ಶ್ರೀಮುರಳಿ 'ಭರಾಟೆ' ಚಿತ್ರಕ್ಕೆ ಜೋಶ್ ಹೆಚ್ಚಿಸಿದ ಹ್ಯಾಟ್ರಿಕ್ ಹೀರೋ
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಭರಾಟೆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹಾಡುಗಳು ಮೂಲಕ ಸದ್ದು ಮಾಡುತ್ತಿರುವ ಭರಾಟೆ ಈಗ ಸರ್ಪ್ರೈಸ್ ಸುದ್ದಿಯೊಂದನ್ನ ಹೊರಹಾಕಿದೆ.
ಹೌದು, ಭರಾಟೆ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಹಿನ್ನಲೆ ಧ್ವನಿ ನೀಡಿರುವ ಶಿವಣ್ಣ ಭರಾಟೆಗೆ ಶಕ್ತಿ ತುಂಬಿದ್ದಾರೆ. ಶಿವಣ್ಣ ವಾಯ್ಸ್ ಕೊಟ್ಟಿರುವ ಫೋಟೋಗಳು ಈಗಾಗಲೇ ಬಹಿರಂಗವಾಗಿದೆ.
ಇದಕ್ಕೂ ಮುಂಚೆ 'ಮಫ್ತಿ' ಚಿತ್ರದಲ್ಲಿ ಶ್ರೀಮುರಳಿ ಜೊತೆ ನಟಿಸಿದ್ದ ಶಿವರಾಜ್ ಕುಮಾರ್ ಈಗ ಶ್ರೀಮುರಳಿ ಅವರ ಚಿತ್ರಕ್ಕೆ ಧ್ವನಿ ನೀಡುವ ಮೂಲಕ ಮತ್ತೊಮ್ಮೆ ಜೊತೆಯಾಗಿದ್ದಾರೆ.

ಮಫ್ತಿ ಸಿನಿಮಾದ ಬಳಿಕ ಶ್ರೀಮುರಳಿ ನಟನೆಯ ಚಿತ್ರ ಇದಾಗಿದ್ದು, ಶ್ರೀಲೀಲಾ ನಾಯಕಿಯಾಗಿದ್ದಾರೆ. ನಾಯಕಿಗೆ ಇದು ಎರಡನೇ ಸಿನಿಮಾ. ಇದಕ್ಕು ಮುಂಚೆ ಇನ್ನು ತೆರೆಕಾಣದ ಕಿಸ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಭರ್ಜರಿ ಚಿತ್ರದ ನಂತರ ಚೇತನ್ ಕುಮಾರ್ ನಿರ್ದೇಶನ ಮಾಡಿರುವ ಈ ಚಿತ್ರ ಹಲವು ವಿಷಯಗಳಿಂದ ಭಾರಿ ಕುತೂಹಲ ಮೂಡಿಸಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಸೆಪ್ಟೆಂಬರ್ 27ಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.


Click it and Unblock the Notifications











