For Quick Alerts
  ALLOW NOTIFICATIONS  
  For Daily Alerts

  ರಜಿನಿಕಾಂತ್ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನಲ್ಲಿ ವಿಶೇಷ ಬೈಕ್ ರೈಡ್; ಶಿವಣ್ಣನಿಗೆ ಆಹ್ವಾನ

  |

  ಸೂಪರ್ ಸ್ಟಾರ್ ರಜಿನಿಕಾಂತ್ ಇದೇ ಡಿಸೆಂಬರ್ 12ರಂದು ತಮ್ಮ 72ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿರುವ ಸ್ಟೈಲ್ ಕಿಂಗ್ ರಜಿನಿಕಾಂತ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಪ್ರತೀ ವರ್ಷದಂತೆ ಈ ವರ್ಷವೂ ಸಹ ಬಹಳ ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸಜ್ಜಾಗಿದ್ದಾರೆ.

  ಮೂಲತಃ ಕರ್ನಾಟಕದವರಾದ ರಜಿನಿಕಾಂತ್ ಅವರಿಗೆ ಕರ್ನಾಟಕದಲ್ಲೂ ಸಹ ಅಪಾರವಾದ ಅಭಿಮಾನಿ ಬಳಗಗಳಿದ್ದು, ರಾಜ್ಯದ ವಿವಿಧೆಡೆ ರಜಿನಿ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಬೆಂಗಳೂರು ರಜಿನಿಕಾಂತ್ ಅಭಿಮಾನಿಗಳು ರಜಿನಿಕಾಂತ್ ಹುಟ್ಟುಹಬ್ಬದ ಹಿಂದಿನ ದಿನ ಅಂದರೆ ಡಿಸೆಂಬರ್ 11ರ ಭಾನುವಾರದಂದು ಬೆಳಗ್ಗೆ 7 ಗಂಟೆಗೆ ಒಂದೊಳ್ಳೆ ಉದ್ದೇಶದಿಂದ ಬೈಕ್ ರೈಡ್ ಅನ್ನು ಹಮ್ಮಿಕೊಂಡಿದ್ದಾರೆ.

  ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನದಂದು ಬೈಕ್ ರೈಡ್ ಅನ್ನು ಕರ್ನಾಟಕ ರಾಜ್ಯ ರಜಿನಿಕಾಂತ್ ಫ್ಯಾನ್ಸ್ ಅಸೋಸಿಯೇಶನ್ ತಂಡ ನಾರಾಯಣ ಹೃದಯಾಲಯ ಹೆಲ್ತ್ ಸಿಟಿ ಹಾಗೂ ರೋಟರಿ ಬೆಂಗಳೂರು ಸೌತ್ ಸಹಯೋಗದೊಂದಿಗೆ ಆಯೋಜಿಸಿದೆ. ಈ ಸದುದ್ದೇಶದೊಂದಿಗೆ ಜರುಗಲಿರುವ ಬೈಕ್ ರೈಡ್‌ನಲ್ಲಿ ಭಾಗವಹಿಸಲು ಇಚ್ಛಿಸುವ ಎಲ್ಲರಿಗೂ ಸ್ವಾಗತವನ್ನು ಕೋರಲಾಗಿದೆ.

  ಇನ್ನು ಕರ್ನಾಟಕ ರಾಜ್ಯ ರಜಿನಿಕಾಂತ್ ಫ್ಯಾನ್ಸ್ ಅಸೋಸಿಯೇಶನ್ ತಂಡದ ಸದಸ್ಯರು ಕನ್ನಡ ಚಲನಚಿತ್ರರಂಗದ ಖ್ಯಾತ ನಟ ಶಿವ ರಾಜ್‌ಕುಮಾರ್ ಅವರನ್ನು ಈ ಬೈಕ್ ರೈಡ್‌ಗೆ ಆಹ್ವಾನಿಸಿದ್ದಾರೆ ಹಾಗೂ ಶಿವಣ್ಣ ಅವರಿಗೆ ಆಹ್ವಾನ ಪತ್ರಿಕೆ ನೀಡಿದ ಚಿತ್ರಗಳನ್ನೂ ಸಹ ಸಾಮಾಜಿಕ ಜಾಲತಾಣದದಲ್ಲಿ ಹಂಚಿಕೊಂಡಿದ್ದಾರೆ.

  ಈ ಬೈಕ್ ರೈಡ್‌ನಲ್ಲಿ ಭಾಗವಹಿಸಲು ಇಚ್ಛಿಸುವವರು ಬೆಂಗಳೂರಿನ ಫ್ರೀಡಮ್ ಪಾರ್ಕ್‌ ಮುಂಭಾಗ ಹಾಜರಿರಬೇಕು ಹಾಗೂ ನಂತರ ವಿಧಾನಸೌಧದ ಮುಂಭಾಗ ರೈಡ್ ಆರಂಭಗೊಳ್ಳಲಿದ್ದು ಎಂ ಜಿ ರಸ್ತೆಯ ಮುಖಾಂತರ ಮತ್ತೆ ಫ್ರೀಡಂ ಪಾರ್ಕ್ ತಲುಪಿ ಅಂತ್ಯಗೊಳ್ಳಲಿದೆ.

  English summary
  Shiva Rajkumar invited for Bike ride on the occasion of Rajinikanth's 72nd birthday. Read on
  Tuesday, December 6, 2022, 16:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X