For Quick Alerts
  ALLOW NOTIFICATIONS  
  For Daily Alerts

  ಮಾಜಿ ಸಚಿವ ಈಶ್ವರಪ್ಪ ಭೇಟಿ ಮಾಡಿದ ಶಿವರಾಜ್ ಕುಮಾರ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೈಸೂರಿನಲ್ಲಿಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಅವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

  ಮೈಸೂರಿನಲ್ಲಿ ಇದ್ದಕ್ಕಿದ್ದಂತೆ ಈಶ್ವರಪ್ಪರನ್ನು ಭೇಟಿ ಮಾಡಿದ ಶಿವಣ್ಣ

  ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ಪೂಜೆಗಾಗಿ ತೆರಳಲು ಬಂದಿದ್ದ ಮಾಜಿ ಕೆ.ಎಸ್ ಈಶ್ವರಪ್ಪ, ಹೋಟೆಲ್‌ವೊಂದರಲ್ಲಿ ತಿಂಡಿ ಮಾಡಿದರು. ಅದೇ ಹೋಟೆಲ್‌ನಲ್ಲಿ ನಟ ಶಿವರಾಜ್ ಕುಮಾರ್ ಸಹ ಇದ್ದರು. ಹಾಗಾಗಿ, ಪರಸ್ಪರ ಭೇಟಿ ಮಾಡಿ ಕೆಲ ಸಮಯ ಮಾತನಾಡಿದರು.

  ಶಿವಣ್ಣನ 123ನೇ ಸಿನಿಮಾದ ಹೆಸರು ಅನಾವರಣಗೊಳಿಸಿದ ಪುನೀತ್ಶಿವಣ್ಣನ 123ನೇ ಸಿನಿಮಾದ ಹೆಸರು ಅನಾವರಣಗೊಳಿಸಿದ ಪುನೀತ್

  ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಳಿಕ ಕೆಎಸ್ ಈಶ್ವರಪ್ಪ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಬಿಜೆಪಿಯ ಪ್ರಬಲ ನಾಯಕ ಈಶ್ವರಪ್ಪ ಅವರಿಗೆ ಸೂಕ್ತ ಸ್ಥಾನಮಾನ ಸಿಗುವುದೇ ಎಂಬ ಚರ್ಚೆಯೂ ನಡೆಯುತ್ತಿದೆ.

  ಶಿವರಾಜ್ ಕುಮಾರ್ ಅವರು ಶಿವಮೊಗ್ಗ ಜಿಲ್ಲೆಯ ಅಳಿಯ. ಈಶ್ವರಪ್ಪ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ಇದಕ್ಕೂ ಮುಂಚೆ ಲೋಕಸಭೆ ಚುನಾವಣೆ ವೇಳೆ ಶಿವಣ್ಣನ ಪತ್ನಿ ಗೀತಾ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಆಗ ಪತ್ನಿ ಪರವಾಗಿ ಶಿವರಾಜ್ ಕುಮಾರ್ ಸಹ ಪ್ರಚಾರ ಮಾಡಿದ್ದರು.

  ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ-2' ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರ್ತಿದೆ. ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ 'ಬೈರಾಗಿ' ಚಿತ್ರೀಕರಣ ಆಗ್ತಿದೆ. ಇದಾದ ಬಳಿಕ ಮತ್ತಷ್ಟು ಸಿನಿಮಾಗಳು ಸಾಲಿನಲ್ಲಿದೆ.

  English summary
  Kannada actor Shiva Rajkumar meet BJP Senior leader KS Eshwarappa at mysore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X