'ಪಾಪ್ ಕಾರ್ನ್ ಮಂಕಿ ಟೈಗರ್' ಟ್ರೆಂಡ್ ಶಿವಣ್ಣನಿಂದ ಶುರು
Recommended Video

'ಟಗರು' ಸಿನಿಮಾದ ನಂತರ ದುನಿಯಾ ಸೂರಿ ಹಾಗೂ ಡಾಲಿ ಧನಂಜಯ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ 'ಪಾಪ್ ಕಾರ್ನ್ ಮಂಕಿ ಟೈಗರ್' ಎಂದು ಟೈಟಲ್ ಫಿಕ್ಸ್ ಆಗಿದೆ.
'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ಟ್ರೆಂಡ್ ಸೆಟ್ ಮಾಡುವಂತಹ ಎಲ್ಲ ಸೂಚನೆಗಳು ಕೊಡುತ್ತಿದೆ. ಚಿತ್ರದ ಟ್ರೆಂಡ್ ಆರಂಭದಿಂದಲೇ ಶುರುವಾಗಿದ್ದು, ಮೊಟ್ಟ ಮೊದಲ ಬಾರಿಗೆ ನಿರ್ದೇಶಕ ಸೂರಿ ತಮ್ಮ ಮೊಬೈಲ್ ಕವರ್ ಗೆ ಚಿತ್ರದ ಟೈಟಲ್ ಡಿಸೈನ್ ಹಾಕಿಕೊಂಡಿದ್ದಾರೆ. ಶಿವಣ್ಣ ಅದನ್ನು ಅಭಿಮಾನಿಗಳಿಗೆ ತೋರಿಸುವ ಮೂಲಕ ಟೈಟಲ್ ಅನ್ನು ಎಲ್ಲರಿಗೆ ತಲುಪಿಸುವಂತಹ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.
ಸದ್ಯ ದುನಿಯಾ ಸೂರಿ ಅವರ ಮೊಬೈಲ್ ಕವರ್ ನಲ್ಲಿ ಇರುವಂತಹ ಸಿನಿಮಾ ಟೈಟಲ್, ಇನ್ನು ಮುಂದೆ ಅಭಿಮಾನಿಗಳ ಮೊಬೈಲ್ ಕವರ್ ಗಳ ಮೇಲೆ ಬರಲು ಹೆಚ್ಚು ದಿನ ಏನು ಬೇಕಾಗುವುದಿಲ್ಲ. ಶಿವಣ್ಣ ಶುರು ಮಾಡಿರುವ ಈ ಟ್ರೆಂಡ್ ಇನ್ನು ಮುಂದೆ ಯಾವ ರೀತಿಯಲ್ಲಿ ಟ್ರೆಂಡ್ ಸೆಟ್ ಮಾಡುತ್ತದೆ ಎನ್ನುವುದು ಈಗ ಕುತೂಹಲ ವಿಚಾರವಾಗಿದೆ. ಟೈಟಲ್ ನಿಂದಲೇ ಭಾರೀ ಕುತೂಹಲ ಮೂಡಿಸುತ್ತಿರುವ ಈ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ.

ದುನಿಯಾ ಸೂರಿ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಧನಂಜಯ ನಾಯಕನಾಗಿ ಹಾಗೂ ನಿವೇದಿತಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ 'ಟಗರು' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಕೆಪಿ ಶ್ರೀಕಾಂತ್ ಅವರೇ 'ಪಾಪ್ ಖಾನ್ ಮಂಕಿ ಟೈಗರ್' ಸಿನಿಮಾವನ್ನು ಪ್ರೊಡ್ಯೂಸ್ ಮಾಡಲಿದ್ದಾರೆ. 'ಟಗರು' ಸಿನಿಮಾ ನೂರು ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದೆ.


Click it and Unblock the Notifications











