ರಜನಿ, ಕಮಲ್ ಗೆ ಶಿವಣ್ಣನ ಮಗಳ ಮದುವೆಯ ಕರೆಯೋಲೆ
'ರಾಜ' ವಂಶದಲ್ಲಿ ಸಂಭ್ರಮವೋ ಸಂಭ್ರಮ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕುಟುಂಬದಲ್ಲಿ ಸಡಗರವೋ ಸಡಗರ. ಅದಕ್ಕೆಲ್ಲಾ ಕಾರಣ ಡಾ.ರಾಜ್ ಮುದ್ದಿನ ಮೊಮ್ಮಗಳ ವಿವಾಹ.
ಹೌದು, ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರ ಮೊಮ್ಮಗಳು, ನಾಟ್ಯ ಸಾರ್ವಭೌಮ ಶಿವರಾಜ್ ಕುಮಾರ್ ಅವರ ಮಗಳು ನಿರುಪಮ ಅವರ ಮದುವೆ ನಿಶ್ಚಯವಾಗಿದೆ.
ಆಗಸ್ಟ್ 30-31 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಡಾ.ನಿರುಪಮ ಮತ್ತು ಡಾ.ದಿಲೀಪ್ ಅವರ ವಿವಾಹ ಮಹೋತ್ಸವ ನಡೆಯಲಿದೆ. [ಶಿವಣ್ಣ ಪುತ್ರಿ ನಿರುಪಮಾ ನಿಶ್ಚಿತಾರ್ಥ ಚಿತ್ರ ಸೌರಭ]
ಮಗಳ ಮದುವೆಗೆ ಇನ್ನು ಒಂದು ತಿಂಗಳು ಇರುವಾಗಲೇ ಸಕಲ ತಯಾರಿಯಲ್ಲಿ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ತೊಡಗಿಕೊಂಡಿದ್ದಾರೆ.
ಸ್ಯಾಂಡಲ್ ವುಡ್ ನಿಂದ ಹಿಡಿದು ಕಾಲಿವುಡ್, ಟಾಲಿವುಡ್, ಬಾಲಿವುಡ್ ಮತ್ತು ಮಾಲಿವುಡ್ ನ ಖ್ಯಾತ ಸ್ಟಾರ್ ಗಳನ್ನೆಲ್ಲಾ ಮಗಳ ಮದುವೆಗೆ ಆಹ್ವಾನಿಸುತ್ತಿದ್ದಾರೆ ಶಿವರಾಜ್ ಕುಮಾರ್. ಮುಂದೆ ಓದಿ....

ಸೂಪರ್ ಸ್ಟಾರ್ ರಜನಿಕಾಂತ್ ಗೆ ಆಮಂತ್ರಣ
ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಇತ್ತೀಚೆಗಷ್ಟೆ ಚೆನ್ನೈನಲ್ಲಿರುವ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮನೆಗೆ ಭೇಟಿ ನೀಡಿ, ಮಗಳ ಮದುವೆಗೆ ಆಹ್ವಾನಿಸಿದರು. ಶಿವರಾಜ್ ಕುಮಾರ್ ಅವರ ಮಗಳ ಮದುವೆಯ ಮಮತೆಯ ಕರೆಯೋಲೆ ನೋಡಿ ಸಂತಸಗೊಂಡ ರಜನಿಕಾಂತ್ ಮದುವೆಗೆ ಹಾಜರಾಗುವ ಬಗ್ಗೆ ಖಚಿತಪಡಿಸಿದ್ದಾರೆ. [ಹೊಸ ಬಾಳಿನ ಹೊಸಿಲಲಿ ಶಿವಣ್ಣ ಪುತ್ರಿ ನಿರುಪಮಾ]

ಕಮಲ್ ಹಾಸನ್ ಗೆ ಆಹ್ವಾನ
ಸಕಲಕಲಾವಲ್ಲಭ ಕಮಲ್ ಹಾಸನ್ ನಿವಾಸಕ್ಕೂ ಭೇಟಿ ನೀಡಿದ ಶಿವಣ್ಣ ದಂಪತಿ ಲಗ್ನ ಪತ್ರಿಕೆ ನೀಡಿದ್ದಾರೆ. ಕಮಲ್ ಹಾಸನ್ ಕೂಡ ಶಿವರಾಜ್ ಕುಮಾರ್ ಅವರ ಮಗಳಿಗೆ ಶುಭಾಶಯಗಳನ್ನ ಕೋರಿದ್ದಾರೆ. [ಆಗಸ್ಟ್ 1ರಿಂದ ಸ್ಯಾಂಡಲ್ ವುಡ್ ಫುಲ್ ಬಿಜಿ ಮಗಾ]

ಧನುಷ್ ಕುಟುಂಬಕ್ಕೆ ಕರೆಯೋಲೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ವಜ್ರಕಾಯ' ಚಿತ್ರದ ಹಾಡೊಂದಕ್ಕೆ ಧನುಷ್ ದನಿಯಾಗಿದ್ದರು. ಹಾಗ್ನೋಡಿದ್ರೆ, ಶಿವಣ್ಣ ಮತ್ತು ಧನುಷ್ ಮೊದಲಿನಿಂದಲೂ ಸ್ನೇಹಿತರು. ಮಗಳ ಮದುವೆಗೆ ಶಿವಣ್ಣ, ಧನುಷ್ ಕುಟುಂಬಕ್ಕೆ ಆಮಂತ್ರಣ ನೀಡಿದ್ದಾರೆ.

ಎಂ.ಕೆ.ಸ್ಟಾಲಿನ್ ಗೂ ಇನ್ವಿಟೇಶನ್
ತಮಿಳುನಾಡಿನ ಖ್ಯಾತ ರಾಜಕಾರಣಿ ಎಂ.ಕೆ.ಸ್ಟಾಲಿನ್ ಅವರಿಗೂ ಶಿವರಾಜ್ ಕುಮಾರ್ ಆಹ್ವಾನ ನೀಡಿದ್ದಾರೆ.

ಪ್ರಭು ಕುಟುಂಬಕ್ಕೆ ಆಮಂತ್ರಣ
ಕಾಲಿವುಡ್ ನ ಖ್ಯಾತ ನಟ ಪ್ರಭು ಮತ್ತು ಕುಟುಂಬಕ್ಕೂ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಆಮಂತ್ರಣ ನೀಡಿದ್ದಾರೆ.

ತಮಿಳು ನಟ ನಾಸ್ಸರ್
ಕಾಲಿವುಡ್ ನಟ ನಾಸ್ಸರ್ ಮತ್ತು ಅವರ ಪುತ್ರನನ್ನ ಶಿವರಾಜ್ ಕುಮಾರ್ ಭೇಟಿ ಮಾಡಿ ಮಗಳ ಮದುವೆಗೆ ಕರೆಯೋಲೆ ನೀಡಿದರು.

ಬಹುಭಾಷಾ ನಟ ಪ್ರಕಾಶ್ ರಾಜ್
ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಗುರುತಿಸಿಕೊಂಡಿರುವ ಪ್ರಕಾಶ್ ರಾಜ್ ಅವರನ್ನ ಖುದ್ದು ಭೇಟಿ ಮಾಡಿ ಶಿವಣ್ಣ, ತಮ್ಮ ಮಗಳ ಮದುವೆಗೆ ಆಹ್ವಾನ ನೀಡಿದರು.

ಶಿವಕಾರ್ತಿಕೇಯನ್
'ವಜ್ರಕಾಯ' ಚಿತ್ರದಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಿದ್ದ ಶಿವಕಾರ್ತಿಕೇಯನ್ ಕೂಡ ನಿರುಪಮ ವಿವಾಹಕ್ಕೆ ಆಗಮಿಸುತ್ತಿದ್ದಾರೆ.

ಅಧರ್ವ
ಕನ್ನಡ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮೊಮ್ಮಗ, ನಟ ಮುರುಳಿ ಪುತ್ರ ಅಧರ್ವಗೂ ಶಿವಣ್ಣ ಇನ್ವಿಟೇಶನ್ ನೀಡಿದ್ದಾರೆ.

ಅಮಿತಾಬ್ ಬಚ್ಚನ್, ಚಿರಂಜೀವಿ?
ಸದ್ಯದಲ್ಲೇ ಮುಂಬೈ ಮತ್ತು ಹೈದರಾಬಾದ್ ಗೆ ಹಾರಲಿರುವ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಅಮಿತಾಬ್ ಬಚ್ಚನ್ ಮತ್ತು ಚಿರಂಜೀವಿ ಅವರಿಗೂ ಆಮಂತ್ರಣ ನೀಡಲಿದ್ದಾರೆ.


Click it and Unblock the Notifications











