಗಳ ಆರೋಪ ನಂಬರ್ 3.

    ಶಿವಣ್ಣನಿಗೆ ಹೊಡೆದಿರುವ ದೃಶ್ಯ

    ಶಿವಣ್ಣನಿಗೆ ಹೊಡೆದಿರುವ ದೃಶ್ಯ

    ''ಚಿತ್ರದ ಕೊನೆಯ ದೃಶ್ಯದಲ್ಲಿ ಶಿವರಾಜ್ ಕುಮಾರ್ ಅವರಿಗೆ ಸುದೀಪ್ ಹೊಡೆದಿದ್ದಾರೆ. ಇದು ಅನಗತ್ಯವಾಗಿದೆ. ಶಿವಣ್ಣನ ಮೇಲೆ ಸುದೀಪ್ ಪಾತ್ರದಿಂದ ಹೊಡೆಸಿದ್ದು ತಪ್ಪು. ಆ ದೃಶ್ಯವನ್ನು ಕಟ್ ಮಾಡಬೇಕು.'' - ಅಭಿಮಾನಿಗಳ ಆರೋಪ ನಂಬರ್ 4

    ಕಾಸ್ಟೂಮ್ ಸರಿ ಇಲ್ಲ

    ಕಾಸ್ಟೂಮ್ ಸರಿ ಇಲ್ಲ

    ''ಶಿವರಾಜ್ ಕುಮಾರ್ ಅವರ ಪಾತ್ರ ಲುಕ್ ಚೆನ್ನಾಗಿಲ್ಲ. ಸುದೀಪ್ ಅವರನ್ನು ತುಂಬಾನೆ ರಿಚ್ ಹಾಗೂ ಸ್ಟೈಲಿಷ್ ಆಗಿ ತೋರಿಸಿ ಇತ್ತ ಶಿವರಾಜ್ ಕುಮಾರ್ ಅವರನ್ನು ಲೋಕಲ್ ಆಗಿ ಬಿಂಬಿಸಿದ್ದಾರೆ.''

    ಗೆದ್ದರೇ ಹೀರೋ, ಸೋತರೇ ನಿರ್ದೇಶಕ

    ಗೆದ್ದರೇ ಹೀರೋ, ಸೋತರೇ ನಿರ್ದೇಶಕ

    'ಸಿನಿಮಾ ಗೆದ್ದರೇ ಹೀರೋ ಕಾರಣ, ಅದೇ ಸಿನಿಮಾ ಸೋತರೇ ನಿರ್ದೇಶಕ ಕಾರಣ' ಎಂದು ಆರೋಪ ಮಾಡುವುದು ತಪ್ಪು ಎನ್ನುವುದು ಇನ್ನೂ ಕೆಲವರ ಅಭಿಪ್ರಾಯವಾಗಿದೆ. ತಮ್ಮ ಕಥೆಗೆ ತಕ್ಕಂತೆ ಪ್ರೇಮ್ ಸಿನಿಮಾ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

    English summary
    Actor Shivaraj kumar fans unhappy with dirctor Prem.
    Friday, October 19, 2018, 13:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X