For Quick Alerts
  ALLOW NOTIFICATIONS  
  For Daily Alerts

  'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನ ನೋಡಿ ಮೆಚ್ಚಿದ ಶಿವರಾಜ್ ಕುಮಾರ್

  |
  Avane Srimannarayana : ವೀಕ್ಷಿಸಿದ ಶಿವಣ್ಣ ಹೇಳಿದ್ದೇನು | ASN | SHIVANNA | RAKSHIT | FILMIBEAT KANNADA

  ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಅಭಿನಯದ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ಇಂದು ರಾಜ್ಯಾದ್ಯಂತ ತೆರೆಗೆ ಬಂದಿದೆ.

  ಸಚಿನ್ ರವಿ ನಿರ್ದೇಶನದ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಎಚ್.ಕೆ.ಪ್ರಕಾಶ್ ನಿರ್ಮಾಣದ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಪ್ರೀಮಿಯರ್ ಶೋ ನಿನ್ನೆ ರಾತ್ರಿ ಬೆಂಗಳೂರಿನ ಲಾಲ್ ಬಾಗ್ ಬಳಿ ಇರುವ ಊರ್ವಶಿ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು.

  'ಅವನೇ ಶ್ರೀಮನ್ನಾರಾಯಣ' ಚಿತ್ರದ ಪ್ರೀಮಿಯರ್ ಶೋನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜ್ ಸ್ಟಾರ್ ರವಿಚಂದ್ರನ್, ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ರಿಷಬ್ ಶೆಟ್ಟಿ, ವಿನಯ್ ರಾಜ್ ಕುಮಾರ್, ಆಶಿಕಾ ರಂಗನಾಥ್, ತರುಣ್ ಸುಧೀರ್, ಶರಣ್, ಶ್ರೀಲೀಲಾ, ಅಕುಲ್ ಬಾಲಾಜಿ ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ಗಣ್ಯರು ಪಾಲ್ಗೊಂಡಿದ್ದರು.


  'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನು ವೀಕ್ಷಿಸಿದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೊಟ್ಟ ವಿಮರ್ಶೆ ಹೀಗಿದೆ -

  'ಶ್ರೀಮನ್ನಾರಾಯಣ' ಹಿಟ್ ಆಗಲೇಬೇಕು: ಸಕ್ಸಸ್ ಆದ್ರೆ ಏನೆಲ್ಲಾ ಆಗಬಹುದು?'ಶ್ರೀಮನ್ನಾರಾಯಣ' ಹಿಟ್ ಆಗಲೇಬೇಕು: ಸಕ್ಸಸ್ ಆದ್ರೆ ಏನೆಲ್ಲಾ ಆಗಬಹುದು?

  ''ಅವನೇ ಶ್ರೀಮನ್ನಾರಾಯಣ' ಚಿತ್ರವನ್ನ ಚೆನ್ನಾಗಿ ಮಾಡಿದ್ದಾರೆ. ಮೇಕಿಂಗ್ ತುಂಬಾ ಚೆನ್ನಾಗಿದೆ. ಸೆಟ್ ವರ್ಕ್ ನ್ಯಾಚುರಲ್ ಆಗಿದೆ. ಈ ಸಿನಿಮಾ ಒಂದು ಡಿಫರೆಂಟ್ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ರಕ್ಷಿತ್ ಶೆಟ್ಟಿ ಹ್ಯಾಸ್ ಡನ್ ಎ ಗುಡ್ ಜಾಬ್. ತುಂಬಾ ಒಳ್ಳೆಯ ಅಟೆಂಪ್ಟ್ ಇದು. ಅವರು ಮಾಡಿರುವ ವಿಭಿನ್ನ ಪ್ರಯತ್ನಕ್ಕೆ ನಾವು ಬೆಲೆ ಕೊಡಬೇಕು. ಎಲ್ಲರೂ ಈ ಚಿತ್ರವನ್ನ ನೋಡಿ'' ಎಂದರು ಶಿವಣ್ಣ.

  ಚರಣ್ ರಾಜ್ ಮತ್ತು ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ 'ಅವನೇ ಶ್ರೀಮನ್ನಾರಾಯಣ' ಫ್ಯಾಂಟಸಿ ಅಡ್ವೆಂಚರ್ ಕಾಮಿಡಿ ಚಿತ್ರ. ಇದರಲ್ಲಿ ಶ್ರೀಮನ್ನಾರಾಯಣನಾಗಿ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದರೆ, ಲಕ್ಷ್ಮಿಯಾಗಿ ಶಾನ್ವಿ ಶ್ರೀವಾಸ್ತವ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

  English summary
  Kannada Actor Shiva Rajkumar lauds Rakshit Shetty starrer Avane Sriman Narayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X