For Quick Alerts
  ALLOW NOTIFICATIONS  
  For Daily Alerts

  ಯುವ ನಟನಿಗೆ ಮಚ್ಚು ಹಿಡಿಯೋ ಸ್ಟೈಲ್ ಹೇಳಿಕೊಟ್ಟ ಶಿವಣ್ಣ

  By ಫಿಲ್ಮಿಬೀಟ್ ಡೆಸ್ಕ್
  |

  'ಮಚ್ಚಿಗೆ ಹಿಡಿಕೆ ಇರೋದೆ ಶಿವರಾಜ್ ಕುಮಾರ್ ಹಿಡಿಯೋಕೆ' ಎಂಬ ಡೈಲಾಗ್ ಇದೆ. ಶಿವಣ್ಣ ಮಚ್ಚು ಹಿಡಿಯುವ ಸ್ಟೈಲಿಗೆ ಫಿದಾ ಆದವರೆಷ್ಟೊ.

  ಹಿಂಗೆ ಲಾಂಗ್ ಹಿಡ್ಕೊಂಡ್ರೆ ಒಳ್ಳೆ ಗ್ರಿಪ್ ಇರುತ್ತೆ |ShreyasManju |Rana|ShivaRajkumar | Filmibeat Kannada

  ಶಿವಣ್ಣ ಲಾಂಗ್ ಹಿಡಿದರೆ ಬೀಳುವ ಶಿಳ್ಳೆಗಳಿಗೆ ಚಿತ್ರಮಂದಿರದ ಥಾರಸಿಯೇ ಕಿತ್ತು ಹೋಗುತ್ತಿದೆ. ಶಿವಣ್ಣ ಲಾಂಗ್ ಹಿಡಿದರೆ ಅಷ್ಟು ಕ್ರೇಜ್ ಅಭಿಮಾನಿಗಳಿಗೆ. ಇದೀಗ ಶಿವಣ್ಣ ಲಾಂಗ್ ಹಿಡಿಯುವ ಸ್ಟೈಲ್ ಅನ್ನು ಯುವ ನಟರೊಬ್ಬರಿಗೆ ಹೇಳಿಕೊಟ್ಟಿದ್ದಾರೆ.

  ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಟಿಸುತ್ತಿರುವ 'ರಾಣಾ' ಸಿನಿಮಾದ ಚಿತ್ರತಂಡವು ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದೆ. ರೌಡಿಸಂ ಕತೆಯ ಎಳೆಯುಳ್ಳ ಸಿನಿಮಾ ಆದ್ದರಿಂದ ಶಿವರಾಜ್ ಕುಮಾರ್ ನಾಯಕ ನಟ ಶ್ರೇಯಸ್‌ಗೆ ಅಭಿನಯದ ಕೆಲವು ಟಿಪ್ಸ್‌ಗಳನ್ನು ನೀಡಿದ್ದಾರೆ. ಜೊತೆಗೆ ಲಾಂಗ್ ಹಿಡಿಯುವುದು ಹೇಗೆ ಎಂಬುದನ್ನು ಸಹ ಹೇಳಿಕೊಟ್ಟಿದ್ದಾರೆ.

  ಶಿವರಾಜ್ ಕುಮಾರ್ ಹಾಗೂ ಶ್ರೇಯಸ್ ಇಬ್ಬರೂ ಲಾಂಗ್ ಹಿಡಿದುಕೊಂಡು ಜೊತೆಗೆ ನಿಂತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

  'ಅಧ್ಯಕ್ಷ', 'ಪೊಗರು' ಇನ್ನೂ ಕೆಲವು ಸಿನಿಮಾಗಳನ್ನು ನಿರ್ದೇಶಿಸಿರುವ ನಂದ ಕಿಶೋರ್ 'ರಾಣಾ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ರೇಷ್ಮಾ ನಾಣಯ್ಯ ನಾಯಕಿಯಾಗಿದ್ದು ಚಂದನ್ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ. ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

  ಇನ್ನು ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಸೆಪ್ಟೆಂಬರ್ 10ಕ್ಕೆ ತೆರೆಗೆ ಬರುವುದು ಖಾತ್ರಿಯಾಗಿದೆ. ಇದರ ಜೊತೆಗೆ ಅವರ ನಟನೆಯ 'ಭೈರವ' ಸಿನಿಮಾ ಸಹ ಬಿಡುಗಡೆಗೆ ತಯಾರಾಗಿದೆ. ಈ ಸಿನಿಮಾವನ್ನು ತಮಿಳಿನ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದು, ಡಾಲಿ ಧನಂಜಯ್, ಪೃಥ್ವಿ ಅಂಬರ್ ಅವರುಗಳು ಸಿನಿಮಾದಲ್ಲಿದ್ದಾರೆ. 'ನೀ ಸಿಗೊವರೆಗೆ' ಹೆಸರಿನ ಹೊಸ ಸಿನಿಮಾಕ್ಕೆ ಸಹಿ ಹಾಕಿರುವ ಶಿವಣ್ಣ, ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ಹಾಗೂ ಹೊಸ ನಿರ್ದೇಶಕರೊಬ್ಬರ 'ಸತ್ಯಮಂಗಲ' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Actor Shiva Rajkumar gave some acting tips to new actor Shreyas. He is acting in Rana movie. Shreyas is son of producer K Manju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X