ಸ್ಯಾಂಡಲ್‌ವುಡ್‌ನಲ್ಲಿ 'ಅಬ್ಬರ' ಶುರು ಮಾಡಿದ ಡೈನಾಮಿಕ್ ಪ್ರಿನ್ಸ್
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ 'ಅಬ್ಬರ' ಶುರು ಮಾಡಿದ್ದಾರೆ. ಹೌದು, ಪ್ರಜ್ವಲ್ ನಟನೆಯ ಹೊಸ ಚಿತ್ರ ಆರಂಭವಾಗಿದ್ದು, ಈ ಚಿತ್ರಕ್ಕೆ 'ಅಬ್ಬರ' ಎಂದು ಹೆಸರಿಡಲಾಗಿದೆ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಪ್ರಜ್ವಲ್ ನಟನೆಯ ಹೊಸ ಚಿತ್ರದ ಟೈಟಲ್ ಅನಾವರಣ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹ್ಯಾಟ್ರಿಕ್ ಹೀರೋ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಪ್ರಜ್ವಲ್ ದೇವರಾಜ್ ಸದ್ಯ 'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾ ಮಾಡ್ತಿದ್ದು, ಅದರ ಜೊತೆಗೆ 'ಅರ್ಜುನ್ ಗೌಡ' ಹಾಗೂ 'ವೀರಂ' ಎಂಬ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಅಂದ್ಹಾಗೆ, ಅಬ್ಬರ ಚಿತ್ರಕ್ಕೆ ನಿರ್ದೇಶಕ ಕೆ ರಾಮ್ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ನಿರ್ದೇಶಕ ರಾಮ್ ನಾರಾಯಣ್ ಕುರಿತು ಹೇಳಬೇಕಾದರೆ, ಪ್ರಭಾಕರ್ ಮಗ ವಿನೋದ್ ಪ್ರಭಾಕರ್ ಜೊತೆ 'ಟೈಸನ್' ಮತ್ತು 'ಕ್ರ್ಯಾಕ್' ಎಂಬ ಎರಡು ಚಿತ್ರ ಮಾಡಿದ್ದಾರೆ. ಚಿರಂಜೀವಿ ಸರ್ಜಾ ನಟನೆಯ ಕೊನೆ ಸಿನಿಮಾ 'ರಾಜಮಾರ್ತಂಡ' ಚಿತ್ರಕ್ಕೂ ಇವರೇ ಆಕ್ಷನ್ ಕಟ್ ಹೇಳಿದ್ದಾರೆ.
ಸದ್ಯ ಲಾಕ್‌ಡೌನ್‌ನಿಂದ ಬ್ರೇಕ್ ತೆಗೆದುಕೊಂಡಿರುವ ಡೈನಾಮಿಕ್ ಪ್ರಿನ್ಸ್ ಇತ್ತೀಚಿಗಷ್ಟೆ ಡಿ ಬಾಸ್ ದರ್ಶನ್ ಜೊತೆ ಬೈಕ್ ರೈಡ್ ಹೋಗಿದ್ದರು. ಬೆಂಗಳೂರಿನಿಂದ ಮಡಿಕೇರಿವರೆಗೂ ಬೈಕ್‌ಗಳಲ್ಲಿ ಸವಾರಿ ಮಾಡಿ ಸ್ನೇಹಿತರ ಜೊತೆ ಎಂಜಾಯ್ ಮಾಡಿದ್ದರು.


Click it and Unblock the Notifications











