For Quick Alerts
  ALLOW NOTIFICATIONS  
  For Daily Alerts

  ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಶಿವಣ್ಣ ದಂಪತಿ

  |

  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪತ್ನಿ ಗೀತಾ ಶಿವರಾಜ್ ಕುಮಾರ್ ಮತ್ತು ಮಧು ಬಂಗಾರಪ್ಪ ಇಂದು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

  ಎಚ್.ಡಿ.ದೇವೇಗೌಡ ಅವರಿಗೆ ಕಾಲು ನೋವು ಕಾಣಿಸಿಕೊಂಡಿತ್ತು. ಜಾರಿ ಬಿದ್ದು ಅವರು ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ದೇವೇಗೌಡರ ಆರೋಗ್ಯ ವಿಚಾರಿಸಲು ಶಿವಣ್ಣ ದಂಪತಿ ಮತ್ತು ಮಧು ಬಂಗಾರಪ್ಪ ಇಂದು ಪದ್ಮನಾಭನಗರ ನಿವಾಸಕ್ಕೆ ಆಗಮಿಸಿದ್ದರು. ಕೆಲಕಾಲ ದೊಡ್ಡ ಗೌಡರ ಜೊತೆ ಮಾತುಕತೆ ನಡೆಸಿದರು.

  ಮೊಮ್ಮಗನ 'ಸೀತಾರಾಮ ಕಲ್ಯಾಣ' ಮೆಚ್ಚಿದ ತಾತ ಎಚ್.ಡಿ.ದೇವೇಗೌಡಮೊಮ್ಮಗನ 'ಸೀತಾರಾಮ ಕಲ್ಯಾಣ' ಮೆಚ್ಚಿದ ತಾತ ಎಚ್.ಡಿ.ದೇವೇಗೌಡ

  ನಿಮಗೆಲ್ಲ ಗೊತ್ತಿರುವ ಹಾಗೆ ಮಧು ಬಂಗಾರಪ್ಪ ಜೆಡಿಎಸ್ ಪಕ್ಷದಿಂದ ಗುರುತಿಸಿಕೊಂಡಿರುವ ರಾಜಕಾರಣಿ. ಇನ್ನೂ ಗೀತಾ ಶಿವರಾಜ್ ಕುಮಾರ್ ಕೂಡ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದರು.

  ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಗೀತಾ ಶಿವರಾಜ್ ಕುಮಾರ್ ರಾಜಕೀಯದಿಂದ ದೂರ ಉಳಿದಿದ್ದಾರೆ. ಆದರೂ ದೇವೇಗೌಡರ ಮೇಲೆ ಶಿವಣ್ಣ ಕುಟುಂಬಕ್ಕೆ ಅಪಾರ ಗೌರವ ಇದೆ. ಅದಕ್ಕೆ ಇಂದಿನ ಭೇಟಿ ಸಾಕ್ಷಿ.

  ಎಚ್.ಡಿ.ದೇವೇಗೌಡ ಉಗ್ರಾವತಾರ ತಾಳಿದ ಅನೇಕರಿಗೆ ತಿಳಿಯದ ರೋಚಕ ಘಟನೆಯಿದು.!ಎಚ್.ಡಿ.ದೇವೇಗೌಡ ಉಗ್ರಾವತಾರ ತಾಳಿದ ಅನೇಕರಿಗೆ ತಿಳಿಯದ ರೋಚಕ ಘಟನೆಯಿದು.!

  ಅಂದಹಾಗೆ ಕಾಲು ನೋವಿನಿಂದ ಸುಧಾರಿಸಿಕೊಂಡಿರುವ ಎಚ್.ಡಿ.ದೇವೇಗೌಡ ಇಂದು ಸಂಜೆ ವೇಳೆಗೆ ದೆಹಲಿಗೆ ಪಯಣ ಬೆಳೆಸುವ ಸಾಧ್ಯತೆ ಇದೆ.

  English summary
  Shiva Rajkumar, Geetha and Madhu Bangarappa meets HD Devegowda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X