ಅಭಿಮಾನಿಗಳ ನಡುವಿನ ಸಮರಸಕ್ಕೆ ಪ್ರೇಮ್ ಮಾಡಿದ ಪ್ಲಾನ್

By Naveen

Recommended Video

TheVillain : ದಿ ವಿಲನ್ ಎರಡನೇ ಸಾಂಗ್ ಯಾವತ್ತು ರಿಲೀಸ್ ಆಗುತ್ತೆ ಗೊತ್ತಾ..? | Filmibeat Kannada

'ದಿ ವಿಲನ್' ಸದ್ಯ ಗಾಂಧಿನಗರದಲ್ಲಿ ಹಾಟ್ ಟಾಪಿಕ್ ಆಗಿರುವ ಸಿನಿಮಾ. ಆರಂಭದಿಂದಲೂ ಒಂದಲ್ಲ ಒಂದು ವಿಚಾರವಾಗಿ ಸುದ್ದಿ ಮಾಡುತ್ತಿರುವ 'ದಿ ವಿಲನ್' ಆ ನಂತರ ಬೇರೆಯದ್ದೆ ವಿಚಾರಕ್ಕೆ ಸುದ್ದಿ ಮಾಡಿತು. ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ ಸಾಕಷ್ಟು ವಿವಾದ ಸೃಷ್ಟಿ ಆಗಿತ್ತು. ಮೊದಲ ಹಾಡಿನ ಯಶಸ್ವಿನ ಬಳಿಕ ಈಗ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಸಿದ್ದತೆ ಪ್ರೇಮ್ ತಯಾರಿ ಮಾಡಿಕೊಂಡಿದ್ದಾರೆ.

ಎರಡನೇ ಹಾಡು ಬಿಡುಗಡೆ ಆಗುವಾಗ ಯಾವುದೇ ರೀತಿಯ ವಿವಾದ ಆಗಬಾರದು ಎಂದು ನಿರ್ದೇಶಕ ಪ್ರೇಮ್ ಆರಂಭದಲ್ಲೇ ಎಚ್ಚರ ವಹಿಸಿದಂತಿದೆ. ಯಾಕೆಂದರೆ, ಹಾಡನ್ನು ಬಿಡುಗಡೆ ಮಾಡುತ್ತಿರುವುದು ಶಿವರಾಜ್ ಕುಮಾರ್ ಅಭಿಮಾನಿಗಳು.

shiva rajkumar fans will release The Villain movie 2nd song

ಕಿಚ್ಚ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿಮಾಗಳು ಸದಾ ಬಾಂದವ್ಯದಿಂದ ಇರಲಿ ಎನ್ನುವ ಉದ್ದೇಶದಿಂದ ಪ್ರೇಮ್ ಈ ರೀತಿಯ ಆಲೋಚನೆ ಮಾಡಿದ್ದಾರೆ. 'ದಿ ವಿಲನ್' ಚಿತ್ರದ 2ನೇ ಸಾಂಗ್ ಇದೇ ಶನಿವಾರ ಬೆಳಿಗ್ಗೆ 10 ಗಂಟೆಗೆ ಕಂಠೀರವ ಸ್ಟುಡಿಯೋದಲ್ಲಿರುವ ಡಾ ರಾಜ್ ಕುಮಾರ್ ಪುಣ್ಯಭೂಮಿಯಲ್ಲಿ ಬಿಡುಗಡೆಯಾಗಲಿದೆ.

'ದಿ ವಿಲನ್' ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದು, ಚಿತ್ರದ ಎಲ್ಲಾ ಹಾಡುಗಳನ್ನು ನಿರ್ದೇಶಕ ಪ್ರೇಮ್ ಅವರೇ ಬರೆದಿದ್ದಾರೆ. ಎರಡನೇ ಹಾಡನ್ನು ಕೈಲಾಶ್ ಕೇರ್ ಹಾಡಿದ್ದಾರೆ. ಅಂದಹಾಗೆ, ಸುದೀಪ್, ಶಿವರಾಜ್ ಕುಮಾರ್, ಆಮಿ ಜಾಕ್ಸನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ ನಲ್ಲಿ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡದ್ದಾಗಿದೆ.

More from Filmibeat

English summary
Kannada actor Shivarajkumar fans will release The Villain movie 2nd song. 'The Villain' kannada movie 1st song will be releasing on July 21th. The movie is directed by Prem.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X