»   » ವಿಡಿಯೋ: 'ಹುಲಿ ಡ್ಯಾನ್ಸ್' ಮಾಡಿದ ಸೆಂಚುರಿ ಸ್ಟಾರ್ ಶಿವಣ್ಣ

ವಿಡಿಯೋ: 'ಹುಲಿ ಡ್ಯಾನ್ಸ್' ಮಾಡಿದ ಸೆಂಚುರಿ ಸ್ಟಾರ್ ಶಿವಣ್ಣ

Posted By:
Subscribe to Filmibeat Kannada

'ಹುಲಿ ಡ್ಯಾನ್ಸ್'......ಈ ಬೀಟ್ಸ್ ಕೇಳಿದ್ರೆ ಎಂತವರಿಗೂ ಎದ್ದು ಕುಣಿಬೇಕು ಅನ್ಸುತ್ತೆ. ಅಂಥದ್ರಲ್ಲಿ ಡ್ಯಾನ್ಸ್ ಕಿಂಗ್ ಶಿವರಾಜ್ ಕುಮಾರ್ ಅವರ ಮುಂದೆ ಈ ಹಾಡು ಹಾಕಿದ್ರೆ, ಸುಮ್ಮನೆ ಇರ್ತಾರಾ.! ಹೌದು, 'ಹುಲಿ ಡ್ಯಾನ್ಸ್' ಸಾಂಗ್ ಗೆ ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

'ಕದ್ರಿ ಫ್ರೆಂಡ್ಸ್' ಆಯೋಜಿಸಿದ್ದ ಸ್ಟಾರ್ ನೈಟ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ವೇದಿಕೆಯಲ್ಲಿ ಹುಲಿ ಡ್ಯಾನ್ಸ್ ಹಾಡಿಗೆ ಜಬರ್ ದಸ್ತ್ ಹೆಜ್ಜೆ ಹಾಕಿ ಅಭಿಮಾನಿಗಳನ್ನ ರಂಜಿಸಿದರು.

 Shiva rajkumar huli dance in Kadri

ಮಂಗಳೂರಿನ ಕದ್ರಿಯಲ್ಲಿ, 'ಕದ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್' ಅಯೋಜಿಸಿದ್ದ ಕಾರ್ಯಕ್ರಮಕ್ಕೆ ಶಿವಣ್ಣ ಅತಿಥಿಯಾಗಿ ಆಗಮಿಸಿದ್ದರು. ಇದಕ್ಕು ಮುಂಚೆ ನಗರದ ಕದ್ರಿ ದೇವಾಲಯಕ್ಕೆ ಭೇಟಿ ನೀಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕದ್ರಿ ಮಂಜುನಾಥೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಕದ್ರಿ ಮಂಜುನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್

ಶಿವಣ್ಣನ ಹುಲಿ ಡ್ಯಾನ್ಸ್ ಇಲ್ಲಿದೆ ನೋಡಿ

English summary
watch video: Kannada Actor, Hatrick Hero Shiva rajkumar's huli dance in Kadri, Manglore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada