»   » 'ದಿ ವಿಲನ್' ಗ್ಯಾಂಗ್ ಗೆ ಎಂಟ್ರಿ ಕೊಟ್ಟ ಮಾಸ್ ಕಿಂಗ್ ಶಿವಣ್ಣ..!

'ದಿ ವಿಲನ್' ಗ್ಯಾಂಗ್ ಗೆ ಎಂಟ್ರಿ ಕೊಟ್ಟ ಮಾಸ್ ಕಿಂಗ್ ಶಿವಣ್ಣ..!

Posted By:
Subscribe to Filmibeat Kannada

'ದಿ ವಿಲನ್' ಸಿನಿಮಾ ಸಾಕಷ್ಟು ದಿನಗಳಿಂದ ಟಾಕ್ ಆಫ್ ದಿ ಟೌನ್ ಆಗಿದೆ. ಇಷ್ಟು ದಿನ ನಟ ಸುದೀಪ್ ಅವರ ಭಾಗದ ಚಿತ್ರೀಕರಣ ನಡೆದಿದ್ದು, ಈಗ ಶಿವಣ್ಣ ಭಾಗದ ಶೂಟಿಂಗ್ ಶುರುವಾಗಿದೆ.

ಚಿತ್ರಗಳು: ಲಂಡನ್ ನಲ್ಲಿ 'ದಿ ವಿಲನ್' ಕಾರುಬಾರು

ನಟ ಶಿವರಾಜ್ ಕುಮಾರ್ ಈಗಾಗಲೇ ಲಂಡನ್ ಗೆ ತೆರಳಿದ್ದಾರೆ. ಸದ್ಯ ಲಂಡನ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಚಿತ್ರೀಕರಣದ ವೇಳೆ ಶಿವಣ್ಣ ಮತ್ತು ನಟಿ ರಕ್ಷಿತಾ ಪ್ರೇಮ್ ಫೋಟೋ ತೆಗೆದುಕೊಂಡಿದ್ದಾರೆ.

Shiva Rajkumar Joined 'The Villain' Team

ಈ ಫೋಟೋದಲ್ಲಿ ಶಿವಣ್ಣ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿಯೂ ಶಿವಣ್ಣ ಅದೇ ಲುಕ್ ನಲ್ಲಿ ಇರುತ್ತಾರಾ ಎಂಬ ಕುತೂಹಲವನ್ನು ಹುಟ್ಟಿಸಿದೆ.

ಲಂಡನ್ ನಲ್ಲಿ ಮುಖಾಮುಖಿ ಆಗಲಿರುವ ಶಿವಣ್ಣ - ಸುದೀಪ್

'ಜೋಗಿ', 'ಜೋಗಯ್ಯ' ಚಿತ್ರಗಳ ರೀತಿ ಇಲ್ಲಿಯೂ ಶಿವಣ್ಣ ಉದ್ದ ಕೂದಲು ಬಿಟ್ಟಿದ್ದಾರೆ. ಶಿವಣ್ಣ ಅವರ ಪಾತ್ರ ಮತ್ತು ಲುಕ್ ಮೇಲೆ ನಿರೀಕ್ಷೆ ದೊಡ್ಡದಿದೆ.

English summary
Kannaa Actor Shiva Rajkumar Joined 'The Villain' Movie Team.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada